ಚಳಿಗಾಲದಲ್ಲಿ ಊಟದಲ್ಲಿ ತುಂಬಾ ಜಾಗ್ರತೆ ವಹಿಸಬೇಕು. ವಿಶೇಷವಾಗಿ ಪೌಷ್ಟಿಕ ಆಹಾರ ತಿನ್ನಬೇಕು ಅಂತ ವೈದ್ಯರು ಹೇಳ್ತಾರೆ. ಕ್ಯಾರೆಟ್, ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಗೆಣಸು, ಚಿಲಗಡಾಳೆ, ಬೀಟ್‌ರೂಟ್, ಟರ್ನಿಪ್‌ಗಳಂತಹ ಗೆಡ್ಡೆ ತರಕಾರಿಗಳು ನಿಮ್ಮ ದೇಹಕ್ಕೆ ಒಳ್ಳೆಯದು.
ಇವುಗಳ ಜೊತೆಗೆ ಪಾಲಕ್, ಮೆಂತ್ಯ, ಸಾಸಿವೆ, ಮುಳ್ಳುಸೊಪ್ಪು, ಪುದೀನಾಗಳಂತಹ ಚಳಿಗಾಲದ ಸೊಪ್ಪುಗಳನ್ನು ತಿನ್ನಬೇಕು. ಇವು ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಕಾಪಾಡಲು ಸಹಾಯ ಮಾಡುತ್ತವೆ.