ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶ ಮಾತ್ರವಲ್ಲ, ಅದರ ಆಹಾರವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಪ್ರತಿಯೊಂದು ರಾಜ್ಯ, ಪ್ರತಿಯೊಂದು ನಗರ ಮತ್ತು ಪ್ರತಿಯೊಂದು ಬೀದಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಮಸಾಲೆಗಳು, ದೇಸಿ ತಡ್ಕಾ ಮತ್ತು ವಿವಿಧ ರೀತಿಯ ಭಕ್ಷ್ಯಗಳ ಸುವಾಸನೆಯು ಭಾರತಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ನೀಡಿದೆ. ನೀವು ಆಹಾರ ಪ್ರಿಯರಾಗಿದ್ರೆ ಈ 7 ಭಾರತೀಯ ಆಹಾರಗಳನ್ನು(Indian cuisines) ಟ್ರೈ ಮಾಡ್ಲೇಬೇಕು, ಏಕೆಂದರೆ ಅವುಗಳ ಹೆಸರನ್ನು ಕೇಳಿದ್ರೆ, ಹಸಿವು ಹೆಚ್ಚಾಗಿ, ಬಾಯಲ್ಲಿ ನೀರು ಬರೋದು ಖಚಿತಾ.