ಚಳಿಗಾಲದಲ್ಲಿ ರುಚಿಯಾದ ಆಲೂ ರಸಂ ಮಾಡುವ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಟೊಮೆಟೊ ಮತ್ತು ಹೆಚ್ಚು ತರಕಾರಿಗಳಿಲ್ಲದೆ ಕೇವಲ ಆಲೂಗಡ್ಡೆ, ಹುಣಸೆಹಣ್ಣು, ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ಈ ರಸಂ ಅಥವಾ ಸೂಪ್ ತಯಾರಿಸಬಹುದು.
ಚಳಿಗಾಲದಲ್ಲಿ ಏನೇ ತಿಂದ್ರೂ ಟೇಸ್ಟ್ ಬರಲ್ಲ ಅಂತ ಹೇಳ್ತಿರ್ತಾರೆ. ಇಂದು ನಾವು ನಿಮಗೆ ಟೊಮೆಟೋ ಹಾಕದೇ ಮತ್ತು ಹೆಚ್ಚು ತರಕಾರಿ ಬಳಸದೇ ರುಚಿಯಾದ ರಸಂ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ. ಇದು ರಸಂ ಅಥವಾ ಸೂಪ್ ರೀತಿಯಲ್ಲಿಯೂ ಯೂಸ್ ಮಾಡಬಹುದು.
25
ಆಲೂ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ: 1, ಹುಣಸೆಹಣ್ಣಿನ ರಸ: 5 ರಿಂದ 6 ಟೀ ಸ್ಪೂನ್, ಹಸಿಮೆಣಸಿನಕಾಯಿ: 1, ಪೆಪ್ಪರ್ ಪೌಡರ್: 1/2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಎಣ್ಣೆ: 1 ಟೀ ಸ್ಪೂನ್, ಕರೀಬೇವು: 5 ರಿಂದ 6 ಎಲೆ, ಬೆಳ್ಳುಳ್ಳಿ: 4 ರಿಂದ 5 ಎಸಳು ಕೋತಂಬರಿ ಸೊಪ್ಪು, ಚಿಟಿಕೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು
35
ಆಲೂ ರಸಂ ಮಾಡುವ ವಿಧಾನ
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು, ಪೆಪ್ಪರ್ ಪೌಡರ್ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಇದಾದ ಬಳಿಕ ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ.
ಒಂದು ಬೌಲ್‌ನ್ನು ಒಲೆ ಮೇಲಿಟ್ಟುಕೊಂಡು ಸ್ಟೌವ್ ಆನ್ ಮಾಡಿ. ನಂತರ ಇದಕ್ಕೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಆನಂತರ ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ. ಆನಂತರ ಹುಣಸೆಹಣ್ಣಿನ ರಸವನ್ನು ಸೇರಿಸಿಕೊಳ್ಳಬೇಕು.
55
ಆಲೂ ರಸಂ ಅಥವಾ ಆಲೂ ಸೂಪ್
ತದನಂತೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮಿಕ್ಸ್ ಮಾಡಿ. ಆನಂತರ ಆಲೂಗಡ್ಡೆ ಮಿಶ್ರಣ ಸೇರಿಸಿ. ಕೊನೆಯದಾಗಿ ಒಂದರಿಂದ ಒಂದೂವರೆ ಗ್ಲಾಸ್ ನೀರು ಹಾಕಿ ಕಡಿಮೆ ಉರಿಯಲ್ಲಿ 5 ರಿಂದ 7 ನಿಮಿಷ ಬೇಯಿಸಿದ್ರೆ ರುಚಿಯಾದ ಆಲೂ ರಸಂ ಅಥವಾ ಆಲೂ ಸೂಪ್ ರೆಡಿಯಾಗುತ್ತದೆ. ಬೇಕಿದ್ರೆ ಕೊನೆಯಲ್ಲಿ ಒಂದು ಟೀ ಸ್ಪೂನ್ ತುಪ್ಪ ಸೇರಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.