Biryani Spots in Bengaluru: ಬೆಂಗಳೂರಿನ ಐದು ಬೆಸ್ಟ್ ಬಿರಿಯಾನಿ ಸ್ಪಾಟ್’ಗಳು… ಮಿಸ್ ಮಾಡದೆ ಟ್ರೈ ಮಾಡಿ

Published : Jun 16, 2025, 04:45 PM ISTUpdated : Jun 16, 2025, 05:17 PM IST

ನೀವು ಬಿರಿಯಾನಿ ಪ್ರಿಯರೇ? ಹಾಗಿದ್ರೆ ಬೆಂಗಳೂರಿನಲ್ಲಿ ತುಂಬಾನೆ ರುಚಿಯಾಗಿ ಸಿಗುವಂತಹ ಬಿರಿಯಾನಿ ರೆಸ್ಟೋರೆಂಟ್ ಗಳು ಎಲ್ಲಿವೆ ಎಂದು ನೀವು ಯೋಚನೆ ಮಾಡ್ತಿದ್ರೆ, ಇಲ್ಲಿದೆ, 5 ಬೆಸ್ಟ್ ಸ್ಪಾಟ್. 

PREV
18

ಬಿರಿಯಾನಿ ಯಾರಿಗೆ ತಾನೆ ಇಷ್ಟ ಇಲ್ಲ… ಅಲ್ವಾ? ಚಿಕನ್ ಆಗಲಿ, ಮಟನ್ ಆಗಲಿ, ಆ ಅನ್ನದ ಪರಿಮಳ, ರುಚಿ ಆಹಾ… ಬಿರಿಯಾನಿ ತಿನ್ನುವ ಸ್ವಾಧವೇ ಬೇರೆ. ನೀವು ಕೂಡ ಬಿರಿಯಾನಿ ಪ್ರಿಯರಾಗಿದ್ದು (biryani lovers), ಬೆಂಗಳೂರಿನಲ್ಲಿ ರುಚಿಯಾದ ಬಿರಿಯಾನಿ ಎಲ್ಲಿ ಸಿಗುತ್ತೆ ಎಂದು ನೀವು ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ ಬೆಸ್ಟ್ ರೆಸ್ಟೋರೆಂಟ್ ಗಳು. ಇಲ್ಲಿ ನೀವು ಖಂಡಿತಾ ಒಂದು ಬಾರಿಯಾದ್ರೂ ಟ್ರೈ ಮಾಡಿ.

28

ಮೇಘನಾ ಫೂಡ್ಸ್ : ಬೆಂಗಳೂರಿನಲ್ಲಿರುವ ಮೇಘನಾ ಫೂಡ್ಸ್ (Meghana Foods) ನಲ್ಲಿ ನೀವು ರುಚಿಯಾದ ಹಾಗೂ ಹೆಚ್ಚು ಕ್ವಾಂಟಿಟಿ ಜೊತೆಗೆ ಒಳ್ಳೆಯ ಕ್ವಾಲಿಟಿಯ ಬಿರಿಯಾನಿಯನ್ನು ಸವಿಯಬಹುದು. ಇಲ್ಲಿ ನೀವು ಒಂದು ಸಲ ಬಿರಿಯಾಗಿ ಟ್ರೈ ಮಾಡಿದ್ರೆ, ಮತ್ತೆ ಮತ್ತೆ ಬಾಯಿ ಚಪ್ಪರಿಸಿಕೊಂಡು ತಿನ್ನೋದು ಗ್ಯಾರಂಟಿ.

38

ನಾಗರ್ಜುನ : ನಾಗಾರ್ಜುನ್ ಹೊಟೇಲ್ ನಲ್ಲಿ ನೀವು ಆಂಧ್ರ ಶೈಲಿಯ ಆಹಾರಗಳನ್ನು ಸೇವಿಸಬಹುದು. ಇಲ್ಲಿನ ಆಂಧ್ರ ಸ್ಟೈಲ್ ಬಿರಿಯಾನಿ ಕೂಡ ತುಂಬಾನೆ ಫೇಮಸ್. ಫ್ರೆಶ್ ಚಿಕನ್, ಅಲ್ಲಿನ ರುಚಿ ಬೊಂಬಾಟ್ ಆಗಿರುತ್ತೆ. ಬೆಂಗಳೂರಲ್ಲಿ 6 ಔಟ್ ಲೆಟ್ ಗಳಿವೆ ನೀವು ಅವುಗಳಲ್ಲಿ ಟ್ರೈ ಮಾಡಿ ನೋಡಿ.

48

ಅರೋಮಾಸ್ : ಅರೋಮಾಸ್ ಹೊಟೇಲ್ ಬಿರಿಯಾನಿ ಕೂಡ ನೀವು ತಿನ್ನಲೇ ಬೇಕಾದಂತಹ ಒಂದು ಬಿರಿಯಾನಿ ಸ್ಪಾಟ್ ಆಗಿದೆ. ನೀವು ಬಿರಿಯಾನಿ ಪ್ರಿಯರಾಗಿದ್ರೆ ಒಂದು ಸಲ ಟ್ರೈ ಮಾಡಿ ನೋಡಿ.

58

ನಂದನಾ ಪ್ಯಾಲೆಸ್ : ಜಯನಗರ, ಕೋರಮಂಗಲ ಸೇರಿ ಹಲವೆಡೆ ಇರುವಂತಹ ನಂದನಾ ಪ್ಯಾಲೆಸ್ ನಲ್ಲಿ (Nandana Palace) ನೀವು ಹೈದರಬಾದಿ ಬಿರಿಯಾನಿ ಟ್ರೈ ಮಾಡಬಹುದು. ಇಲ್ಲಿ ಬೋನ್ ಲೆಸ್ ಚಿಕನ್ ಬಿರಿಯಾನಿ ಸ್ಪೆಷಲ್ ಆಗಿದ್ದು, ಕ್ವಾಂಟಿಟಿ ಕೂಡ ಹೆಚ್ಚಾಗಿರುತ್ತೆ. ರುಚಿ ಸಖತ್ತಾಗಿದ್ದು, ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತೆ.

68

ಎಂಪೈರ್ ರೆಸ್ಟೋರೆಂಟ್ : ಎಂಪೈರ್ ರೆಸ್ಟೋರೆಂಟ್ ಬೆಂಗಳೂರಿಗರಲ್ಲಿ ಮಧ್ಯಪ್ರಾಚ್ಯ ಮತ್ತು ಕೇರಳ ಕುಸಿನ್ ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಚಿಕನ್ ಕಬಾಬ್‌ಗಳು (Chicken Kebab) ಮತ್ತು ಇತರ ಮಾಂಸಾಹಾರಿ ಆಹಾರಗಳು ಸಿಕ್ಕಾಪಟ್ಟೆ ಫೇಮಸ್. ಇಲ್ಲಿನ ಬಿರಿಯಾನಿ ಒಂದ್ಸಲ ತಿಂದ್ರೆ ಮತ್ತೊಂದ್ಸಲ ನೀವು ಹೋಗಿಯೇ ಹೋಗ್ತೀರಿ.

78

ಮಲ್ಲಿಕಾ ಬಿರಿಯಾನಿ : ಬಿರಿಯಾನಿಗಾಗಿಯೇ ಫೇಮಸ್ ಆಗಿರುವ ರೆಸ್ಟೋರೆಂಟ್ ಈ ಮಲ್ಲಿಕಾ ಬಿರಿಯಾನಿ (Mallika Biryani). ಇಲ್ಲಿ ನೀವು ನಾಟಿ ಸ್ಟೈಲ್ ಮಟನ್ ಬಿರಿಯಾನಿ ಟ್ರೈ ಮಾಡಿದ್ರೆ, ಮತ್ತೆ ಮತ್ತೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೀರಿ.

88

ಇದಲ್ಲದೇ ನೀವು ಪಿಎಸ್ ಆರ್, ಶಿವಾಜಿ ಮಿಲಿಟರಿ ಹೊಟೇಲ್ (Shivaji Military Hotel), ನವಯುಗ್, ಹೊಸಕೋಟೆ ಮಟನ್ ದಮ್ ಬಿರಿಯಾನಿ ಕೂಡ ನೀವು ಟ್ರೈ ಮಾಡಬಹುದು. ಇದರಲ್ಲಿ ನೀವು ಯಾವುದಾದ್ರೂ ಹೊಟೇಲಲ್ಲಿ ತಿಂದಿದ್ದೀರಾ? ಇಲ್ಲವಾಗಿದ್ರೆ ಬೇಗ ಹೋಗಿ.

Read more Photos on
click me!

Recommended Stories