ಚಳಿಗಾಲದಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟು ಬೇಗನೆ ಹುದುಗುವುದಿಲ್ಲ. ಮಲೆನಾಡಿನ ಜನರು ಸುಲಭವಾದ ಉಪಾಯದಿಂದ ಈ ಸಮಸ್ಯೆಯನ್ನು ಪರಿಹರಿಸುತ್ತಾರೆ. ಈ ಸುಲಭ ಉಪಾಯದಿಂದ ಹಿಟ್ಟು ಬೇಗನೆ ಉಬ್ಬುತ್ತದೆ.
ರಾಜ್ಯದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ, ಮತ್ತೊಂದೆಡೆ ಅಡುಗೆಮನೆಯಲ್ಲೊಂದು ಸಮಸ್ಯೆ ಉದ್ಭವಗೊಳ್ಳುತ್ತದೆ. ಚಿಕ್ಕ ಸಮಸ್ಯೆ ಅನ್ನಿಸಿದ್ರೂ ಇದು ಬೆಳಗ್ಗೆ ತಿಂಡಿ ಮೇಲೆ ನೇರ ಪರಿಣಾಮ ಬೀರುತ್ತದೆ. ಆ ಸಮಸ್ಯೆಯೇ ಇಡ್ಲಿ/ದೋಸೆ ಹಿಟ್ಟು ಹುದುಗುವಿಕೆ. ಚಳಿಗಾಲದಲ್ಲಿ 8 ರಿಂದ 10 ಗಂಟೆ ಮುಂಚೆಯೇ ಹಿಟ್ಟು ರುಬ್ಬಿಕೊಂಡ್ರೂ ಹುದುಗುವಿಕೆ ಬಂದಿರಲ್ಲ.
25
ಹುದುಗುವಿಕೆ ಪ್ರಕ್ರಿಯೆ
ಸಾಮಾನ್ಯ ದಿನಗಳಲ್ಲಿ 4 ರಿಂದ 5 ಗಂಟೆ ಅಕ್ಕಿ-ಉದ್ದಿನಬೇಳೆ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ 5 ರಿಂದ 6 ಗಂಟೆ ನಂತರ ಇಡ್ಲಿ/ದೋಸೆ ಮಾಡಲು ಹಿಟ್ಟು ಸಂಪೂರ್ಣವಾಗಿ ಹುದುಗಿರುತ್ತದೆ. ಆದ್ರೆ ಚಳಿಗಾಲದಲ್ಲಿ ಈ ಹುದುಗುವಿಕೆ ಪ್ರಕ್ರಿಯೆ ತುಂಬಾನೇ ನಿಧಾನವಾಗಿರುತ್ತದೆ. ಈ ಸಮಯದಲ್ಲಿ ಏನು ಮಾಡಬೇಕು ಅನ್ನೋದರ ಟಿಪ್ಸ್ ಇಲ್ಲಿದೆ.
35
ವಿಶೇಷ ಉಪಾಯ ಬಳಸೋ ಮಲೆನಾಡಿನ ಜನರು
ಮಲೆನಾಡು ಭಾಗದಲ್ಲಿ ವರ್ಷದ ಬಹುತೇಕ ದಿನ ಮಳೆ ಇರುತ್ತದೆ. ಆದ್ರೆ ಇಲ್ಲಿಯ ಜನರ ಮನೆಗಳಲ್ಲಿ ದೋಸೆ ಸಾಮಾನ್ಯವಾಗಿರುತ್ತದೆ. ಈ ಭಾಗದಲ್ಲಿ ವಾತಾವರಣ ತಂಪಾಗಿರೋ ಕಾರಣ, ಇಲ್ಲಿಯ ಮನೆಗಳಲ್ಲಿ ಮಹಿಳೆಯರು ವಿಶೇಷ ಉಪಾಯವೊಂದನ್ನು ಬಳಸುತ್ತಾರೆ. ಈ ಉಪಾಯ ಬಳಸಿದ್ರೆ ವಾತಾವರಣ ಎಷ್ಟೇ ಶೀತಮಯವಾಗಿದ್ರೂ ಕಡಿಮೆ ಸಮಯದಲ್ಲಿ ಇಡ್ಲಿ/ದೋಸೆ ಹಿಟ್ಟು ಹುದುಗಿರುತ್ತದೆ.
ರುಬ್ಬಿರುವ ಹಿಟ್ಟನ್ನು ಪಾತ್ರೆಯೊಂದರಲ್ಲಿ ಹಾಕಿಕೊಳ್ಳಿ. ನಂತರ ಈ ಪಾತ್ರೆಮುಖ/ಪಾತ್ರೆಬಾಯಿಯನ್ನು ಕಾಟನ್ ಬಟ್ಟೆಯಿಂದ ಬಿಗಿಯಾಗಿ ಕಟ್ಟಿಕೊಳ್ಳಿ. ನಂತರ ಪ್ಲೇಟ್‌ನಿಂದ ಮುಚ್ಚಳವನ್ನು ಮುಚ್ಚಿಡಿ. ಈ ರೀತಿಯಾಗಿ ಹಿಟ್ಟನ್ನು ಸಂಗ್ರಹಿಸಿದ್ರೆ ಹುದುಗುವಿಕೆ ಪ್ರಕ್ರಿಯೆ ವೇಗ ಹೆಚ್ಚುತ್ತದೆ. ಬಟ್ಟೆಯಿಂದ ಪಾತ್ರೆ ಮುಚ್ಚೋಳದಲ್ಲಿ ಒಳಗೆ ಒತ್ತಡದ ವಾತಾವರಣ ನಿರ್ಮಾಣವಾಗಿ ಹುದುಗುವಿಕೆ ನಡೆಯುತ್ತದೆ.
55
ಬಿಸಿ ವಾತಾವರಣದಲ್ಲಿ ಪಾತ್ರೆಯನ್ನಿಡಿ!
ರುಬ್ಬಿಕೊಂಡಿರುವ ಹಿಟ್ಟಿನ ಪಾತ್ರೆಯನ್ನು ಮನೆಯ ಬಿಸಿ ವಾತಾವರಣದಲ್ಲಿಡಿ. ಉದಾಹರಣೆಗೆ ಅಡುಗೆಯೆಲ್ಲಾ ಮುಗಿದ್ಮೇಲೆ ಒಲೆ ಮೇಲಿಟ್ಟುಕೊಳ್ಳಬಹುದು. ಒಲೆಯ ಬಿಸಿ ಹಿಟ್ಟನ್ನು ಹುದುಗಿಸಲು ಸಹಾಯ ಮಾಡುತ್ತೆ. ಮನೆಯಲ್ಲಿ ಅವನ್ ಇದ್ರೆ, 10 ರಿಂದ 20 ಸೆಕೆಂಡ್ ಟೈಮರ್ ಸೆಟ್ ಮಾಡಿ ಆಫ್ ಮಾಡಿ. ಈ ಟ್ರಿಕ್ಸ್ ನಿಮಗೆ ಯೂಸ್ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.