ಉಳ್ಳಾಗಡ್ಡೆ ಸಿಪ್ಪೆಯನ್ನು ಪಾತ್ರೆಗಳನ್ನು ಮಾತ್ರವಲ್ಲದೆ ಅಡುಗೆ ಮನೆಯ ಪ್ರತಿ ಮೂಲೆಯನ್ನು ಸ್ವಚ್ಛಗೊಳಿಸಲು ಬಳಸಬಹುದು. ಆದ್ದರಿಂದ ಈ ಬಾರಿ ನೀವು ಉಳ್ಳಾಗಡ್ಡೆಯನ್ನು ಕತ್ತರಿಸಿದಾಗ ಅದರ ಸಿಪ್ಪೆಯನ್ನು ಪ್ರಯೋಜನಕ್ಕೆ ಬಾರದ್ದು ಎಂದು ಎಸೆಯದೆ ಉಪಯೋಗಿಸಿಕೊಳ್ಳಿ. ಉಳ್ಳಾಗಡ್ಡೆ ಸಿಪ್ಪೆಯನ್ನು ಹೇಗೆ ಬಳಸಬೇಕೆಂದು ಈಗ ತಿಳಿದುಕೊಳ್ಳೋಣ ಬನ್ನಿ.
ಗ್ಯಾಸ್ ಗ್ರೀಸ್ ತೆಗೆಯುತ್ತದೆ
ಹೌದು, ಉಳ್ಳಾಗಡ್ಡೆ ಸಿಪ್ಪೆಯನ್ನು ಬಳಸಿ ಗ್ಯಾಸ್ ಗ್ರೀಸ್ ಅನ್ನು ತುಂಬಾ ಸುಲಭವಾಗಿ ತೆಗೆಯಬಹುದು. ಇದಕ್ಕಾಗಿ ಉಳ್ಳಾಗಡ್ಡೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ನಂತರ ಅದರಲ್ಲಿ ಡಿಶ್ ಸೋಪನ್ನು ಕಲೆಗಳ ಮೇಲೆ ಹಾಕಿ ಸ್ವಚ್ಛಗೊಳಿಸಿ. ಇದನ್ನು ಸ್ವಚ್ಛಗೊಳಿಸಲು ಬ್ರಷ್ ಅಥವಾ ಮೃದುವಾದ ಬಟ್ಟೆಯನ್ನು ಬಳಸಿ.