ಇಡ್ಲಿ ಸಾಂಬಾರ್‌ ಜೊತೆ ತಟ್ಟೆಯಲ್ಲಿ ಹೊಳೆಯುತ್ತಿತ್ತು ಹಲ್ಲಿಯ ಕಣ್ಣು..! ಲಾಕ್‌ಡೌನ್ ನಂತ್ರ ಹೋಟೆಲ್ ಅವಸ್ಥೆ ಇದು

First Published | Aug 5, 2020, 2:58 PM IST

ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ

ದೆಹಲಿಯ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ದೋಸೆ ತಿನ್ನಲು ಹೋದ ಸಂದರ್ಭ ತಟ್ಟೆಯಲ್ಲಿ ಹಲ್ಲಿ ಕಂಡು ಬಂದಿದೆ.
Tap to resize

ತರಕಾರಿಗಳೊಂದಿಗೆ ಸತ್ತ ಹಲ್ಲಿ ಸಾಂಬಾರ್‌ನಲ್ಲಿ ಕಂಡುಬಂದಿದೆ. ಇದರ ಫೊಟೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಎಲ್ಲಾ ರೆಸ್ಟೋರೆಂಟ್ ಅಂಗಡಿಗಳನ್ನು ಹಲವಾರು ದಿನಗಳವರೆಗೆ ಮುಚ್ಚಲಾಗಿತ್ತು. ಆದರೆ ಈಗ ಅನ್ಲಾಕ್ ಪ್ರಕ್ರಿಯೆಯ ಭಾಗವಾಗಿ ಹೋಟೆಲ್ ತೆರೆಯಲಾಗುತ್ತಿದೆ.
ದೆಹಲಿಯ ಚಾಂದನಿ ಚೌಕ್‌ನಲ್ಲಿ ವಾಸಿಸುವ ಪಂಕಜ್ ಅಗರ್‌ವಾಲ್ ಎಂಬ ವ್ಯಕ್ತಿ ದೋಸೆ ಆರ್ಡರ್ ಮಾಡಿದ್ದರು.
ಇಬ್ಬರು ಸ್ನೇಹಿತರು ಒಟ್ಟಿಗೆ ತಿಂಡಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಸಾಂಬಾರ್‌ನಲ್ಲಿದ್ದ ತರಕಾರಿಯತ್ತ ನೋಡಿದ್ದಾರೆ.
ಈ ಸಂದರ್ಭ ಪಂಕಜ್ ಸಾಂಬಾರ್‌ನ ತರಕಾರಿಯಲ್ಲಿ ಹೊಳೆಯುವ ಕಣ್ಣುಗಳನ್ನು ನೋಡಿದ್ದಾನೆ. ಅದನ್ನು ಚಮಚದಿಂದ ತೆಗೆದು ನೋಡಿದಾಗ ಅವನಿಗೆ ಹಲ್ಲಿ ಸತ್ತು ಬಿದ್ದಿರುವುದು ಕಂಡಿದೆ.
ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.
ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.
ಪಂಕಜ್ ತಕ್ಷಣ ತನ್ನ ಫೋನ್‌ನಲ್ಲಿ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಆದರೆ ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ಸಾಂಬಾರ್ ಬಗ್ಗೆ ತನಿಖೆ ನಡೆಸಲು ಪೊಲೀಸರು ಕೇಳಿಕೊಂಡಿದ್ದಾರೆ.
ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಮತ್ತು ಸಿಬ್ಬಂದಿಯನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Latest Videos

click me!