ಅಡುಗೆ ರುಚಿ ಹೆಚ್ಚಿಸೋ ಕಿಚನ್ ಸೀಕ್ರೆಟ್ಸ್, ರುಚಿ ರುಚಿಯಾಗಿ ಅಡುಗೆ ಮಾಡ್ಕೊಂಡು ತಿನ್ನಿ

First Published Aug 19, 2022, 3:15 PM IST

ರುಚಿಕರವಾದ ಅಡುಗೆ ಒಂದು ಕಲೆ. ಈ ಕಾರಣಕ್ಕಾಗಿಯೇ ಅಡುಗೆಯನ್ನು ಪಾಕ ಕಲೆ ಎಂದು ಕರೆಯಲಾಗುತ್ತದೆ. ಸಣ್ಣ ವಸ್ತುಗಳು ಆಹಾರದ ಸಂಪೂರ್ಣ ರುಚಿಯನ್ನು ಬದಲಾಯಿಸುತ್ತವೆ. ಅನೇಕ ಬಾರಿ ನಾವು ತಿಳಿಯದೆ ಅಂತಹ ತಪ್ಪುಗಳನ್ನು ಮಾಡುತ್ತೇವೆ, ಇದರಿಂದಾಗಿ ರುಚಿಕರವಾದ ಆಹಾರವನ್ನು ತಯಾರಿಸುವಲ್ಲಿ ಎಡವುತ್ತೇವೆ. ಇಂದು ನಾವು ನಿಮಗೆ ಅಡುಗೆಗೆ ಸಂಬಂಧಿಸಿದ ಕೆಲವು ' ಸೀಕ್ರೆಟ್ ಕಿಚನ್ ಟಿಪ್ಸ್' ಹೇಳುತ್ತಿದ್ದೇವೆ. ಈ ಸಲಹೆಗಳ ಸಹಾಯದಿಂದ, ನೀವು ಸುಲಭವಾಗಿ ರುಚಿಕರವಾದ ಆಹಾರ ತಯಾರಿಸಬಹುದು.

ಆಲೂಗಡ್ಡೆ

ಆಲೂಗಡ್ಡೆಯನ್ನು ಬಹುತೇಕ ಪ್ರತಿಯೊಂದು ಭಕ್ಷ್ಯದಲ್ಲಿಯೂ ಬಳಸಲಾಗುತ್ತದೆ. ನೀವು ಆಲೂಗಡ್ಡೆಯನ್ನು ಬೇಯಿಸಿ ಬಳಸಿದರೆ ಮತ್ತು ಅವುಗಳನ್ನು ಸಿಪ್ಪೆ ಸುಲಿಯಲು ಕಷ್ಟವೆನಿಸಿದರೆ, ಆಲೂಗಡ್ಡೆಯನ್ನು ಬೇಯಿಸುವಾಗ ನೀರಿಗೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ. ಇದು ಆಲೂಗಡ್ಡೆ ಸಿಪ್ಪೆಗಳನ್ನು (potato peel) ಸುಲಭವಾಗಿ ತೆಗೆದುಹಾಕುತ್ತದೆ. 

ಬಟಾಣಿ

ಆಹಾರದ ರುಚಿಯ ಜೊತೆಗೆ, ಪರಿಪೂರ್ಣ ಲುಕ್ ಸಹ ತುಂಬಾ ಮುಖ್ಯ. ನೀವು ಭಕ್ಷ್ಯದಲ್ಲಿ ಬಟಾಣಿಗಳನ್ನು (green peas) ಬಳಸುತ್ತಿದ್ದರೆ, ಅದರ ಹಸಿರು ಬಣ್ಣವನ್ನು ಕಾಪಾಡಿಕೊಳ್ಳಲು ಬಟಾಣಿ ಕುದಿಸುವಾಗ ನೀರಿಗೆ ಸ್ವಲ್ಪ ಸಕ್ಕರೆ ಸೇರಿಸಿ. ಇದು ಬಟಾಣಿಗಳ ಹಸಿರನ್ನು ಹಾಗೆಯೇ ಉಳಿಯುವಂತೆ ಕಾಪಾಡುತ್ತೆ. 

