ಹಿಟ್ಟು ಕಲಿಸಿದ ನಂತರ ಹೀಗೆ ಸ್ಟೋರ್ ಮಾಡಿದ್ರೆ ಚಪಾತಿ ಸಾಫ್ಟ್ ಆಗುತ್ತೆ!

Published : Jul 15, 2025, 05:22 PM IST

ಚಪಾತಿ ಹಿಟ್ಟನ್ನು ಕಲಿಸುವ ಮತ್ತು ಸಂಗ್ರಹಿಸುವ ಕಲೆ ಮತ್ತು ತಂತ್ರಗಳನ್ನು ತಿಳಿಯಿರಿ. ಮೃದುವಾದ ಚಪಾತಿಗಾಗಿ ಹಿಟ್ಟನ್ನು ಹೇಗೆ ನೆನೆಸಿಡಬೇಕು ಮತ್ತು ಸ್ಟೋರ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

PREV
15

ಚಪಾತಿ ಮಾಡೋದು ಒಂದು ಕಲೆ. ಆದ್ರೆ ಚಪಾತಿ ಹಿಟ್ಟು ಹೇಗೆ ಕಲಿಸಬೇಕು ಮತ್ತು ಸ್ಟೋರ್ ಮಾಡಬೇಕು ಅನ್ನೋದು ಕೌಶಲ್ಯ. ಹಿಟ್ಟು ಕಲಿಸಿದ ಮರುಕ್ಷಣವೇ ಚಪಾತಿ ಮಾಡಬಾರದು. ಇದರಿಂದ ಚಪಾತಿ ಬಿರುಸು ಆಗುತ್ತದೆ. ಹಾಗಾಗಿ ಚಪಾತಿ ಸಾಫ್ಟ್ ಆಗಲು ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

25

ಚಪಾತಿಗೆ ಹಿಟ್ಟು ಕಲಿಸುವಾಗ ಯಾವಾಗಲೂ ಮೊದಲು ಜರಡಿಯನ್ನು ಹಿಡಿದುಕೊಳ್ಳಬೇಕು. ಇದರಿಂದ ಹಿಟ್ಟಿನಲ್ಲಿರುವ ರವೆ ಮಾದರಿಯ ಅಂಶ ಬೇರ್ಪಡೆಯಾಗುತ್ತದೆ. ಇದರಿಂದ ಚಪಾತಿ ಸಾಫ್ಟ್ ಆಗಲು ಸಾಧ್ಯವಾಗುತ್ತದೆ. ಮನೆಯಲ್ಲಿ ಗೋಧಿ ಇದ್ರೆ ಮಿಲ್‌/ಗಿರಣಿಗೆ ಹೋಗಿ ಹಿಟ್ಟು ಮಾಡಿಸಿಕೊಂಡು ಬನ್ನಿ. ಈ ರೀತಿಯಾದ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದು.

35

ಕಲಿಸಿದ ಹಿಟ್ಟನ್ನು ಸ್ಟೋರ್ ಮಾಡೋದು ಹೇಗೆ?

ಚಪಾತಿಗೆ ಹಿಟ್ಟು ಕಲಿಸಿದ ನಂತರ ಅದನ್ನು ಪಾತ್ರೆಯಲ್ಲಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಎತ್ತಿಡಬೇಕು. ಇದರಿಂದ ಹಿಟ್ಟು ನೆನೆದು ಸಾಫ್ಟ್ ಆಗುತ್ತದೆ. ಚಪಾತಿ ಹಿಟ್ಟು ಹೆಚ್ಚಾಗಿ ಉಳಿದ್ರೆ ಅದರ ಮೇಲೆ ನೀರು ಸಿಂಪಡಿಸಿ ಕಾಟನ್ ಬಟ್ಟೆಯಿಂದ ಮುಚ್ಚಬೇಕು. ನಂತರ ಮತ್ತೊಮ್ಮೆ ನೀರು ಸಿಂಪಡಿಸಿ ಪಾತ್ರೆಯಲ್ಲಿರಿಸಿ ಸ್ಟೋರ್ ಮಾಡಬಹುದು.

45

ಈ ರೀತಿಯಾಗಿ ಚಪಾತಿ ಹಿಟ್ಟು ಸ್ಫೋರ್ ಮಾಡೋದರಿಂದ ತುಂಬಾ ಸಮಯದವರೆಗೆ ಹಾಳಾಗುವುದಿಲ್ಲ ಮತ್ತು ತಾಜಾ ಅಗಿರುತ್ತದೆ. ಹಿಟ್ಟನ್ನು ಹದವಾಗಿ ಕಲಿಸಿ, ಕೆಲ ಸಮಯ ನೆನಸಬೇಕು. ಇದರಿಂದ ನೀವು ಮಾಡುವ ಚಪಾತಿ ಮೃದುವಾಗುತ್ತದೆ.

55

ಹಿಟ್ಟು ಕಲಿಸುವಾಗ ಚಿಟಿಕೆಯಷ್ಟು ಉಪ್ಪು, ಒಂದರಿಂದ ಎರಡು ಟೀ ಸ್ಪೂನ್ ಎಣ್ಣೆ ಸೇರಿಸಿಕೊಂಡ್ರೆ ಚಪಾತಿ ರುಚಿಯಾಗುತ್ತದೆ. ಮನೆಯಲ್ಲಿ ಮಕ್ಕಳಿದ್ರೆ ನೀರಿನ ಬದಲಾಗಿ ಹಾಲಿನಲ್ಲಿಯೇ ಹಿಟ್ಟು ಕಲಿಸಿ ಚಪಾತಿ ಮಾಡಬಹುದು.

Read more Photos on
click me!

Recommended Stories