ಮಂಗಳವಾರ/ ಗುರುವಾರ ಚಿಕನ್‌ ತಿನ್ನೋಲ್ವಾ? ಇದನ್ನು ಟ್ರೈ ಮಾಡಿ ಹಾಗಾದರೆ!

First Published | Dec 3, 2020, 5:30 PM IST

ಭಾರತದಲ್ಲಿನ ಹೆಚ್ಚಿನ ಮಾಂಸಹಾರಿಗಳು ವಾರದ ಕೆಲವು ದಿನಗಳಲ್ಲಿ ನಾನ್‌ವೆಜ್‌ ತಿನ್ನುವುದಿಲ್ಲ. ಉದಾಹರಣೆಗೆ ಕೆಲವರು ಗುರುವಾರ, ಇನ್ನು ಕೆಲವರು ಶುಕ್ರವಾರ. ಹೀಗೆ ನಾನ್‌ವೆಜ್‌ ಪದಾರ್ಥಗಳನ್ನು ಬಳಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಚಿಕನ್‌ ಮಿಸ್‌ ಮಾಡಿಕೊಳ್ಳತ್ತೀರಾ? ಹಾಗಾದರೆ ಇಲ್ಲಿದೆ ನೋಡಿ ಚಿಕನ್‌ ಬದಲಿಗೆ ಅದೇ ರುಚಿ ನೀಡುವ ಸಂಪೂರ್ಣ ಸಸ್ಯಹಾರಿ ಆಹಾರ. ಯಾವುದದು?

ಇಲ್ಲಿದೆ ನೋಡಿ ಚಿಕನ್‌ ಬದಲಿಗೆ ಅದೇ ರುಚಿ ನೀಡುವ ಸಂಪೂರ್ಣ ಸಸ್ಯಹಾರಿ ಆಹಾರ.
ನಾನ್‌ವೆಜ್‌ ತಿನ್ನದ ದಿನದಲ್ಲಿ ಚಿಕನ್‌ ಬಿರಿಯಾನಿ ತಿನ್ನಬೇಕೆಂದು ನಿಮಗೆ ಅನಿಸಿದರೆ, ಸೋಯಾಬೀನ್ ಬಿರಿಯಾನಿ ತಯಾರಿಸಬಹುದು. ಬಿರಿಯಾನಿ ಮಾಡುವಾಗ ಎಲ್ಲಾ ಮಸಾಲೆಗಳ ಜೊತೆ ಚಿಕನ್ ಬದಲಿಗೆ ಸೋಯಾ ಚಂಕ್ಸ್ ಸೇರಿಸಿದರೆ ಟೇಸ್ಟಿ ಬಿರಿಯಾನಿ ರೆಡಿ.
Tap to resize

ಚಿಕನ್‌ ಮಸಾಲಾ ಮಿಸ್‌ ಮಾಡಿಕೊಳ್ಳುತ್ತಿದ್ದೀರಾ? ಚಿಕನ್‌ ಮಸಾಲೆಯ ರೆಸಿಪಿ ಬಳಸಿ ಸೋಯಾಬೀನ್‌ನ ಚಂಕ್ಸ್‌ನಿಂದ ಗ್ರೇವಿ ತಯಾರಿಸಿ ನೋಡಿ.
ರೋಲ್‌ಗಳಲ್ಲಿ ಸಹ ಮಾಂಸದ ತುಂಡುಗಳ ಬದಲಿಗೆ ಸೋಯಾಚಂಕ್ಸ್ ಉಪಯೋಗಿಸಿದರೆ ಸೇಮ್‌ ಚಿಕನ್‌ ರುಚಿಯನ್ನೇ ನೀಡುತ್ತದೆ.
ಚಿಕನ್ ಮೊಮೊಸ್‌ಗೆ ಸಹ ಸೋಯಾಚಂಕ್ಸ್‌ ಸೇರಿಸಬಹುದು. ಮೊಮೊಸ್‌ ಒಳಗೆಮಾಸಾಲೆ ಜೊತೆ ಸೋಯಾ ತುಂಬಿಸಿದರೆ ಆಯಿತು.
ಸೋಯಾ ಚಾಪ್ ಸಹ ಟ್ರೈ ಮಾಡಿ ನೋಡಿ. ಸೇಮ್‌ ನಾನ್‌ವೆಜ್‌ ತಿಂದ ಹಾಗೆ ಅನಿಸುವುದು.
ಚಿಕನ್ ಕಬಾಬ್‌ಗಳನ್ನು ತಯಾರಿಸಿದ ರೀತಿಯಲ್ಲಿಯೇ ನೀವು ಸೋಯಾ ಕಬಾಬ್‌ಗಳನ್ನು ತಯಾರಿಸಬಹುದು. ಸೋಯಾಬೀನ್‌ನಲ್ಲಿ ಕಬಾಬ್ ಮಸಾಲಾ ಸೇರಿಸಿ.
ಸೋಯಾಬೀನ್ ಹೊರತುಪಡಿಸಿ, ನೀವು ಹಲಸಿನ ಕಾಯಿಗಳನ್ನು ಸಹ ಬಳಸಬಹುದು. ಚಿಕನ್‌ ಸ್ಟೈಲ್‌ನ ಹಲಸಿನ ಕಾಯಿಯ ಕಬಾಬ್‌ ಸಹ ಚಿಕನ್‌ ರುಚಿಯನ್ನೇ ಹೊಂದಿರುತ್ತದೆ.

Latest Videos

click me!