ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಕೂಡ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಆದರೆ ಇದರಿಂದ ಮಾರಕವಾಗುವ ಸಾಮಾನ್ಯ ಜನರ ಜೀವನಕ್ಕೆ. ಹಾಗಿದ್ದರೆ ಈ ಅಸಲಿ ನಕಲಿಯ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ? ಬನ್ನಿ ನಕಲಿ -ಅಸಲಿ ಮೊಟ್ಟೆಗಳನ್ನು ಕಂಡು ಹಿಡಿಯುವುದು ಹೇಗೆ ನೋಡೋಣ...
ಹೊಳಪು : ನಕಲಿ ಮೊಟ್ಟೆಯನ್ನು ಕಂಡು ಹಿಡಿಯುವ ಒಂದು ಸುಲಭ ವಿಧಾನ ಎಂದರೆ ಅದರ ಹೊಳಪು. ಒಂದು ವೇಳೆ ಮೊಟ್ಟೆಯ ಮೇಲಿನ ಪದರ ಹೆಚ್ಚು ಹೊಳಪಿನಿಂದ ಕೂಡಿದ್ದರೆ ಅದು ನಕಲಿ ಎಂದು ಅರ್ಥ. ಯಾಕೆಂದರೆ ನಿಜವಾದ ಮೊಟ್ಟೆ ಹೊಳೆಯುವುದಿಲ್ಲ..
ಟಚ್ ಮಾಡಿ : ಮೊಟ್ಟೆಯನ್ನು ಕೈಯಲ್ಲಿ ಸ್ವಲ್ಪ ಒತ್ತಿ ನೋಡಿ. ಅದು ತುಂಬಾ ರಫ್ ಆಗಿದ್ದರೆ ಅದು ನಕಲಿ. ಯಾಕೆಂದರೆ ಅಸಲಿ ಮೊಟ್ಟೆಯ ಪದರ ಸ್ಮೂತ್ ಆಗಿರುತ್ತದೆ.
ಬೆಂಕಿ : ನಕಲಿ ಮೊಟ್ಟೆಯನ್ನು ಬೆಂಕಿಯ ಬಳಿ ತೆಗೆದುಕೊಂಡು ಹೋದ ಕೂಡಲೇ ಅದಕ್ಕೆ ಬೆಂಕಿ ಹತ್ತುತ್ತದೆ. ಯಾಕೆಂದರೆ ಅದು ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.
ಶಬ್ದ ಬರುತ್ತದೆ : ನಕಲಿ ಮೊಟ್ಟೆಯನ್ನು ಅಲ್ಲಾಡಿಸಿ ನೋಡಿದಾಗ ಅದರಿಂದ ಶಬ್ದ ಬರುತ್ತದೆ. ಆದರೆ ಅಸಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಶಬ್ದ ಬರುವುದಿಲ್ಲ.
ಮಿಕ್ಸ್ ಆದರೆ : ಮೊಟ್ಟೆಯನ್ನು ಒಡೆದು ಸ್ವಲ್ಪ ಸಮಯ ಬಿಟ್ಟಾಗ ಬಿಳಿ ಮತ್ತು ಹಳದಿ ದ್ರವ ಜೊತೆಯಾಗಿ ಮಿಕ್ಸ್ ಆದರೆ ಅದು ನಕಲಿ ಮೊಟ್ಟೆ. ಈ ಎರಡು ದ್ರವಗಳನ್ನು ಒಂದೇ ಕೆಮಿಕಲ್ ಬಳಸಿ ಮಾಡುವುದರಿಂದ ಅವೆರಡು ಬೇಗನೆ ಮಿಕ್ಸ್ ಆಗುತ್ತವೆ..
ನಕಲಿ ಮೊಟ್ಟೆ ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ.