ಯಾವ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಸಿಗದ ಫುಡ್, ಉತ್ತರ ಕರ್ನಾಟಕದ ಮನೆ ಮನೆಯಲ್ಲಿಯೂ ಸಿಗುತ್ತೆ!

Published : May 24, 2026, 07:29 PM IST

North Karnataka Special Dish: ಇದು ಉತ್ತರ ಕರ್ನಾಟಕದ ಒಂದು ವಿಶಿಷ್ಟ ಆಹಾರವಾಗಿದೆ. ಹಿಂದೆ ಪಲ್ಯ ಅಥವಾ ಸಾಂಬಾರ್ ಇಲ್ಲದಿದ್ದಾಗ ಇದನ್ನು ತಯಾರಿಸಲಾಗುತ್ತಿತ್ತು. ಇದು ಬೆಂಗಳೂರಿನ ಯಾವ ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗಲ್ಲ.

PREV
15
ಉತ್ತರ ಕರ್ನಾಟಕ ಆಹಾರ

ಕೆಲವೊಂದು ಆಹಾರಗಳು ನಿರ್ದಿಷ್ಟವಾದ ಪ್ರದೇಶದ ಗುರುತು ಆಗಿರುತ್ತದೆ. ಇಂದು ನಾವು ನಿಮಗೆ ಯಾವ ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗದ ಆಹಾರ ಬಗ್ಗೆ ಹೇಳುತ್ತಿದ್ದೇವೆ. ಆದ್ರೆ ಈ ಆಹಾರ ಉತ್ತರ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿಯೂ ಲಭ್ಯವಾಗುತ್ತದೆ. ಆ ಆಹಾರ ಯಾವುದು ಮತ್ತು ಅದನ್ನು ಹೇಗೆ ತಯಾರಿಸಲಾಗುತ್ತೆ ಎಂಬುದನ್ನು ನೋಡೋಣ ಬನ್ನಿ.

25
ಜೋಳದ ಮುಟುಗಿ

ಜೋಳದ ಮುಟುಗಿ ಉತ್ತರ ಕರ್ನಾಟಕ ವಾಸಿಗಳ ಮೆಚ್ಚಿನ ಆಹಾರ. ಈ ಹಿಂದೆ ಪಲ್ಯ ಅಥವಾ ಸಾಂಬಾರ್ ಇಲ್ಲದಿರುವಾಗ ಜೋಳದ ಮುಟುಗಿಯನ್ನು ಮಾಡಲಾಗುತ್ತಿತ್ತು. ಎಷ್ಟೋ ಜನರು ಮುಟುಗಿ ತಿಂದೇ ಇಡೀ ದಿನವನ್ನು ಕಳೆಯುತ್ತಿದ್ದರು. ಆದರೆ ಇಂದು ವಿಶೇಷ ಆಹಾರವಾಗಿ ಬದಲಾಗಿದೆ. ಈ ಜೋಳದ ಮುಟುಗಿ ಮಾಡೋದು ಹೇಗೆ ಮಾಡೋದು ಅಂತ ನೋಡೋಣ ಬನ್ನಿ.

35
ಜೋಳದ ಮುಟುಗಿ ಮಾಡುವ ವಿಧಾನ

ನಿಮಗೆ ಜೋಳದ ರೊಟ್ಟಿ ಮಾಡಲು ಬರುತ್ತಿದ್ರೆ ಮುಟುಗಿಯನ್ನು ಸುಲಭವಾಗಿ ಮಾಡಬಹುದು. ಮೂರರಿಂದ ನಾಲ್ಕು ರೊಟ್ಟಿಗೆ ಆಗುವಷ್ಟು ಹಿಟ್ಟನ್ನು ಹಿಡಿದುಕೊಳ್ಳಿ. ಇದರಿಂದ ದಪ್ಪವಾದ ರೊಟ್ಟಿಯನ್ನು ಮಾಡಿಕೊಂಡು ಕಾವಲಿ ಮೇಲೆ ಸ್ವಲ್ಪ ನೀರು ಸವರಿಸಿ ಚೆನ್ನಾಗಿ ಸುಟ್ಟುಕೊಳ್ಳಿ.

45
ಕೈಯಿಂದಲೇ ಮಾಡಬಹುದು

ಈಗ ಬಿಸಿಯಾದ ರೊಟ್ಟಿ ಮೇಲೆ ಎಣ್ಣೆ ಅಥವಾದ ತುಪ್ಪ ಸವರಿ. ನಂತರ ಮೇಲೆ ಮಸಾಲೆಮಿಶ್ರಿತ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರೊಟ್ಟಿಯನ್ನು ಮುದ್ದೆ ಮಾಡಿ ಕೈಯಿಂದ ಉಂಡೆಯಂತೆ ಮಾಡಿಕೊಳ್ಳಿ. ಈ ವೇಳೆ ಸ್ವಲ್ಪ ಸ್ವಲ್ಪ ನೀರು ಸವರುತ್ತಾ ರೊಟ್ಟಿಯನ್ನು ಕಿವಿಚುತ್ತಾ ಉಂಡೆಯನ್ನು ಕಟ್ಟಿಕೊಂಡ್ರೆ ಜೋಳದ ಮುಟುಗಿ ಸವಿಯಲು ಸಿದ್ದವಾಗುತ್ತದೆ.

55
ಕಲ್ಲಿನಲ್ಲಿ ಜಜ್ಜಿಕೊಳ್ಳಿ

ಇನ್ನು ಕೆಲವರು ರೊಟ್ಟಿಯನ್ನು ಚಟ್ನಿ ಕುಟ್ಟುವ ಕಲ್ಲಿನಲ್ಲಿ ಹಾಕುತ್ತಾರೆ. ರೊಟ್ಟಿ ಮೇಲೆ ಎಣ್ಣೆ, ಅಚ್ಚಖಾರದ ಪುಡಿ, ಜೀರಿಗೆ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಜಜ್ಜಿಕೊಂಡು ಉಂಡೆ ಕಟ್ಟಿಕೊಂಡ್ರೆ ಜೋಳದ ಮುಟುಗಿ ಸವಿಯಲು ಸಿದ್ಧವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories