ಸಾಮಾನ್ಯ ಪಡ್ಡು ಹಿಟ್ಟಿಗೆ ಒಂದು ವಸ್ತು ಸೇರಿಸುವುದರಿಂದ ಅದರ ರುಚಿ ಹೆಚ್ಚುತ್ತದೆ. ಹಾಗೆಯೇ ಈರುಳ್ಳಿಯನ್ನು ಹುರಿದು ಹಿಟ್ಟಿಗೆ ಸೇರಿಸಿದರೆ ಪಡ್ಡು ಹೊರಗಿನಿಂದ ಗರಿಗರಿಯಾಗಿ ಮತ್ತು ಒಳಗಿನಿಂದ ಮೃದುವಾಗಿ ಬರುತ್ತದೆ, ಇದು ಉತ್ತರ ಕರ್ನಾಟಕದ ವಿಶೇಷ ವಿಧಾನವಾಗಿದೆ.
ಬೆಳಗ್ಗೆ ಅಥವಾ ಸಂಜೆ ತಿಂಡಿಗೆ ಏನಾದ್ರೂ ಆರೋಗ್ಯಕರ ತಿಂಡಿ ಮಾಡಲು ಪ್ಲಾನ್ ಮಾಡಿಕೊಂಡಿದ್ರೆ ಪಡ್ಡು ಒಳ್ಳೆಯ ಆಹಾರ. ಸಾಮಾನ್ಯ ಪಡ್ಡು ಮಾಡೋದಕ್ಕಿಂತ ಅದಕ್ಕೆ ಒಂಚೂರು ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ಅದರ ರುಚಿ ಹೆಚ್ಚಾಗುತ್ತದೆ.
25
ಆರೋಗ್ಯಕರ ತಿಂಡಿ
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಎಲ್ಲಾ ಕಡೆಯೂ ಸಂಜೆ ವೇಳೆಗೆ ಪಡ್ಡು ಸೆಂಟರ್‌ಗಳು ಕಾಣಿಸಿಕೊಳ್ಳಲಿವೆ. ಜನರು ಸಹ ಆರೋಗ್ಯಕರ ತಿಂಡಿಗಳತ್ತ ಮುಖ ಮಾಡುತ್ತಿದ್ದಾರೆ. ಫಾಸ್ಟ್‌ಫುಡ್ ಬಿಟ್ಟು ಜನರು ಸಂಜೆಯಾದ್ರೆ ಇಡ್ಲಿ, ಪಡ್ಡು, ದೋಸೆ ಅಂಗಡಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.
35
ಮಸಾಲೆ ಪಡ್ಡು
ಮಸಾಲೆ ಪಡ್ಡು ಅಂದ್ರೆ ಅದರಲ್ಲಿ ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ಇರುತ್ತದೆ. ಇವುಗಳ ಜೊತೆಯಲ್ಲಿ ಮತ್ತೊಂದು ವಿಶೇಷ ವಸ್ತು ಸೇರ್ಪಡೆ ಮಾಡೋದರಿಂದ ಪಡ್ಡಿನ ರುಚಿ ಹೆಚ್ಚಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿಯಾಗಿ ಪಡ್ಡು ತಯಾರಿಸಲಾಗುತ್ತದೆ.
ಪಡ್ಡು ಹಿಟ್ಟಿನಲ್ಲಿ ಮೇಲಿನ ಎಲ್ಲಾ ವಸ್ತು ಹಾಕೋದರ ಜೊತೆ ಕಡಿಮೆ ಪ್ರಮಾಣದಲ್ಲಿ ತೆಂಗಿನಕಾಯಿ ತುರಿ ಅಥವಾ ಸಣ್ಣದಾಗಿ ಕತ್ತರಿಸಿಕೊಂಡಿರುವ ಹಸಿ ಕೊಬ್ಬರಿ ಸೇರಿಸಿಕೊಳ್ಳಬೇಕು. ಪಡ್ಡು ತಿನ್ನುವಾಗ ಮಧ್ಯೆದಲ್ಲಿ ಸಿಗುವ ತೆಂಗಿನಕಾಯಿ ನಿಮಗೆ ಹೊಸ ಅನುಭವವನ್ನು ನೀಡುತ್ತದೆ.
ಈರುಳ್ಳಿಯನ್ನು ಹಿಟ್ಟಿಗೆ ಸೇರಿಸಿಕೊಳ್ಳುವ ಮುನ್ನ ಅದನ್ನು ಕಾವಲಿ ಮೇಲೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡೋದರಿಂದ ಪಡ್ಡು ಹೊರಗಡೆಯಿಂದ ಕ್ರಿಸ್ಪಿ, ಒಳಗಡೆಯಿಂದ ಸಾಫ್ಟ್ ಆಗುತ್ತದೆ. ಹಾಗೆಯೇ ಹಸಿಮೆಣಸಿನಕಾಯಿ ಮತ್ತು ಕೋತಂಬರಿಯನ್ನು ಸಹ ಸಾಧ್ಯವಾದಷ್ಟು ಸಣ್ಣದಾಗಿ ಕತ್ತರಿಸಿಕೊಳ್ಳೋದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.