Easy pickle recipe: ನೀವು ಎಣ್ಣೆಯೊಂದಿಗೆ ಮಾಡಿದ ಉಪ್ಪಿನಕಾಯಿ ರುಚಿ ನೋಡಿರಬಹುದು. ಆದರೆ ನೀರಿನಲ್ಲಿ ಮಾಡಿದ ಉಪ್ಪಿನಕಾಯಿ ಸೇವಿಸಲು ಬಯಸುತ್ತೀರಾ?, ಹೌದು ಎಂದಾದರೆ ಇಂದು ನಾವು ನಿಮಗೆ ಈಸಿಯಾಗಿ ನೀರಿನಲ್ಲಿ ಉಪ್ಪಿನಕಾಯಿ ಮಾಡೋದು ಹೇಗೆಂದು ಹೇಳಲಿದ್ದೇವೆ.
ಸಾಮಾನ್ಯವಾಗಿ ಉಪ್ಪಿನಕಾಯಿಯ ಹೆಸರು ಕೇಳಿದರೇನೇ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ತಿಳಿಸಾರು, ಮೊಸರಿನ ಜೊತೆ ಮಾತ್ರವಲ್ಲ, ಅನೇಕ ರೆಸಿಪಿಗಳ ಜೊತೆಗೂ ಉಪ್ಪಿನಕಾಯಿಯನ್ನ ಸೈಡ್ ಆಗಿ ಬಳಕೆ ಮಾಡ್ತಾರೆ. ಅಂದಹಾಗೆ ಅಜ್ಜಿಯರು ತಮ್ಮ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಉಪ್ಪಿನಕಾಯಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತಿದ್ದರು. ಇಂದಿಗೂ ಅನೇಕ ಮನೆಗಳು ಮಾವು ಮತ್ತು ಇತರ ತರಕಾರಿಗಳಿಂದ ಉಪ್ಪಿನಕಾಯಿ ತಯಾರಿಸಿ ವರ್ಷವಿಡೀ ಬಳಕೆಗಾಗಿ ಸಂಗ್ರಹಿಸುತ್ತಾರೆ.
26
ನೀರಿನಿಂದ ಮಾಡಿದ ಉಪ್ಪಿನಕಾಯಿ
ನೀವು ಎಣ್ಣೆಯಿಂದ ಮಾಡಿದ ಉಪ್ಪಿನಕಾಯಿಯನ್ನು ರುಚಿ ನೋಡಿರಬಹುದು. ಆದರೆ ನೀರಿನಿಂದ ಮಾಡಿದ ಉಪ್ಪಿನಕಾಯಿಯನ್ನು ಸೇವಿಸಲು ಬಯಸುತ್ತೀರಾ?. ಹೌದು ಎಂದಾದರೆ ಇಂದು ನಾವು ನಿಮಗೆ ಉಪಯುಕ್ತವಾದ ಉಪ್ಪಿನಕಾಯಿ ಮಾಡುವ ವಿಧಾನದ ಬಗ್ಗೆ ಹೇಳಲಿದ್ದೇವೆ.
36
ವಿಶೇಷವಾದ ನೀರಿನ ಉಪ್ಪಿನಕಾಯಿ
ಉಪ್ಪಿನಕಾಯಿ ಮಾಡುವಾಗ ಎಣ್ಣೆಯನ್ನು ಬಳಸಲಾಗುತ್ತದೆ ಅಲ್ಲವೇ. ಆದರೆ ಇಂದು ಇಲ್ಲಿ ಚಳಿಗಾಲದಲ್ಲಿ ವಿಶೇಷವಾದ ನೀರಿನ ಉಪ್ಪಿನಕಾಯಿ ಮಾಡುವುದು ಹೇಗೆಂದು ಕೊಡಲಾಗಿದೆ. ಇದನ್ನು ಕ್ಯಾರೆಟ್, ಹಸಿರು ಈರುಳ್ಳಿ ಇತ್ಯಾದಿಗಳಿಂದ ತಯಾರಿಸಬಹುದು.
