ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಅಂಬಾನಿ ಕುಟುಂಬ ಕೂಡ ಶ್ರೀಮಂತ ಕುಟುಂಬ. ಬರೋಬ್ಬರಿ 15,000 ಕೋಟಿ ರೂಪಾಯಿಯ ಆ್ಯಂಟಿಲಿಯಾ ಮನೆಯಲ್ಲಿ ಅಂಬಾನಿ ಕುಟುಂಬ ವಾಸವಿದೆ. 27 ಮಹಡಿಗಳ ಈ ಮನೆಯಲ್ಲಿ ಎಲ್ಲಾ ಐಷಾರಾಮಿತ ತನ ಇದೆ. ಸಿಬ್ಬಂದಿಗಳು, ಭದ್ರತೆ ಸೇರಿದಂತೆ ಪ್ರತಿಯೊಂದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತದೆ. ದಿನದ 24 ಗಂಟೆ ಅಂಬಾನಿ ಮನೆಯಲ್ಲಿ ಸಿಬ್ಬಂದಿಗಳಿರುತ್ತಾರೆ. ವಿಶೇಷ ಅಂದರೆ ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಬೆಳಗ್ಗೆ ತಿಂಡಿ ಮಾಡಲು ಎಷ್ಟು ರೋಟಿ ಬೇಕು? ಈ ಪ್ರಶ್ನೆಗೆ ಉತ್ತರ ಬರೋಬ್ಬರಿ 4,000 ಎಂದು ವರದಿಯಾಗಿದೆ.