ಅತಿಥಿಗಳು ಬಂದಾಗ ಐದೇ ನಿಮಿಷದಲ್ಲಿ ತಯಾರಿಸಿ ರುಚಿಕರವಾದ ರಸಂ!

First Published Sep 15, 2024, 5:33 PM IST

ಕೆಲವೊಮ್ಮೆ ಅತಿಥಿಗಳು ಬಂದಾಗ ತರಕಾರಿಯೇ ಇರಲ್ಲ. ಇಂತಹ ಸಮಯದಲ್ಲಿ ರುಚಿಯಾದ ರಸಂ ಹೇಗೆ ಮಾಡಬೇಕು ಅನ್ನೋದರ ರೆಸಿಪಿ ಇಲ್ಲಿದೆ. ಇದು ಜಸ್ಟ್ ಐದು ನಿಮಿಷದಲ್ಲಿ ಸಿದ್ಧವಾಗುವ ಫಟ್‌ಫಟಾ ರೆಸಿಪಿ.

ರುಚಿಕರವಾದ ರಸಂ ಇದ್ರೆ ಸಾಕು ಹೊಟ್ಟೆ ತುಂಬಾ ಊಟ ಮಾಡಬಹುದು. ಒಂದು ಟೊಮೆಟೋ ಬಳಸಿ ನಾಲ್ಕರಿಂದ ಐದು ಜನರಿಗೆ ಬೇಕಾಗುವಷ್ಟು ರಸಂ ತಯಾರಿಸಬಹಹುದು. ಬಿಸಿ ಬಿಸಿ ಅನ್ನಕ್ಕೆ ರಸಂ, ಸೈಡ್‌ಗೆ ಉಪ್ಪಿನಕಾಯಿ ತುಂಡು ಇದ್ರೆ ಬೇರಾವ ಅಡುಗೆಯೂ ಬೇಕಾಗುವುದಿಲ್ಲ.

ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು

ಒಂದು ಟೀ ಸ್ಪೂನ್: ಜೀರಿಗೆ, ಆರ್ಧ ಟೀ ಸ್ಪೂನ್: ಕಾಳು ಮೆಣಸು, ನಾಲ್ಕು ಲವಂಗ, ಟೊಮೆಟೋ 1, ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣು, ಸಾಸವೆ: ಅರ್ಧ ಟೀ ಸ್ಪೂನ್, ಕರೀಬೇವು: 5 ರಿಂದ 6 ದಳ, ಕೋತಂಬರಿ ಸೊಪ್ಪು: ಸ್ವಲ್ಪ, ಎಣ್ಣೆ: ಎರಡು ಟೀ ಸ್ಪೂನ್, ಅರಿಶಿನ: ಚಿಟಿಕೆ, ಹಸಿಮೆಣಸಿನಕಾಯಿ: ಎರಡು, ಬೆಳ್ಳುಳ್ಳಿ: 6 ರಿಂದ 7 ಎಸಳು, ಉಪ್ಪು: ರುಚಿಗೆ ತಕ್ಕಷ್ಟು

Latest Videos


ರಸಂ ಮಾಡುವ ವಿಧಾನ

ಮೊದಲಿಗೆ ಅರ್ಧ ಟೀ ಸ್ಪೂನ್ ಜೀರಿಗೆ, ಕಾಳುಮೆಣಸು, ಲವಂಗ ಹಾಗೂ ಬೆಳ್ಳುಳ್ಳಿ ಹಾಕಿ ಮಿಕ್ಸಿ ಜಾರ್‌ನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಬೌಲ್‌ನಲ್ಲಿ ನೀರು ಹಾಕಿ, ಅದಕ್ಕೆ ಹುಣಸೆಹಣ್ಣು ಸೇರಿಸಿ ನೆನಸಿಟ್ಟುಕೊಳ್ಳಿ. ನಂತರ ಒಲೆ ಆನ್ ಮಾಡ್ಕೊಂಡು ಪಾತ್ರೆ ಇಟ್ಕೊಳ್ಳಿ. ಪಾತ್ರೆ ಬಿಸಿಯಾಗ್ತಿದ್ದಂತೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ-ಜೀರಿಗೆ ಹಾಕಿಕೊಳ್ಳಬೇಕು.

ಸಾಸವೆ ಚಟಪಟ ಅಂತ ಸಿಡಿಯುತ್ತಿದ್ದಂತೆ ಉದ್ದವಾಗಿ ಕತ್ತರಿಸಿಕೊಂಡಿರುವ ಹಸಿಮೆಣಸಿನಕಾಯಿ ಸೇರಿಸಿ. ಆನಂತರ ಕರೀಬೇವು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಈಗ ತರಿತರಿಯಾಗಿ ರುಬ್ಬಿಕೊಂಡಿರುವ ಮಸಾಲೆಯನ್ನು ಒಗ್ಗರಣೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು.

ಈಗ ಹುಣಸೆಹಣ್ಣಿನ ರಸ, ಎರಡು ಗ್ಲಾಸ್‌ನಷ್ಟು ನೀರು ಸೇರಿಸಬೇಕು. ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತ್ತಂಬರಿ ಸೊಪ್ಪು ಸೇರಿಸಿ ಉಗಿ ಬರೋವರೆಗೂ ಕುದಿಸಿದರೆ ರುಚಿಯಾದ ರಸಂ ಸಿದ್ದವಾಗುತ್ತದೆ. (ಕೆಲವರು ಸ್ವಲ್ಪ ಬೆಲ್ಲ ಬಳಸುತ್ತಾರೆ. ಬೇಕಿದ್ದರೆ ಸೇರಿಸಿಕೊಳ್ಳಬಹುದು)

click me!