ತಿಂಡಿ ಪೋತರು ವಿಸಿಟ್ ಮಾಡಲೇ ಬೇಕಾದ ಕರ್ನಾಟಕದ ಸ್ಥಳಗಳಿವು! ನೀವು ಎಲ್ಲೆಲ್ಲಿಗೆ ಹೋಗಿದ್ದೀರಿ

First Published Dec 13, 2023, 5:29 PM IST

ನಿಮಗೂ ವೆರೈಟಿಯಾಗಿರೋ ತಿಂಡಿಗಳನ್ನು ಟ್ರೈ ಮಾಡೋದು ಅಂದ್ರೆ ತುಂಬಾನೆ ಇಷ್ಟಾನ? ಹಾಗಿದ್ರೆ ನೀವು ರಾಜ್ಯದಲ್ಲಿನ ಈ ತಾಣಗಳಿಗೆ ಭೇಟಿ ನೀಡಲೇಬೇಕು ಮತ್ತು ಅಲ್ಲಿನ ರುಚಿ ರುಚಿಯಾದ ತಿನಿಸುಗಳನ್ನು ಸವಿಯಲೇಬೇಕು. 
 

ಇನ್ನೇನು ವರ್ಷ ಕೊನೆಯಾಗುತ್ತಾ ಬಂದಿದೆ… ನೀವು ತಿಂಡಿ ಪ್ರಿಯರಾಗಿದ್ದು  (foodie), ಈ ವರ್ಷ ಮುಗಿಯೋದ್ರೊಳಗೆ ಬೇರೆ ಬೇರೆ ತಿಂಡಿಗಳನ್ನು ಟ್ರೈ ಮಾಡಬೇಕು ಅಥವಾ ಮುಂದಿನ ವರ್ಷ ಆದ್ರೂ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ತಿಂಡಿ ಟ್ರೈ ಮಾಡಬೇಕು ಎಂದು ನೀವು ಬಯಸಿದ್ರೆ ನಮ್ಮ ರಾಜ್ಯದಲ್ಲಿ ಬೆಸ್ಟ್ ತಿಂಡಿ ಸಿಗೋ ತಾಣಗಳ ಲಿಸ್ಟ್ ಇಲ್ಲಿದೆ ನೋಡಿ.
 

ಉಡುಪಿ (Udupi)
ಉಡುಪಿ ಸಮುದ್ರ ತೀರ, ಶ್ರೀಕೃಷ್ಣ ಮಠ ಸೇರಿ ಹಲವಾರು ಜನಪ್ರಿಯ ತಾಣಗಳಿಗೆ ಫೇಮಸ್. ನೀವು ಬನ್ಸ್, ಗೋಳಿಬಜೆ, ಅಂಬೊಡೆ, ಕೊಟ್ಟೆ ಕಡುಬು, ನೀರು ದೋಸೆ ತಿನ್ನಲು ಬಯಸಿದ್ರೆ ಖಂಡಿತಾ ಉಡುಪಿಗೆ ಭೇಟಿ ನೀಡಿ. 

Latest Videos


ಮಂಗಳೂರು (Mangalore)
ಮಂಗಳೂರಿನ ವಿಭಿನ್ನ ಸಂಸ್ಕೃತಿ ಸಂಪ್ರದಾಯ ಮತ್ತು ಇಲ್ಲಿನ ಸೀ ಫುಡ್ ಬಗ್ಗೆ ಎರಡು ಮಾತಿಲ್ಲ. ವೆರೈಟಿಯಾಗಿರುವ ಸೀ ಫುಡ್ ಟ್ರೈ ಮಾಡೊದಕ್ಕೆ ನೀವಿಲ್ಲಿಗೆ ಬರಲೇಬೇಕು. ಪುಂಡಿ, ನೀರು ದೋಸೆ, ಕೋರಿ ರೊಟ್ಟಿ, ಘೀ ರೋಸ್ಟ್, ಅಷ್ಟೆ ಯಾಕೆ ಅದ್ಭುತವಾದ ಐಸ್ ಕ್ರೀಂ ಗೂ ಇದು ಫೇಮಸ್. 

