ವಿಶ್ವದಲ್ಲಿ ಭಾರತ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶ. ಭಾರತದಿಂದ ಹಲವು ದೇಶಗಳಿಗೆ ಚಹಾ ಪುಡಿ ರಫ್ತಾಗುತ್ತಿದೆ. ಭಾರತದಲ್ಲಿ ಚಹಾ ಪ್ರತಿ ದಿನದ ರಿಫ್ರೆಶ್ ಡ್ರಿಂಕ್. ಬಹುತೇಕರು ಕನಿಷ್ಠ 2 ಬಾರಿ ದಿನದಲ್ಲಿ ಚಹಾ ಕುಡಿಯುತ್ತಾರೆ. ಅಷ್ಟರ ಮಟ್ಟಿಗೆ ಭಾರತದಲ್ಲಿ ಚಹಾ ಜನಪ್ರಿಯತೆ ಪಡೆದಿದೆ. ಹಲವರು ದಿನ ಆರಂಭವಾಗುವದೇ ಚಹಾ ಮೂಲಕ. ಆದರೆ ಭಾರತದ ಯಾವ ರಾಜ್ಯದ ಜನ ಅತೀ ಹೆಚ್ಚು ಟೀ ಕುಡಿಯುತ್ತಾರೆ?
27
ಭಾರತದ ಚಹಾ ಮಂಡಳಿ ದೇಶದಲ್ಲಿ ಯಾವ ರಾಜ್ಯ ಅತೀ ಹೆಚ್ಚು ಚಹಾ ಸೇವನೆ ಮಾಡುತ್ತೆ ಅನ್ನೋದು ತಿಳಿಯಲು ಅಧ್ಯಯನ ಮಾಡಿದೆ. ಈ ವರದಿ ಹಲವು ಅಚ್ಚರಿಗೆ ಕಾರಣವಾಗಿದೆ. ಕಾರಣ ಭಾರತದಲ್ಲಿ ಅತೀ ಹೆಚ್ಚು ಟೀ ಸೇವನೆ ಮಾಡುವ ರಾಜ್ಯ ಗುಜರಾತ್. ವಿಶೇಷ ಅಂದರೆ ಭಾರತ ಒಟ್ಟು ಟೀ ಸೇವನೆ ಪ್ರಮಾಣಕ್ಕಿಂತ ರಾಜ್ಯಗಳ ಪೈಕಿ ಗುಜರಾತ್‌ನಲ್ಲಿನ ಚಹಾ ಸೇವನೆ ಪ್ರಮಾಣ ಹೆಚ್ಚಿದೆ.
37
ಗುಜರಾತ್‌ನಲ್ಲಿ ಜನರು ಚಹಾ ಕುಡಿಯುತ್ತಲೇ ಇರುತ್ತಾರೆ. ದಿನ ಬೆಳಗ್ಗೆ ಚಹಾ, ಹೊರಗಡೆ ಹೋದರೂ ಚಹಾ, ಬಂದರೂ ಚಹಾ, ಭೇಟಿಯಾದರೂ ಚಹಾ, ಸಂತೋಷ, ದುಃಖವಾದರೂ ಚಹಾ. ಹೀಗೆ ಗುಜರಾತ್ ಜನ ನೀರಿನಂತೆ ಚಹಾ ಬಳಸುತ್ತಲೇ ಇರುತ್ತಾರೆ. ಚಹಾ ಮಂಡಳಿ ಪ್ರಕಾರ ಗುಜರಾತ್ ರಾಜ್ಯ ಅತೀ ಹೆಟ್ಟು ಟೀ ಸೇವನೆ ಮಾಡುತ್ತೆ ಎಂದಿದೆ.
47
ಗುಜರಾತ್ ಯಾಕೆ ಇಷ್ಟೊಂದು ಟೀ ಸೇವನೆ ಮಾಡುತ್ತೆ ಅನ್ನೋ ಪ್ರಶ್ನೆ ಎಲ್ಲರಿಗೂ ಕಾಡಿದೆ. ಇದಕ್ಕೆ ಕೆಲ ತಜ್ಞರು ಉತ್ತರವನ್ನು ನೀಡಿದ್ದಾರೆ. ಗುಜರಾತ್‌ನಲ್ಲಿ ಅತೀ ಹೆಚ್ಚು ಹಾಲು ಲಭ್ಯವಿದೆ. ಹೀಗಾಗಿ ಜನರು ಟೀ ಮಾಡಿಕೊಂಡು ಕುಡಿಯುವ ಸಾಧ್ಯತೆ ಇದೆ. ಗುಜರಾತ್ ಜನರಿಗೆ ಟೀ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.
57
ಎರಡನೇ ಸ್ಥಾನ ಹರ್ಯಾಣದ ಪಾಲಾಗಿದೆ. ಹರ್ಯಾಣ ಜನ ಕೂಡ ಹೆಚ್ಚಿನ ಟೀ ಸೇವನೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಗೋವಾ ರಾಜ್ಯ. ಗೋವಾದಲ್ಲಿ ಮದ್ಯ ಮಾತ್ರವಲ್ಲ, ಜನರು ಟೀ ಹೆಚ್ಚು ಸೇವಿಸುತ್ತಾರೆ. ಹೀಗಾಗಿ ಗೋವಾ ಪ್ರವಾಸ ಮಾಡಿದ್ದಾರೆ ಎಂದರೆ ತಪ್ಪಾಗಿ ತಿಳಿಯುವ ಅಗತ್ಯವಿಲ್ಲ, ಟೀ ಮಾತ್ರ ಕುಡಿದಿರುವ ಸಾಧ್ಯತೆ ಇದೆ.
67
ನಾಲ್ಕನೇ ಸ್ಥಾನ ಪಂಜಾಬ್‌ಗೆ ಸಲ್ಲುತ್ತಿದೆ. ಪಂಜಾಬ್‌ನಲ್ಲಿ ಲಸ್ಸಿ ಅತ್ಯಂತ ಜನಪ್ರಿಯ. ಆದರೆ ಜನರು ಟೀಯನ್ನು ಅಷ್ಟೇ ಇಷ್ಟಪಡುತ್ತಾರೆ. ಪಂಜಾಬ್ ಜನರು ಪ್ರತಿನಿತ್ಯದ ಸೇವನೆಯಾಗಿ ಚಹಾ ಕುಡಿಯುತ್ತಾರೆ. ಪಂಜಾಬಿ ಚಹಾ ಕೂಡ ದೇಶದಲ್ಲಿ ಜನಪ್ರಿಯವಾಗಿದೆ. ಎಂದು ಭಾರತೀಯ ಚಹಾ ಮಂಡಳಿ ಎಂದಿದೆ.
77
5ನೇ ಸ್ಥಾನದಲ್ಲಿ ಜಮ್ಮು ಮತ್ತು ಕಾಶ್ಮೀರ ಸ್ಥಾನ ಪಡೆದಿದೆ. ಕಣಿವೆ ರಾಜ್ಯದಲ್ಲಿ ಹಿಮ, ಶೀತ ಹೆಚ್ಚಾಗಿರುವ ಕಾರಣ ಚಹಾ ಸೇವನೆಯೂ ಹೆಚ್ಚಾಗಿರುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಫಿ ಕುಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ದೇಹ ಬೆಚ್ಚಗಿಡಲು ಟೀ ಅಥವಾ ಚಹಾ ಕುಡಿಯುವ ಅಭ್ಯಾಸ ಹೆಚ್ಚು.