ಪನ್ನೀರ್

ಪನ್ನೀರ್ ಹೆಚ್ಚಿನ ಜನರು ಇಷ್ಟಪಡುತ್ತಾರೆ. ಪನೀರ್ ಮಸಾಲ ತಯಾರಿಸುವಾಗ ದೊಡ್ಡ ಸವಾಲು ಪನ್ನೀರ್ ಅನ್ನು ಮೃದುವಾಗಿಡುವುದು. ಪನೀರ್ ಅನ್ನು ಮೃದುವಾಗಿಡಲು, ಗ್ರೇವಿಯಲ್ಲಿ ಹಾಕುವ ಮೊದಲು ಪನ್ನೀರ್ ಅನ್ನು ಬಿಸಿ ಉಪ್ಪು ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಿ. ಇದು ಪನೀರ್ ನ್ನು ಮೃದುವಾಗಿರಿಸುತ್ತದೆ ಮತ್ತು ಗ್ರೇವಿಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. 

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳನ್ನು ತಯಾರಿಸುವಾಗ, ಅದರಲ್ಲಿ ಅನೇಕ ಬಾರಿ ನೊರೆ ಸೃಷ್ಟಿಯಾಗುತ್ತದೆ ಮತ್ತು ಬೇಳೆ ಕೂಡ ಚೆಲ್ಲಲು ಪ್ರಾರಂಭಿಸುತ್ತದೆ. ನೀವು ಅಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬೇಳೆಯನ್ನು ಕುದಿಸುವಾಗ ನೀರಿಗೆ 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ. ಇದು ದಾಲ್ ನಲ್ಲಿ ನೊರೆ ಬರೋದನ್ನು ತಡೆಯುತ್ತೆ.  

ಉಪ್ಮಾ, ಖೀರ್

ಉಪ್ಮಾ ಅಥವಾ ಖೀರ್ ತಯಾರಿಸುವಾಗ ಅವು ಕೆಲವೊಮ್ಮೆ ಸುಟ್ಟು ಹೋಗುತ್ತೆ. ನೀವು ಸಹ ಅಂತಹ ಸಮಸ್ಯೆಯನ್ನು ತುಂಬಾ ಸಲ ಎದುರಿಸಿದ್ದರೆ, ಉಪ್ಮಾ, ಖೀರ್ ನಂತಹ ಆಹಾರ ತಯಾರಿಸಲು ಯಾವಾಗಲೂ ದಪ್ಪ ತಳದ ಪಾತ್ರೆಯನ್ನು ಬಳಸಿ. ಇದರಿಂದ ಆಹಾರ ತಳ ಹತ್ತೋದಿಲ್ಲ.
 

ನೂಡಲ್ಸ್

ನೂಡಲ್ಸ್ ಮತ್ತು ಪಾಸ್ತಾದಂತಹ ಫಾಸ್ಟ್ ಫುಡ್  (fast food) ಅನ್ನು ಹೆಚ್ಚಿನ  ಮನೆಯಲ್ಲೂ ಮಾಡಲಾಗುತ್ತೆ. ಅನೇಕ ಬಾರಿ ನೂಡಲ್ಸ್ ಅಥವಾ ಪಾಸ್ತಾವನ್ನು ತಯಾರಿಸುವಾಗ ಅವು ಉದುರುದುರಾಗಿ ಬಾರದೇ, ಒಂದಕ್ಕೊಂದು ಅಂಟಿಕೊಂಡಿದ್ದರೆ, ತಿನ್ನಲು ಸಾಧ್ಯವಾಗೋದಿಲ್ಲ. ಹೀಗೆ ಆಗಬಾರದು ಅನ್ನೋದಾದರೆ, ಅವುಗಳನ್ನು ಕುದಿಸಿದ ನಂತರ, ತಕ್ಷಣವೇ ತಣ್ಣೀರಿನಲ್ಲಿ ಹಾಕೋದನ್ನು ಮರೆಯಬೇಡಿ.

ತರಕಾರಿಗಳು, ಮಸಾಲೆಗಳು - ಭಾರತೀಯ ಆಹಾರವನ್ನು ತಯಾರಿಸುವಾಗ ಎಲ್ಲಾ ಪದಾರ್ಥಗಳನ್ನು ಒಂದರ ನಂತರ ಒಂದು ಬಳಸೋದು ಬಹಳ ಮುಖ್ಯ. ಇದು ಸಂಭವಿಸದಿದ್ದರೆ, ಖಾದ್ಯದ ರುಚಿ ಕಡಿಮೆಯಾಗಬಹುದು. ಮೊದಲನೆಯದಾಗಿ, ಈರುಳ್ಳಿ, ನಂತರ ಬೆಳ್ಳುಳ್ಳಿ, ನಂತರ ಶುಂಠಿ, ಟೊಮೆಟೊ, ಮಸಾಲೆಗಳನ್ನು ಸೇರಿಸಬೇಕು, ಇದು ಖಾದ್ಯದ ರುಚಿಯನ್ನು ಹೆಚ್ಚಿಸುತ್ತೆ.
 

click me!