ಇಲಿಗಳನ್ನ ಫ್ರೈ ಮಾಡಿ ಸಮೋಸದಂತೆ ಬಾಯಿ ಚಪ್ಪರಿಸಿ ತಿಂತಿದ್ದಾರೆ ಜನ

First Published Apr 13, 2024, 4:37 PM IST

ಈ ದೇಶದಲ್ಲಿ ಅನ್ನದಲ್ಲಿ ಸುತ್ತಿ ಇಲಿಗಳನ್ನು ಪ್ರೈ ಮಾಡಿ ತಿನ್ನುತ್ತಾರೆ. ಸಮೋಸಾದಂತೆ ಕ್ರಿಸ್ಪಿಯಾದ ಈ ಆಹಾರವನ್ನು ಬಾಯಿ ಚಪ್ಪರಿಸಿ ತಿಂತಾರೆ ಅಲ್ಲಿನ ಜನ. ವೈರಲ್ ಆಗುತ್ತಿರೋ ಈ ಫೋಟೋ, ವಿಡಿಯೋ ಬಗ್ಗೆ ನೀವು ತಿಳಿಯಿರಿ. 

ವಿಚಿತ್ರ ಆಹಾರದ ವಿಷಯದಲ್ಲಿ, ಚೀನಾದ ನೆರೆಯ ದೇಶ ವಿಯೆಟ್ನಾಂ ಕೂಡ ಕಡಿಮೆಯಿಲ್ಲ. ಜನರು ಹಾವುಗಳಿಂದ ಹಿಡಿದು ಇಲಿಗಳವರೆಗೆ ಎಲ್ಲವನ್ನೂ ತಿನ್ನುತ್ತಾರೆ. ಇಲಿಗಳಿಂದ ಮಾಡಿದ ಖಾದ್ಯದ ವೀಡಿಯೊ ಸದ್ಯ ಹೆಚ್ಚು ವೈರಲ್ ಆಗುತ್ತಿದೆ. ಬನ್ನಿ ಅವುಗಳ ಬಗ್ಗೆ ತಿಳಿಯೋಣ. 

ಅನೇಕ ವಿಚಿತ್ರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವನ್ನು ನೋಡಿದ್ರೆ ಅಚ್ಚರಿಯೂ ಆಗುತ್ತೆ, ವಾಕರಿಕೆಯೂ ಬರುತ್ತೆ. ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡಿದಂತೆ, ವೀಡಿಯೊಗಳಲ್ಲಿ ಒಂದರಲ್ಲಿ, ವಧುವಿನ ನೃತ್ಯವು ವೈರಲ್ ಆಗಿದ್ದರೆ, ಮತ್ತೆ ಕೆಲವು ವೀಡಿಯೊದಲ್ಲಿ, ವರನ ಸ್ನೇಹಿತನ ವಿಚಿತ್ರ ಸ್ಟೈಲ್ ವೈರಲ್ ಆಗುತ್ತದೆ. ಇನ್ನು ಚಿತ್ರ ವಿಚಿತ್ರ ಆಹಾರಗಳ ವಿಡಿಯೋ ವೈರಲ್(viral vedio) ಆಗಿರೋದಕ್ಕೆ ಲೆಕ್ಕಾನೆ ಇಲ್ಲ. 

ವಿಲಕ್ಷಣ ವಿಚಿತ್ರ ಆಹಾರ ಪದ್ಧತಿಯ(food culture) ಅದೆಷ್ಟೋ ವಿಡಿಯೋಗಳು ವೈರಲ್ ಆಗಿವೆ. ಇಂದು ನಾವು ನಿಮಗಾಗಿ ಇದೇ ರೀತಿಯ ವೈರಲ್ ಆಗಿರೋ ತಿಂಡಿಯನ್ನು ತಂದಿದ್ದೇವೆ, ಅದರಲ್ಲಿ ಇಲಿಯ ಖಾದ್ಯವನ್ನು ತಯಾರಿಸಲಾಗುತ್ತಿದೆ. ಮಾಂಸಹಾರಿಗಳಿಗೂ ಅದನ್ನು ನೋಡಿದ್ರೆ ಅಸಹ್ಯ ಅನಿಸಬಹುದು, ಅಂತಹ ಆಹಾರ ಇದು. ಆದರೆ ವಿಯೆಟ್ನಾಂ ಜನರು ಮಾತ್ರ ಅದನ್ನು ಸಮೋಸದಂತೆ ತಿಂತಿದ್ದಾರೆ. 
 

