ಇಂಟರ್‌ನೆಟ್‌ನ ಹೊಸ ಫೆವರೆಟ್‌ ಡ್ರಿಂಕ್‌ - ಡಾಲ್ಗೊನಾ ಕಾಫಿ!

First Published | Apr 7, 2020, 8:15 PM IST

ಕೊರೋನಾ ವೈರಸ್ ಜನರ ಜೀವನವನ್ನು ಅಸ್ವಸ್ಥಗೊಳಿಸಿದೆ. ಕೊರೋನಾ ಎಫೆಕ್ಟ್‌ನ ಲಾಕ್‌ಡೌನ್‌ನಿಂದ ಸೋಶಿಯಲ್‌ ಡಿಸ್ಟೆನ್ಸಿಂಗ್‌ ಮತ್ತು ಮನೆಯಲ್ಲಿಯೇ ಇರುವ ಆದೇಶವೂ ಜಾರಿಯಲ್ಲಿದೆ. ಈ ಸಮಯದಲ್ಲಿ  ಹೊಸ ಅಅಡುಗೆಗಳ ಪ್ರಯೋಗಗಳು ಸಖತ್‌ ಸದ್ದು ಮಾಡುತ್ತಿವೆ. ದಕ್ಷಿಣ ಕೊರಿಯಾದ ಡಾಲ್ಗೊನಾ ಕಾಫಿ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಕಾಫಿ ಪ್ರಿಯರು ತಾವು ತಯಾರಿಸಿದ ಸ್ಪಾಂಜಿ ಕ್ರೀಮಿ ವಿಪ್ಡ್‌ ಕಾಫಿಯ ಫೋಟೋ ವಿಡಿಯೋಗಳು ಪುಲ್‌ ಫೇಮಸ್‌ ಆಗುತ್ತಿವೆ. ಅಷ್ಟಕ್ಕೂ ಏನಿದು ಕಾಫಿ?

ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಆಗಿದೆ ದಕ್ಷಿಣ ಕೊರಿಯಾದ ಡಾಲ್ಗೊನಾ ಕಾಫಿ.
undefined
ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿದೆ ಡಾಲ್ಗೊನಾ ಕಾಫಿಯ ಪೋಟೋ ಹಾಗೂ ವಿಡಿಯೋಗಳು.
undefined

Latest Videos


ಕೊರೋನಾ ಲಾಕ್‌ಡೌನ್‌ ಟೈಮ್‌ಯಲ್ಲಿ ವೈರಲ್‌ ಆಗಿರುವ ಈ ವಿಪ್ಡ್‌ ಕಾಫಿ ‘ಕ್ಯಾರೆಂಟೈನ್ ಕಾಫಿ’ ಎಂದೇ ಫೇಮಸ್.
undefined
ಸ್ಪಾಂಜಿ ಕ್ರೀಮಿ ಕಾಫಿ ಮಾಡೋಕ್ಕೆ ಬೇಕಾಗಿರುವುದು ಇನ್‌ಸ್ಟೆಂಟ್‌ ಕಾಫಿ ಪುಡಿ, ಹಾಲು ಹಾಗೂ ಸಕ್ಕರೆ.
undefined
ಸಮ ಪ್ರಮಾಣದ ಇನ್‌ಸ್ಟೆಂಟ್‌ ಕಾಫಿ ಪುಡಿ, ಸಕ್ಕರೆ ಮತ್ತು ಬಿಸಿ ನೀರನ್ನು ಚೆನ್ನಾಗಿ ಬೀಟ್‌ ಮಾಡ್ಬೇಕು.
undefined
ಎಲೆಕ್ಟ್ರಿಕ್‌ ಬೀಟರ್‌ನಲ್ಲಿ ಆದರೆ 3 ನಿಮಿಷ ಸಾಕು, ಚಮಚದಲ್ಲಿ 8-12 ನಿಮಿಷ ಬೀಟ್‌ ಮಾಡಿದರೆ ಕಾಫಿ ಕ್ರೀಮ್‌ ರೆಡಿ.
undefined
ಉದ್ದದ ಗಾಜಿನ ಲೋಟಕ್ಕೆ ಹಾಲು ಸುರಿದು ಮೇಲೆ ಬೀಟ್‌ ಮಾಡಿದ ಮಿಶ್ರಣ ಹಾಕಿದರೆ ತಯಾರು ಆಗುತ್ತೆ ಡಾಲ್ಗೊನಾ ಕಾಫಿ.
undefined
ಕೋಲ್ದ್‌ ಯಾ ಹಾಟ್‌ ಡಾಲ್ಗೊನಾ ಕಾಫಿ ಕುಡಿಯೋದು ನಿಮ್ಮ ಛಾಯ್ಸ್‌. ಚಿಲ್ದ್‌ ಕಾಫಿಗಾಗಿ ಲೋಟಕ್ಕೆ ಹಾಲಿನೊಂದಿಗೆ ಐಸ್‌ ಕ್ಯೂಬ್‌ ಸೇರಿಸಿಕೊಳ್ಳಿ. ಹಾಟ್‌ ಕಾಫಿ ಇಷ್ಟಪಡೋವರು ಬಿಸಿ ಹಾಲಿನ ಮೇಲೆ ಕ್ರೀಮ್‌ ಹಾಕಿ ಕೊಳ್ಳಬಹುದು.
undefined
ಕೆಲವೊಮ್ಮೆ ಇನ್‌ಸ್ಟೆಂಟ್‌ ಕಾಫಿ ಪುಡಿ, ಬಿಸ್ಕತ್‌ ಪುಡಿ ಅಥವಾ ಜೇನುತುಪ್ಪವನ್ನೂ ಕಾಫಿ ಟಾಪಿಂಗ್‌ ಆಗಿ ಬಳಸಲಾಗುತ್ತದೆ.
undefined
click me!