2 ಕ್ಯಾರೆಟ್. 150 ಗ್ರಾಂ ಈರುಳ್ಳಿ ಸೊಪ್ಪು. 1 ಮೂಲಂಗಿ. 2 ಟೀ ಚಮಚ ಒರಟಾಗಿ ಪುಡಿಮಾಡಿದ ಸಾಸಿವೆ. 2 ಟೀ ಚಮಚ ಹಳದಿ ಸಾಸಿವೆ ಪುಡಿ. 1 ಟೀ ಚಮಚ ಕಾರದ ಪುಡಿ (ಖಾರ ಬೇಕಾದರೆ ಪ್ರಮಾಣ ಹೆಚ್ಚಿಸಬಹುದು). ಚಿಟಿಕೆ ಅರಿಶಿನ, ಕಪ್ಪು ಮತ್ತು ಬಿಳಿ ಉಪ್ಪು ರುಚಿಗೆ ತಕ್ಕಷ್ಟು. ಸುಮಾರು 2 ರಿಂದ 3 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ. 1/4 ಟೀ ಚಮಚ ಇಂಗು. ನಿಮಗೆ ಬೇಕಾಗಿರುವುದು ಅತ್ಯಂತ ಮುಖ್ಯವಾದ ವಿಷಯವೆಂದರೆ ಫಿಲ್ಟರ್ ಮಾಡಿದ ನೀರು.
56
ತಯಾರಿಸುವ ವಿಧಾನ
*ಮೊದಲನೆಯದಾಗಿ ನೀವು ಕ್ಯಾರೆಟ್ ಮತ್ತು ಮೂಲಂಗಿಯನ್ನು ತೊಳೆದು ಸಿಪ್ಪೆ ಸುಲಿದು ನಂತರ ಸಣ್ಣ ತುಂಡುಗಳಾಗಿ ಕಟ್ ಮಾಡಿಟ್ಟುಕೊಳ್ಳಬೇಕು. *ಕ್ಯಾರೆಟ್ ಮತ್ತು ಮೂಲಂಗಿಗಳಂತೆ ಈರುಳ್ಳಿ ಸೊಪ್ಪನ್ನು ಸ್ವಚ್ಛಗೊಳಿಸಿದ ನಂತರ ಅವುಗಳನ್ನೂ ನುಣ್ಣಗೆ ಕತ್ತರಿಸಬೇಕು. *ಈಗ ಒಂದು ಗಾಜಿನ ಜಾರ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಕ್ಯಾರೆಟ್, ಮೂಲಂಗಿ ಮತ್ತು ಈರುಳ್ಳಿ ಸೊಪ್ಪನ್ನು ಹಾಕಿ. *ಈಗ ಒರಟಾಗಿ ಪುಡಿಮಾಡಿದ ಸಾಸಿವೆ ಮತ್ತು ಹಳದಿ ಸಾಸಿವೆ ಪುಡಿ ಎರಡನ್ನೂ ಸೇರಿಸಿ. *ಅದೇ ರೀತಿ, ಇಂಗು, ಕಾರದಪುಡಿ, ಕಪ್ಪು ಅರಿಶಿನ ಮತ್ತು ಬಿಳಿ ಉಪ್ಪನ್ನು ಜಾರ್‌ಗೆ ಸೇರಿಸಿ. *ನಿಮ್ಮ ಉಪ್ಪಿನಕಾಯಿ ಮಿಶ್ರಣ ಸಿದ್ಧವಾಗುತ್ತದೆ. *ಈಗ ಸಾಸಿವೆ ಎಣ್ಣೆಯನ್ನು ಸೇರಿಸಿ ಒಂದು ಚಮಚದೊಂದಿಗೆ ಮಿಶ್ರಣ ಮಾಡಿ, ನಂತರ ಜಾರ್ ಅನ್ನು ನೀರಿನಿಂದ ತುಂಬಿಸಿ. ಮೇಲ್ಭಾಗದಲ್ಲಿ ಸ್ವಲ್ಪ ಜಾಗವನ್ನು ಬಿಡಿ.
66
ಮೂರು ದಿನಗಳ ನಂತರ ಉಪ್ಪಿನಕಾಯಿ ತಿನ್ನಲು ಸಿದ್ಧ
ಜಾರ್ ಮೇಲೆ ಮುಚ್ಚಳ ಹಾಕಿ. ಕನಿಷ್ಠ ಮೂರು ದಿನಗಳವರೆಗೆ ಹಾಗೆಯೇ ಬಿಡಿ. ಇದರಿಂದ ಅದು ಸರಿಯಾಗಿ ಹುದುಗುತ್ತದೆ. ಮೂರು ದಿನಗಳ ನಂತರ ಉಪ್ಪಿನಕಾಯಿ ತಿನ್ನಲು ಸಿದ್ಧವಾಗುತ್ತದೆ. ನೀವು ಅದನ್ನು ಅನ್ನ ಮತ್ತು ಬೇಳೆಗಳೊಂದಿಗೆ ತಿನ್ನಬಹುದು ಅಥವಾ ನೀವು ದ್ರವವನ್ನು ಸಹ ಕುಡಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.