ಬೆಣ್ಣೆಯನ್ನು ಸಂಗ್ರಹಿಸುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಇದನ್ನು ಫ್ರಿಡ್ಜ್‌ನಲ್ಲಿಟ್ಟಾಗ ತುಂಬಾ ಗಟ್ಟಿಯಾಗುತ್ತೆ ಮತ್ತು ಹೊರಗೆ ಇಟ್ಟಾಗ ಕರಗಲು ಪ್ರಾರಂಭಿಸುತ್ತದೆ. ನೀವು ಸಹ ಇದರಿಂದ ತೊಂದರೆಗೀಡಾಗಿದ್ದರೆ, ಇಲ್ಲಿದೆ ನಿಮಗಾಗಿ ಸಿಂಪಲ್ ಟಿಪ್ಸ್.
ಬೆಳಗಿನ ಉಪಾಹಾರಕ್ಕಾಗಿ (breakfast) ನೀವು ಪರೋಟಾ ಅಥವಾ ಟೋಸ್ಟ್ ತಿನ್ನಲು ಬಯಸಿದರೆ, ಬೆಣ್ಣೆಯ ಮಹತ್ವ ಗೊತ್ತಾಗಿರುತ್ತೆ. ಆದರೆ ನೀವು ಪ್ರತಿದಿನ ಬೆಳಿಗ್ಗೆ ಅದನ್ನು ತಿನ್ನುವ ಮೊದಲು ಚಾಕು ಮತ್ತು ಚಮಚದಿಂದ ಬ್ರಷ್ ಮಾಡಬೇಕೇ? ನಿಮ್ಮ ಉತ್ತರ ಹೌದು ಎಂದಾದರೆ, ಚಿಂತಿಸಬೇಡಿ ಏಕೆಂದರೆ ಈ ಸಮಸ್ಯೆ ಪರಿಹರಿಸಲು ಇಲ್ಲಿದೆ ಟಿಪ್ಸ್.
28
ವಾಸ್ತವವಾಗಿ, ಬೆಣ್ಣೆಯನ್ನು ಫ್ರಿಜ್ನಲ್ಲಿ (keeping butter in fridge) ಇಡೋದ್ರಿಂದ ಅದು ತುಂಬಾ ಹಾರ್ಡ್ ಆಗುತ್ತೆ. ನಂತರ , ಬಳಸಬೇಕು ಅಂದ್ರೆ ಗ್ಯಾಸ್ ಮೇಲೆ ಇಡಬೇಕು ಅಥವಾ ಚಾಕುವಿನಿಂದ ಉಜ್ಜುವ ಮೂಲಕ ಮೃದುಗೊಳಿಸಬೇಕಾಗುತ್ತದೆ. ಬೆಣ್ಣೆಯನ್ನು ಫ್ರಿಜ್ನಲ್ಲಿ ಇಡುವ ತಪ್ಪನ್ನು ಸಾಮಾನ್ಯವಾಗಿ ಅದನ್ನು ಸಂಗ್ರಹಿಸುವ ಸರಿಯಾದ ಮಾರ್ಗ ತಿಳಿದಿಲ್ಲದ ಜನರು ಮಾಡುತ್ತಾರೆ. ನೀವು ಅದೇ ತಪ್ಪನ್ನು ಮಾಡುತ್ತಿದ್ದರೆ, ಇಂದು ಫ್ರಿಡ್ಜ್ ಹೊರಗೆ ಬೆಣ್ಣೆಯನ್ನು ತಾಜಾವಾಗಿಡುವ ಸಂಪೂರ್ಣ ಸುಲಭ ಮಾರ್ಗವನ್ನು ಹೇಳುತ್ತಿದ್ದೇವೆ.
38
ಫ್ರಿಜ್ ನ ಹೊರಗೆ ಬೆಣ್ಣೆಯನ್ನು ಸಂಗ್ರಹಿಸಿ
ಬೆಣ್ಣೆಯನ್ನು ತುಂಬಾ ವಿಭಿನ್ನವಾಗಿ ತಯಾರಿಸಲಾಗುತ್ತದೆ. ಇದು ಒಂದರಿಂದ ಎರಡು ವಾರಗಳವರೆಗೆ ಫ್ರಿಡ್ಜ್ ಇಲ್ಲದೆ ಬಾಳಿಕೆ ಬರುವಂತಹ ಏಕೈಕ ಡೈರಿ ಉತ್ಪನ್ನ (diary product). ಇದು ಸುಮಾರು 80 ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುತ್ತದೆ, ಈ ಕಾರಣದಿಂದಾಗಿ ಇದು ತುಂಬಾ ಕಡಿಮೆ ಪ್ರಮಾಣದ ನೀರನ್ನು ಹೊಂದಿರುತ್ತದೆ. ಜೊತೆಗೆ ಸ್ವಲ್ಪ ಪ್ರಮಾಣದ ಉಪ್ಪನ್ನು ಸೇರಿಸಿರೋದ್ರಿಂದ ಇದು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ ಮತ್ತು ಫ್ರಿಡ್ಜ್ ಹೊರಗೆ ಸಂಗ್ರಹಿಸಲು ಸೂಕ್ತ.
