ಹಲೀಮ್ ಮಿಶ್ರಣದ ತಯಾರಿಕೆ:
ದೊಡ್ಡ ಬಟ್ಟಲಿನಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆ, ಈರುಳ್ಳಿ ಚೂರುಗಳು ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಮತ್ತು ಟೊಮೆಟೊ ತುಂಡುಗಳನ್ನು ಹಾಕಿ ಫ್ರೈ ಮಾಡಿ. ಈಗ ಬೇಯಿಸಿದ ಮಟನ್/ಚಿಕನ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಗೋಧಿ ರವಾ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಮತ್ತು ಮಿಶ್ರಣವನ್ನು ಕಡಿಮೆ ಉರಿಯಲ್ಲಿ 30-40 ನಿಮಿಷಗಳ ಕಾಲ ನಿಧಾನವಾಗಿ ಬೆರೆಸಿ ಬೇಯಿಸಿ. ಮಿಶ್ರಣ ದಪ್ಪ ಆಗುವವರೆಗೆ ಒಂದು ಚಾಕು ಜೊತೆ ಚೆನ್ನಾಗಿ ಬೆರೆಸಿಕೊಳ್ಳಿ.
ಹಲೀಮ್ ಸರ್ವಿಂಗ್ ಮತ್ತು ಟಾಪಿಂಗ್: ಈಗ ಕಸೂರಿ ಮೆಂತೆ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹುರಿದ ಈರುಳ್ಳಿಯಿಂದ ಅಲಂಕರಿಸಿ. ಮೇಲೆ ತುಪ್ಪ ಅಥವಾ ಬೆಣ್ಣೆ, ನಿಂಬೆ ರಸ ಮತ್ತು ಈರುಳ್ಳಿ ಚಿಪ್ಸ್. ಬಯಸಿದಲ್ಲಿ ಗೋಡಂಬಿಯಿಂದ ಅಲಂಕರಿಸಿ. ರುಚಿ ಅದ್ಭುತವಾಗಿದೆ.