ಬೆಂಗಳೂರು (Bengaluru)
ರಾಜ್ಯ ರಾಜಧಾನಿ ಬೆಂಗಳೂರು ಸಹ ವಿಭಿನ್ನ ಆಹಾರಗಳಿಂದಾಗಿ ಫೇಮಸ್ ಆಗಿದೆ. ನೀವು ಬೆಂಗಳೂರಿಗೆ ಹೋದ್ರೆ ಖಂಡಿತವಾಗಿ ಚೌ ಚೌ ಬಾತ್, ಬಿಸಿ ಬೇಳೆ ಬಾತ್, ವಾಂಗಿ ಬಾತ್ ಇವನ್ನೆಲ್ಲಾ ಟ್ರೈ ಮಾಡಬಹುದು. 
 

ಮೈಸೂರು (Mysore)
ಸಾಂಸ್ಕೃತಿಕ ನಗರಿ ಮೈಸೂರು ಸಹ ವಿವಿಧ ಆಹಾರಗಳಿಗಾಗಿ ಫೇಮಸ್ ಆಗಿದೆ. ನೀವು ಮೈಸೂರಿಗೆ ಹೋದ್ರೆ ಮೈಸೂರ್ ಪಾಕ್ ಅಂತೂ ಮಿಸ್ ಮಾಡೋದೆ ಬೇಡ, ಜೊತೆಗೆ ಇಲ್ಲಿನ ಉತ್ತಪ್ಪ ಕೂಡ ಸಖತ್ತಾಗಿರುತ್ತೆ. 
 

ಬಿಜಾಪುರ (Bijapur)
ಬಿಜಾಪುರ ಅಲ್ಲಿನ ಊಟಕ್ಕಾಗಿ ಫೇಮಸ್. ಖಾನಾವಳಿಗಳನ್ನು ಜನರು ಹುಡುಕಿ ಹುಡುಕಿ ಊಟ ಮಾಡ್ತಾರೆ. ಇಲ್ಲಿ ಜೋಳದ ರೊಟ್ಟಿ, ಖಡಕ್ ರೊಟ್ಟಿ, ಉಳ್ಳಗಡ್ಡಿ, ಬದನೆ ಕಾಯಿ ಪಲ್ಯ ತುಂಬಾ ಫೇಮಸ್. 

ಬೆಳಗಾವಿ (Belagum Kunda)
ನಿಮಗೆ ಸ್ವೀಟ್ ಅಂದ್ರೆ ಇಷ್ಟ ಅನ್ನೋದಾದ್ರೆ ಖಂಡಿತಾ ಬೆಳಗಾವಿಗೆ ಹೋಗಲೇಬೇಕು. ಯಾಕಂದ್ರೆ ಇಲ್ಲಿನ ವಿವಿಧ ಬಗೆಯ ಸ್ವೀಟ್ಸ್ ಬಾಯಲ್ಲಿ ನೀರೂರಿಸುತ್ತೆ. ಹಾಲು ಮತ್ತು ಖೋವಾದಲ್ಲಿ ಮಾಡಿದಂತಹ ಬೆಳಗಾವಿ ಕುಂದ ತುಂಬಾ ಫೇಮಸ್.

ಕೂರ್ಗ್ (Coorg)
ಕಾಫಿ ರಾಜಧಾನಿಯಾಗಿರುವ ಕೂರ್ಗ್, ತನ್ನ ಪ್ರಕೃತಿ ಸೌಂದರ್ಯದ ಜೊತೆಗೆ ಕಾಫಿಗೂ ಫೇಮಸ್ ನಿಜ. ಆದರೆ ಇದರ ಜೊತೆ ಜೊತೆಗೆ ವಿವಿಧ ಬಗ್ಗೆ ಮಾಂಸಾಹಾರಗಳಿಗೂ ಇದು ಫೇಮಸ್. ಇಲ್ಲಿ ಪುಂಡಿ ಮತ್ತು ಪಂದಿ ಕರ್ರಿ ಅಂದ್ರೆ ಪೋರ್ಕ್ ತುಂಬಾ ಫೇಮಸ್. 

click me!