ಯಾವುದೇ ಯಂತ್ರವಿಲ್ಲದೆ ಮನೆಯಲ್ಲಿ ತಯಾರಿಸಿ ಗೋಧಿ ಹಿಟ್ಟಿನ ಆರೋಗ್ಯಕರ ಟೇಸ್ಟಿ ನೂಡಲ್ಸ್‌

First Published | Aug 3, 2020, 5:08 PM IST

ನೂಡಲ್ಸ್  ಚೀನಾದ ಆಹಾರವಾದರೂ, ಚೀನಾಕ್ಕಿಂತ  ಭಾರತದಲ್ಲಿ ಜನರು ನೂಡಲ್ಸ್ ತಿನ್ನುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಮೈದಾ ಹಿಟ್ಟಿನಿಂದ ಮಾಡಿದ ನೂಡಲ್ಸ್  ಮಕ್ಕಳು ತಿನ್ನವುದನ್ನು ಪೋಷಕರು ಬಯಸುವುದಿಲ್ಲ. ಗೋಧಿಯಿಂದ ತಯಾರಿಸಿದ ಈ ನೂಡಲ್ಸ್ ತುಂಬಾ ಟೇಸ್ಟಿ ಮತ್ತು  ತುಂಬಾ ಆರೋಗ್ಯಕರ. ನೀವು ಯಾವುದೇ ಯಂತ್ರವಿಲ್ಲದೆ ಈ ನೂಡಲ್ಸ್ ಮನೆಯಲ್ಲಿ ತಯಾರಿಸಬಹುದು. ವಿಧಾನ ಹೀಗಿದೆ.

ಗೋಧಿ ಹಿಟ್ಟು
ಮೊಟ್ಟೆಗಳು
ಉಪ್ಪು
 

ಮನೆಯಲ್ಲಿ ಗೋಧಿ ಹಿಟ್ಟಿನಿಂದ ನೂಡಲ್ಸ್ ತಯಾರಿಸಲು, ಮೊದಲು ಒಂದು ಬಟ್ಟಲಿನಲ್ಲಿ ಹಿಟ್ಟು ತೆಗೆದುಕೊಳ್ಳಿ.
undefined
ಈಗ ಹಿಟ್ಟಿನ ಮಧ್ಯದಲ್ಲಿ ಒಡೆದ ಎರಡು ಮೊಟ್ಟೆಗಳನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
undefined

Latest Videos


ನಂತರ ಈ ಹಿಟ್ಟನ್ನು ಚೆನ್ನಾಗಿ ಕಲಿಸಲು ಪ್ರಾರಂಭಿಸಿ. ಹಿಟ್ಟನ್ನು ಬಹಳ ನಿಧಾನವಾಗಿ ಮಿಕ್ಸ್‌ ಮಾಡಬೇಕು
undefined
ಹಿಟ್ಟು ಬೆರಳಿಗೆ ಅಂಟಬಾರದು ಅಲ್ಲಿವರೆಗೆ ಕಲಿಸಬೇಕು ಹಾಗೂ ಚೆನ್ನಾಗಿ ನಾದಿ.
undefined
ನಂತರ ಹಿಟ್ಟನ್ನು ಪ್ಲಾಸ್ಟಿಕ್‌‌ನಲ್ಲಿ ಕಟ್ಟಿ 30 ನಿಮಿಷಗಳ ಕಾಲ ಬಿಡಿ.
undefined
ಇದರ ನಂತರ, ಹಿಟ್ಟನ್ನು ಲಟ್ಟಿಸಿ. ಈಗ ಅದನ್ನು ಚಾಕುವಿನಿಂದ ತೆಳುವಾಗಿ ಕತ್ತರಿಸಿ.
undefined
ಈ ನೂಡಲ್ಸ್ ಬಿಸಿಲಿನಲ್ಲಿ ಒಣಗಿಸಿ. ಒಣಗಿದ ನಂತರ ಅದನ್ನು ಏರ್‌ಟೈಟ್‌ ಡಬ್ಬದಲ್ಲಿ ಸಂಗ್ರಹಿಸಿ.
undefined
ಅವುಗಳನ್ನು ತಿನ್ನಲು ಬಯಸಿದಾಗ, ಉಪ್ಪು ಮತ್ತು ಎಣ್ಣೆ ಹಾಕಿ ನೀರಿನಲ್ಲಿ ಕುದಿಸಿ,
undefined
ನೀರು ಬಸಿದು, ನಿಮ್ಮ ಇಷ್ಟದ ತರಕಾರಿ ಯಾ ಮಸಾಲ ಯಾ ಎಗ್‌ ಸೇರಿಸಿ ಟೇಸ್ಟಿ ನೂಡಲ್‌ ತಯಾರಿಸಿಕೊಂಡು ಎಂಜಾಯ್‌ ಮಾಡಿ.
undefined
click me!