ಸೋಶಿಯಲ್ ಮಿಡಿಯಾ ಪೇಜ್ ಗಳಲ್ಲಿ ಈ ಇಲಿಯ ಖಾದ್ಯ ವೈರಲ್ ಆಗುತ್ತಿವೆ. ಇಲಿಗಳಿಂದ ಮಾಡಿದ ಖಾದ್ಯವನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ತೋರಿಸುತ್ತದೆ. ಈ ಆಹಾರವನ್ನು ವಿಯೆಟ್ನಾಂನಲ್ಲಿ ಕಾಣಬಹುದು, ಇದು ಪ್ರತಿ ಕೆ.ಜಿ.ಗೆ ಸುಮಾರು 160 ರೂ. ದರದಲ್ಲಿ ದೊರೆಯುತ್ತದೆ.  
 

ಇಲಿಗಳನ್ನು ಕೊಂದ ನಂತರ, ಅವುಗಳನ್ನು ಸ್ವಚ್ಛಗೊಳಿಸುತ್ತಾರೆ,ಬಳಿಕ ಪಾಲಿಥಿನ್ ಸಹಾಯದಿಂದ ಅನ್ನವನ್ನು ಚಪ್ಪಟೆಯಾಗಿ ಮಾಡಿದ ಅದನ್ನು ಇಲಿಗಳ ಮೇಲೆ ಸುತ್ತಲಾಗುತ್ತದೆ. ಇದರ ನಂತರ, ಇಲಿಗಳನ್ನು ಫ್ರೈ ಮಾಡಲು ಬಾಣಲೆಯಲ್ಲಿ ಹಾಕಲಾಗುತ್ತದೆ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ, ಅದನ್ನು ಬಾಣಲೆಯಿಂದ ಹೊರತೆಗೆದು ಜನರಿಗೆ ತಿನ್ನಲು ತಟ್ಟೆಯಲ್ಲಿ ಸರ್ವ್ ಮಾಡಲಾಗುತ್ತೆ. 
 

ಹೆಚ್ಚಿನ ಜನರು ಈ ಆಹಾರವನ್ನು ಇಷ್ಟಪಡದಿದ್ದರೂ, ಅನೇಕ ಜನರ ನೆಚ್ಚಿನ ಆಹಾರ ಇದು ಅಂದ್ರೆ ನೀವು ನಂಬಲೇಬೇಕು. ದೇಹವು ಇಲಿಗಳಿಂದ ಸಾಕಷ್ಟು ಪ್ರೋಟೀನ್ ಪಡೆಯುತ್ತದೆ ಎಂದು ಈ ಜನರು ನಂಬುತ್ತಾರೆ. ಈ ವೀಡಿಯೊವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಲೈಕ್ ಮಾಡಿದ್ದಾರೆ.
 

ವಿಡೀಯೋ ನೋಡಿದ ಜನ ಏನ್ ಹೇಳ್ತಿದ್ದಾರೆ ಗೊತ್ತಾ?: ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಕೂಡಲೇ ವೈರಲ್ ಆಗಿದೆ. ನೂರಾರು ಜನರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಯೂಸರ್ ಇದನ್ನು ಪಾಪ , ಇದು ಅಸಹ್ಯಕರವಾಗಿದೆ ಎಂದು ಬರೆದಿದ್ದಾರೆ.  ಮತ್ತೊಬ್ಬರು ಕಾಮೆಂಟ್ ಮಾಡಿ ನಾನು ಅದನ್ನು ತಿನ್ನಬಲ್ಲೆ, ಆದರೆ ಇಲಿಯ ಚರ್ಮದ ಮೇಲಿನ ಕೂದಲು ಅಥವಾ ತುಪ್ಪಳವನ್ನು ತೆಗೆದುಹಾಕಬೇಕು ಎಂದು ಬರೆದಿದ್ದಾರೆ. ಇನ್ನೊಬ್ಬರು "ಮೆಕ್ಸಿಕೊದ ಜಕಾಟೆಕಾಸ್ ನಲ್ಲಿ, ಜನರು ಇಲಿ ಸೂಪ್ ತಯಾರಿಸುತ್ತಾರೆ ಎಂದು ಸಹ ಹೇಳಿದ್ದಾರೆ.
 

click me!