ಇಡ್ಲಿ-ದೋಸೆ ಎರಡಕ್ಕೂ ಒಂದೇ ಹಿಟ್ಟು ರುಬ್ಬಿಕೊಳ್ಳೋದು ಹೇಗೆ? 2 In 1 ಟಿಪ್ಸ್ ಇಲ್ಲಿದೆ

Published : Nov 24, 2026, 12:37 PM IST

Idli Dosa Batter: ಮಕ್ಕಳು ಹಠ ಮಾಡಿದಾಗ ಇಡ್ಲಿ ಮತ್ತು ದೋಸೆ ಎರಡನ್ನೂ ಒಂದೇ ಹಿಟ್ಟಿನಿಂದ ಸುಲಭವಾಗಿ ಮಾಡಬಹುದು. ಈ ವಿಧಾನ ಬಳಸಿದ್ರೆ ಬಣ್ಣ ಬದಲಾಗದೆ ಇಡ್ಲಿ ಮೃದುವಾಗಿ ಹಾಗೂ ದೋಸೆ ಗರಿಗರಿಯಾಗಿ ಬರುತ್ತದೆ.

PREV
15
ದೋಸೆ ಮತ್ತು ಇಡ್ಲಿ

ಕೆಲವೊಮ್ಮೆ ಮಕ್ಕಳು ತಿಂಡಿ ವಿಷಯದಲ್ಲಿ ಹಠ ಮಾಡುತ್ತಾರೆ. ಒಬ್ಬರು ದೋಸೆ, ಮತ್ತೊಬ್ಬರು ಇಡ್ಲಿ ಕೇಳುತ್ತಾರೆ. ದೋಸೆ ಮತ್ತು ಇಡ್ಲಿ ಮಾಡಲು ಒಂದೇ ಸಾಮಾಗ್ರಿ ಬಳಕೆಯಾದ್ರೆ ರುಬ್ಬುವ ವಿಧಾನ ಕೊಂಚ ಭಿನ್ನವಾಗಿರುತ್ತದೆ. ದೋಸೆಗೆ ನುಣ್ಣಗೆ ಮತ್ತು ಇಡ್ಲಿಗೆ ಕೊಂಚ ರವೆ ಮಾದರಿಯಲ್ಲಿ ರುಬ್ಬಿಕೊಳ್ಳಬೇಕಾಗುತ್ತದೆ.

25
ಇಡ್ಲಿ ಮತ್ತು ದೋಸೆ ಒಂದೇ ಹಿಟ್ಟು ರುಬ್ಬಿಕೊಳ್ಳೋದು ಹೇಗೆ?

ಈ ಲೇಖನದಲ್ಲಿ ಇಡ್ಲಿ ಮತ್ತು ದೋಸೆ ಒಂದೇ ಹಿಟ್ಟು ರುಬ್ಬಿಕೊಳ್ಳೋದು ಹೇಗೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಅಕ್ಕಿ ಮತ್ತು ಉದ್ದಿನಬೇಳೆ ಜೊತೆಯಲ್ಲಿ ಕೆಲವೊಂದು ಧಾನ್ಯಗಳನ್ನು ಸೇರಿಸಿಕೊಳ್ಳಬೇಕು. ಇದು ರುಚಿಯನ್ನು ಹೆಚ್ಚಿಸೋದರ ಜೊತೆ ಆರೋಗ್ಯಕ್ಕೂ ಒಳ್ಳೆಯದು. ತಿಂಡಿಯಲ್ಲಿ ಮಕ್ಕಳಿಗೆ ಹೆಚ್ಚು ಪೋಷಕಾಂಶ ಸಿಕ್ಕಂತಾಗುತ್ತದೆ.

35
ಯಾವ ಧಾನ್ಯಗಳನ್ನು ಸೇರಿಸಿಕೊಳ್ಳಬೇಕು?

ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಮೆಂತ್ಯೆ - ಈ ನಾಲ್ಕು ಪದಾರ್ಥಗಳನ್ನು ಜೊತೆಯಾಗಿ ನೆನೆಸಿಟ್ಟುಕೊಳ್ಳಬೇಕು. ಹಾಗೆಯೇ ಅಕ್ಕಿ ಮತ್ತು ಉದ್ದಿನಬೇಳೆ ಜೊತೆಯಲ್ಲಿಯೇ ಇವುಗಳನ್ನು ರುಬ್ಬಿಕೊಂಡು 6 ರಿಂದ 8 ಗಂಟೆ ಕಾಲ ಹುದುಗಲು ಬಿಡಬೇಕು. ಈ ರೀತಿಯಾಗಿ ಚೆನ್ನಾಗಿ ಹುದುಗಿದ ಹಿಟ್ಟು ನಿಮಗೆ ಟು ಇನ್ ಒನ್ ಬ್ಯಾಟರ್ ಆಗುತ್ತದೆ.

45
ಬಣ್ಣ ಬದಲಾಗಲ್ಲ!

ಕಡಲೆಬೇಳೆ, ತೊಗರಿಬೇಳೆ ಸೇರಿಸಿಕೊಂಡ್ರೆ ಇಡ್ಲಿಯ ಬಣ್ಣ ಬದಲಾಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಕೇವಲ 1 ಟೀ ಸ್ಪೂನ್‌ನಷ್ಟು ಬೇಳೆಕಾಳುಗಳನ್ನು ಸೇರಿಸಕೊಳ್ಳೋದರಿಂದ ಇಡ್ಲಿ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗಲ್ಲ. ಬೇಕಿದ್ರೆ ಇವುಗಳ ಜೊತೆಯಲ್ಲಿ ಹೆಸರುಬೇಳೆಯನ್ನು ಸಹ ಸೇರಿಸಿಕೊಳ್ಳಬಹುದು.

55
ಗರಿಗರಿಯಾದ ದೋಸೆ

ರುಬ್ಬಿಕೊಂಡಿರುವ ಹಿಟ್ಟನ್ನು ಎರಡು ಭಾಗಗಳಾಗಿ ಮಾಡ್ಕೊಳ್ಳಿ. ಇಡ್ಲಿಗೆ ಹಿಟ್ಟು ಗಾಢವಾಗಿರಬೇಕು. ಹಾಗಾಗಿ ಹೆಚ್ಚು ನೀರು ಸೇರಿಸಿಕೊಳ್ಳಬೇಡಿ. ಮತ್ತೊಂದು ಬೌಲ್‌ನಲ್ಲಿ ಹಿಟ್ಟು ತೆಗೆದುಕೊಂಡು ದೋಸೆ ಹದಕ್ಕೆ ಬೇಕಾಗುವ ಪ್ರಮಾಣದಲ್ಲಿ ನೀರು ಸೇರಿಸಿಕೊಳ್ಳಿ. ಬೇಳೆಕಾಳುಗಳು ಸೇರಿಸಿರುವ ಕಾರಣ ದೋಸೆ ಕಲರ್‌ಫುಲ್ ಆಗಿ ಗರಿಗರಿಯಾಗಿ ಬರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories