15 ನಿಮಿಷದಲ್ಲಿ ರುಚಿಕರ ಚಿಕನ್ ಸುಕ್ಕಾ ಮಾಡುವ ಸಿಂಪಲ್ ರೆಸಿಪಿ!

First Published | Sep 17, 2024, 10:00 PM IST

ಕೆಲವೊಮ್ಮೆ ತರಕಾರಿ, ಬೇಳೆ ಸಾಂಬಾರ್, ರಸಂ ತಿಂದು ಬೇಸರವಾಗಿದ್ದರೆ ಮಾಂಸದಡುಗೆ ತಿನ್ನುವ ಆಸೆ ಆಗುತ್ತದೆ. ಆದರೆ ಚಿಕನ್ ಮಾಡಲು ನೂರೆಂಟು ಮಸಾಲೆ ಜೊತೆ ತುಂಬಾ ಸಮಯ ಬೇಕು ಅಂತ ಮಾಡಲು ಹಿಂದೇಟು ಹಾಕುತ್ತಾರೆ.

ಇಂದು ನಾವು ನಿಮಗೆ ಕಡಿಮೆ ಪದಾರ್ಥ ಬಳಸಿ, ಜಸ್ಟ್ 15 ನಿಮಿಷದಲ್ಲಿ ಹೇಗೆ ತಯಾರಿಸಬೇಕು ಅಂತ ಹೇಳುತ್ತಿದ್ದೇವೆ. ಹೊಸ ರುಚಿ ಇಷ್ಟಪಡೋರು, ಪ್ರತಿನಿತ್ಯ ಒಂದೇ ಅಡುಗೆ ತಿಂದವರು ಸಹ ಈ ರೆಸಿಪಿ ಟ್ರೈ ಮಾಡಬಹುದು. ಚಿಕನ್ ಸುಕ್ಕಾ ತಯಾರಿಸಲು ನಿಮಗೆ ಕೇವಲ 15 ನಿಮಿಷ ಮಾತ್ರ ಬೇಕಾಗುತ್ತದೆ. ಚಿಕನ್ ಸುಕ್ಕಾ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಚಿಕನ್ ಸುಕ್ಕಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್: 500 ಗ್ರಾಂ, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಟೊಮೆಟೋ: ಒಂದು (ದೊಡ್ಡದು), ಚಿಕನ್ ಮಸಾಲಾ: 1 ಟೀ ಸ್ಪೂನ್, ಕಾಯಿ ತುರಿ: ಒಂದು ಕಪ್, ಅಚ್ಚ ಖಾರದ ಪುಡಿ: ಒಂದು ಟೀ ಸ್ಪೂನ್, ಅರಿಶಿನ: 1/4 ಟೀ ಸ್ಪೂನ್, ಎಣ್ಣೆ: ಎರಡು ಟೀ ಸ್ಪೂನ್, ಹಸಿ ಮೆಣಸಿನಕಾಯಿ: ಎರಡು, ಜೀರಿಗೆ: ಒಂದು ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು

Tap to resize

ಚಿಕನ್ ಸುಕ್ಕಾ ಮಾಡುವ ವಿಧಾನ

ಮೊದಲಿಗೆ ನಿಮಗೆ ಬೇಕಾದ ಸೈಜ್‌ನಲ್ಲಿ ಚಿಕನ್ ಕತ್ತರಿಸಿಕೊಂಡು ಬಿಸಿನೀರಿನಲ್ಲಿ ತೊಳೆದುಕೊಂಡು ಎತ್ತಿಟ್ಟುಕೊಳ್ಳಿ. ಆ ಬಳಿಕ ಟೊಮೆಟೋ, ಹಸಿಮೆಣಸಿನಕಾಯಿ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಬೇಕು.

ತದನಂತರ ಒಲೆ ಆನ್ ಮಾಡಿಕೊಂಡು ಪಾತ್ರೆ ಇರಿಸಿಕೊಳ್ಳಿ. ಈಗ ಇದಕ್ಕೆ ಎರಡು ಟೀ ಸ್ಪೂನ್‌ ಅಡುಗೆ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾಗ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ನಂತರ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ. ಬಳಿಕ ಟೊಮೆಟೋ ಸೇರಿಸಿ ಸಾಫ್ಟ್ ಆಗೋವರೆಗೂ ಕಲಿಸಿಕೊಳ್ಳಿ. ತದನಂತರ ಕತ್ತರಿಸಿಕೊಂಡಿರುವ ಚಿಕನ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಆನಂತರ ಚಿಕನ್ ಮಸಾಲಾ, ಅಚ್ಚ ಖಾರದ ಪುಡಿ, ಆರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ  5 ನಿಮಿಷ ಬೇಯಿಸಬೇಕು.

chicken curry

ಐದು ನಿಮಿಷದ ಬಳಿಕ ಪಾತ್ರೆಯ ಮುಚ್ಚಳ ತೆಗೆದು ಕಾಯಿತುರಿಯನ್ನು ಹಾಕಿ, ಎಲ್ಲವರನ್ನು ಮಿಕ್ಸ್ ಮಾಡಿ. ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿ ಮತ್ತೆ ಐದು ನಿಮಿಷ ಬೇಯಿಸಿದ್ರೆ ಸವಿಯಲು ರುಚಿಯಾದ ಚಿಕನ್ ಸುಕ್ಕಾ ರೆಡಿ. (ಗಮನಿಸಿ: ಚಿಕನ್ ಸುಕ್ಕಾ ಮಾಡಲು ಯಾವುದೇ ಕಾರಣಕ್ಕೂ ನೀರು ಸೇರಿಸಬಾರದು. ನೀರು ಸೇರಿಸಿದರೆ ಅದು ಕರ್ರಿಯಾಗುತ್ತದೆ) ಬಿಸಿಯಾದ ಅನ್ನ, ಚಪಾತಿ, ದೋಸೆ, ನೀರ್‌ದೋಸೆ ಹಾಗೂ ರೊಟ್ಟಿಗೆ ಚಿಕನ್ ಸುಕ್ಕಾ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.

Latest Videos

click me!