ಮನೆಯಲ್ಲಿರುವ ನಾಲ್ಕು ಬೆಳ್ಳುಳ್ಳಿ ಮತ್ತು ಎರಡು ಮೆಣಸಿನಕಾಯಿ ಬಳಸಿ ಸುಲಭವಾಗಿ ರುಚಿಯಾದ ನಾಲ್ಕು ಅಡುಗೆ ಮಾಡಬಹುದು. ಈ ರೆಸಿಪಿಗಳು ಕಡಿಮೆ ಸಮಯದಲ್ಲಿ ತಯಾರಾಗುವುದರಿಂದ ಬ್ಯಾಚುಲರ್ ಗಳಿಗೆ ಹೆಚ್ಚು ಉಪಯುಕ್ತವಾಗಿವೆ.
ಮನೆಯಲ್ಲಿ ನಾಲ್ಕು ಬೆಳ್ಳುಳ್ಳಿ ಮತ್ತು ಎರಡು ಮೆಣಸಿನಕಾಯಿ ಇದ್ರೆ ರುಚಿಯಾದ ಕೆಲವು ಅಡುಗೆಗಳನ್ನು ಮಾಡಿಕೊಳ್ಳಬಹುದು. ಈ ರೆಸಿಪಿಗಳು ಕಡಿಮೆ ಸಮಯದಲ್ಲಿ ತಯಾರಾಗುತ್ತವೆ ಹಾಗೆಯೇ ವಿಶೇಷವಾದ ರುಚಿಯನ್ನು ಹೊಂದಿರುತ್ತವೆ. ಮನೆಯಲ್ಲಿ ಒಬ್ಬರೇ ಇದ್ದಾಗ ಅಥವಾ ಬ್ಯಾಚೂಲರ್‌ಗಳು ಈ ವಿಧಾನ ಬಳಸಿ ಅಡುಗೆ ತಯಾರಿಸಬಹುದು.
25
ರಸಂ ರೆಸಿಪಿ
ತರಕಾರಿ ಮತ್ತು ಕಡಿಮೆ ಸಮಯದಲ್ಲಿ ಸಾಂಬರ್ ರೀತಿಯ ತಿಳಿಸಾರು ಮಾಡಲು ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಇದ್ರೆ ಸಾಕು. ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ತರಿತರಿಯಾಗಿ ಜಜ್ಜಿಕೊಂಡು, ಒಗ್ಗರಣೆ ಸೇರಿಸಿಕೊಳ್ಳಿ. ನಂತರ ಇದಕ್ಕೆ ಹುಣಸೆ ರಸ, ಚಿಟಿಕೆ ಅರಿಶಿನ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡ್ರೆ ಇನ್‌ಸ್ಟಂಟ್ ಮಾದರಿಯ ತಿಳಿಸಾರು ಅಥವಾ ರಸಂ ರೆಡಿಯಾಗುತ್ತೆ.
35
ಚಿತ್ರನ್ನಾ
ಬಿಸಿಯಾದ ಅನ್ನಕ್ಕೆ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಸೇರಿಸಿದ್ರೆ ಸಿಂಪಲ್ ಚಿತ್ರನ್ನಾ ರೆಡಿಯಾಗುತ್ತೆ. ಒಗ್ಗರಣೆ ಹಾಕಿಕೊಳ್ಳುವಾಗ ಕಡಲೆಬೀಜ, ಸಾಸವೆ, ಜೀರಿಗೆ ಸೇರಿಸಿಕೊಳ್ಳಿ. ನಂತರ ತರಿತರಿಯಾಗಿ ಜಜ್ಜಿಕೊಂಡಿರುವ ಬೆಳ್ಳುಳ್ಳಿ-ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿಕೊಳ್ಳಿ. ಆನಂತರ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಅನ್ನವನ್ನು ಮಿಕ್ಸ್ ಮಾಡಿಕೊಳ್ಳಿ.
ಚಳಿಯಲ್ಲಿ ಬೆಳ್ಳುಳ್ಳಿಯ ಕಷಾಯ ಕುಡಿಯಲು ಹಿತವೆನಿಸುತ್ತದೆ. ಮೊದಲಿಗೆ ಒಂದು ಪಾತ್ರೆ ಒಲೆ ಮೇಲಿಟ್ಟುಕೊಂಡು ಎರಡು ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ಜಜ್ಜಿರುವ ಬೆಳ್ಳುಳ್ಳಿ, ಒಂದು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಾಲ್ಕರಿಂದ ಐದು ನಿಮಿಷ ಕುದಿಸಿಕೊಂಡ್ರೆ ಖಡಕ್ ಕಷಾಯ ರೆಡಿಯಾಗುತ್ತದೆ.
55
ಚಟ್ನಿ
ಇದೇ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಜೊತೆ ಜೀರಿಗೆ ಮತ್ತು ಉಪ್ಪು ಸೇರಿಸಿಕೊಂಡು ರುಬ್ಬಿಕೊಳ್ಳಿ. ನಂತರ ಇದಕ್ಕೆ ಸಾಸವೆ-ಜೀರಿಗೆಯ ಒಗ್ಗರಣೆ ಹಾಕಿಕೊಂಡ್ರೆ ಒಂದೊಳ್ಳೆ ಚಟ್ನಿ ರೆಡಿಯಾಗುತ್ತೆ. ಈ ಚಟ್ನಿ ಬಿಸಿ ಬಿಸಿ ಅನ್ನ ಅಥವಾ ದೋಸೆಗೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.