48
ಬೆಣ್ಣೆಯನ್ನು ಫ್ರಿಜ್ ಇಲ್ಲದೇ ತಾಜಾವಾಗಿ ಇರಿಸಿ
ಬೆಣ್ಣೆಯನ್ನು (butter) ಹೊರಗಿಡಲು, ನೀವು ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಇಡಬಹುದು ಮತ್ತು ಸಾಮಾನ್ಯ ತಾಪಮಾನದ ಸ್ಥಳದಲ್ಲಿ ಇಡಬಹುದು. ಅಡುಗೆಮನೆ ತಾಪಮಾನವು ಕೋಣೆಯ ಉಳಿದ ಭಾಗಗಳಿಗಿಂತ ಬೆಚ್ಚಗಿದ್ದರೆ, ಅದನ್ನು ಅಲ್ಲಿಂದ ತೆಗೆದು ಮತ್ತೊಂದು ಕೋಣೆಯಲ್ಲಿ ಇರಿಸಿ. ಇದನ್ನು ಮಾಡುವಾಗ, ಇದು ಸೂರ್ಯನ ಕಿರಣಗಳೊಂದಿಗೆ ನೇರ ಸಂಪರ್ಕದಲ್ಲಿಲ್ಲ ಎಂಬುದನ್ನು ನೆನಪಿನಲ್ಲಿಡಿ.
58
ಅಲ್ಯೂಮಿನಿಯಂ ಫಾಯಿಲ್ ನಲ್ಲಿ ಬೆಣ್ಣೆ ಇಡಿ
ಬೆಣ್ಣೆಯನ್ನು ತಾಜಾವಾಗಿಡಲು ಅಲ್ಯೂಮಿನಿಯಂ ಫಾಯಿಲ್ (aluminium foil) ಬಳಸುವುದನ್ನು ಅನೇಕ ಜನರು ಪರಿಗಣಿಸಿದರೂ, ಬೆಣ್ಣೆಯನ್ನು ಎಂದಿಗೂ ದೀರ್ಘಕಾಲದವರೆಗೆ ಪ್ಯಾಕ್ ಮಾಡಬಾರದು. ಹಾಗೆ ಮಾಡುವುದರಿಂದ ಆಕ್ಸಿಡೀಕರಣದಿಂದಾಗಿ ಬೆಣ್ಣೆ ರಾನ್ಸಿಡ್ ಆಗುವ ಅಪಾಯವಿದೆ.
68
ಬಟರ್ ಪೇಪರ್ ಎಸೆಯಬೇಡಿ
ಬೆಣ್ಣೆಯನ್ನು ನೇರವಾಗಿ ಮಡಕೆಯಲ್ಲಿ ಸಂಗ್ರಹಿಸುವುದು ಉತ್ತಮ, ಆದರೆ ಅದನ್ನು ಹೊದಿಕೆಯೊಂದಿಗೆ (butter paper) ಇರಿಸಿದರೆ ಇನ್ನೂ ಉತ್ತಮ. ಫ್ರಿಜ್ ನ ಹೊರಗೆ ತಾಜಾವಾಗಿಟ್ಟ ಬೆಣ್ಣೆಯನ್ನು ದೀರ್ಘಕಾಲದವರೆಗೆ ತಾಜಾವಾಗಿ ಇಡುವುದು ಸುಲಭ.
78
ಇದನ್ನ ಟ್ರೈ ಮಾಡಿ
ಶಾಖವು ತುಂಬಾ ಹೆಚ್ಚಾದರೆ, ಅದನ್ನು ಸೆರಾಮಿಕ್ ಅಥವಾ ಪಿಂಗಾಣಿ ಮಡಕೆಯಲ್ಲಿ ಹಾಕಿ ಮತ್ತು ಬೆಣ್ಣೆಯನ್ನು ಮೃದು ಮತ್ತು ತಾಜಾವಾಗಿಡಲು ನೀರಿನ ಬಟ್ಟಲಿನಲ್ಲಿ ಹಾಕಿ. ಹೀಗೆ ಮಾಡುವುದರಿಂದ, ಬೆಣ್ಣೆ ಕರಗುವುದನ್ನು ಮತ್ತು ಹಾಳಾಗುವುದನ್ನು ತಪ್ಪಿಸಲು ಅಗತ್ಯವಿರುವಷ್ಟು ತಂಪನ್ನು ಪಡೆಯುತ್ತದೆ.
88
ಮನೆಯಲ್ಲಿ ತಯಾರಿಸಿದ ಬೆಣ್ಣೆಯನ್ನು ಹೊರಗೆ ಸಂಗ್ರಹಿಸಬೇಡಿ
ಮನೆಯಲ್ಲಿ ತಯಾರಿಸಿದ ಬೆಣ್ಣೆಯನ್ನು ಹೆಚ್ಚು ಕಾಲ ತಾಜಾವಾಗಿಡಲು ಉಪ್ಪು ಇಲ್ಲದೆ ನೀವು ಸಂಗ್ರಹಿಸಬೇಕಾದರೆ, ಅದನ್ನು ಫ್ರಿಜ್ನಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಇಲ್ಲವಾದರೆ ಅದು ಹಾಳಾಗಿ ಹೋಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.