15 ನಿಮಿಷದಲ್ಲಿ ತಯಾರಾಗುವ ಬ್ಯಾಚುಲರ್ ಮೊಟ್ಟೆ ಬಿರಿಯಾನಿ; ಫೈವ್‌ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗಲ್ಲ!

Published : Aug 21, 2025, 12:31 PM IST

Egg Recipe: ಕಡಿಮೆ ಸಮಯ ಮತ್ತು ಸಾಮಗ್ರಿಗಳಲ್ಲಿ ರುಚಿಕರವಾದ ಮೊಟ್ಟೆ ಬಿರಿಯಾನಿ ತಯಾರಿಸುವ ಸುಲಭ ವಿಧಾನ. ಹೊಸಬರಿಗೂ ಸುಲಭವಾಗಿ ಅರ್ಥವಾಗುವಂತೆ ಹಂತ ಹಂತವಾಗಿ ವಿವರಿಸಲಾಗಿದೆ.

PREV
15

ಬ್ಯಾಚುಲರ್‌ಗಳು ಕಡಿಮೆ ಸಮಯದಲ್ಲಿ ಸಿದ್ಧವಾಗುವ ಅಡುಗೆಯನ್ನೇ ತಯಾರಿಸುತ್ತಾರೆ. ಅದರಲ್ಲಿಯೂ ಅದು ರುಚಿಯಾಗಿರಬೇಕು ಮತ್ತು ಅಡುಗೆ ತಯಾರಿಸಲು ಕಡಿಮೆ ಸಾಮಾಗ್ರಿಯೇ ಬಳಸಬೇಕು. ಇಂದು ನಾವು ನಿಮಗೆ ಬ್ಯಾಚುಲರ್‌ಗಳು ತಯಾರಿಸುವ ರುಚಿಕರವಾದ ಮೊಟ್ಟೆ ಬಿರಿಯಾನಿ ತಯಾರಿಸೋದು ಹೇಗೆ ಅಂತ ನೋಡೋಣ ಬನ್ನಿ.

25

ಮೊಟ್ಟೆ ಬಿರಿಯಾನಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಮೊಟ್ಟೆ: 4, ಅಕ್ಕಿ: 1 ಕಪ್, ತುಪ್ಪ ಮತ್ತು ಎಣ್ಣೆ: ತಲಾ 2 ಟೀ ಸ್ಪೂನ್, ಈರುಳ್ಳಿ: 1, ಪುಲಾವ್ ಎಲೆ: 2, ಮೊಟ್ಟೆ ಬಿರಿಯಾನಿ ಮಸಾಲೆ: 2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಟೊಮೆಟೋ: 1, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, 1 ಹಸಿ ಮೆಣಸಿನಕಾಯಿ, 2 ಟೀ ಸ್ಪೂನ್ ಮೊಸರು, 4 ಎಲೆ ಪುದಿನಾ, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು

35

ಮೊದಲಿಗೆ ಒಲೆ ಮೇಲೆ ಕುಕ್ಕರ್ ಇರಿಸಿಕೊಂಡು ಎಣ್ಣೆ ಮತ್ತು ತುಪ್ಪ ಹಾಕಿಕೊಳ್ಳಿ. ನಂತರ ಇದಕ್ಕೆ ಪುಲಾವ್ ಎಲೆ, ಜೀರಿಗೆ ಸೇರಿಸಿಕೊಳ್ಳಬೇಕು. ತದನಂತರ ಕತ್ತರಿಸಿಕೊಂಡಿರುವ ಈರುಳ್ಳಿ, ಟೊಮೆಟೋ ಸೇರಿಸಿಕೊಂಡು ಹಸಿ ವಾಸನೆ ಹೋಗೋವರೆಗೂ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಅಚ್ಚ ಖಾರದ ಪುಡಿ, ಮೊಸರು, ಪುದಿನಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.

45

ಮಸಾಲೆ ಸುತ್ತಲೂ ಎಣ್ಣೆ ಬಿಡಲು ಆರಂಭಿಸಿದಾಗ ತೊಳೆದಿಟ್ಟುಕೊಂಡಿರುವ ಅಕ್ಕಿಯನ್ನು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಎರಡು ಕಪ್ ನೀರು ಸೇರಿಸಿಕೊಂಡು ನಾಲ್ಕರಿಂದ 5 ನಿಮಿಷ ಬೇಯಿಸಿಕೊಳ್ಳಿ. ಈಗ ನಾಲ್ಕು ಮೊಟ್ಟೆಯನ್ನು ಒಡೆದು ಕುದಿಯುತ್ತಿರುವ ರೈಸ್‌ಗೆ ಹಾಕಿಕೊಳ್ಳಿ. ನಂತರ ಮೇಲೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿ. ನಂತರ ಕುಕ್ಕರ ಮುಚ್ಚಳ ಮುಚ್ಚಿ ಒಂದು ವಿಷಲ್ ಕೂಗಿಸಿಕೊಳ್ಳಿ.

55

ಕುಕ್ಕರ್ ಹಬೆ ಸಂಪೂರ್ಣವಾಗಿ ಹೋದ್ಮೇಲೆ ಮುಚ್ಚಳ ಓಪನ್ ಮಾಡಿದ್ರೆ ರುಚಿಯಾದ ಮೊಟ್ಟೆ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ದಾಲ್ ಜೊತೆ ಈ ಮೊಟ್ಟೆ ಬಿರಿಯಾನಿಯನ್ನು ಸವಿಯಬಹುದು. ಹೊಸದಾಗಿ ಅಡುಗೆ ಮಾಡಲು ಶುರು ಮಾಡಿದವರು ಈ ಮೊಟ್ಟೆ ಬಿರಿಯಾನಿಯನ್ನು ತಯಾರಿಸಬಹುದು.

ಮೊಟ್ಟೆ ಬಿರಿಯಾನಿ ತಯಾರಿಸುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ… ಲಿಂಕ್

Read more Photos on
click me!

Recommended Stories