ಮೆತ್ತನೆಯ ಚಪಾತಿ ಬೇಕೆಂದ್ರೆ ಹಿಟ್ಟನ್ನು ಬೆರೆಸುವಾಗ ಈ ರೀತಿ ನೀರನ್ನು ಸೇರಿಸಿ, ನಂತ್ರ ಮ್ಯಾಜಿಕ್ ನೋಡಿ

Published : Feb 24, 2026, 02:46 PM IST

How to make soft roti: ನೀವು ಕೂಡ ಮನೆಯಲ್ಲಿ ಹತ್ತಿಯಂತೆ ಮೃದುವಾದ ಚಪಾತಿ ತಯಾರಿಸಲು ಬಯಸಿದರೆ, ನಾವಿಲ್ಲಿ ಹಿಟ್ಟು ಕಲಸುವ ಒಂದು ವಿಶೇಷ ಟ್ರಿಕ್ ತಿಳಿಸಿಕೊಡುತ್ತೇವೆ. ಇದರ ಸಹಾಯದಿಂದ ನೀವು ಯಾವುದೇ ಕಷ್ಟವಿಲ್ಲದೆ ಪರ್ಫೆಕ್ಟ್ ಚಪಾತಿ ತಯಾರಿಸಬಹುದು.

PREV
16
ಹಿಟ್ಟು ಕಲಸುವ ವಿಧಾನ (Kneading Dough Method)

ಮನೆಯಲ್ಲಿ ಅಡುಗೆ ಮಾಡುವುದು ಎಂದರೆ ಅನೇಕರಿಗೆ ಇಷ್ಟ. ಆದರೆ ಚಪಾತಿ ಮಾಡುವ ವಿಷಯ ಬಂದಾಗ, ಆ ಪ್ರಕ್ರಿಯೆ ಸ್ವಲ್ಪ ದೀರ್ಘ ಮತ್ತು ಬೇಸರದ ಕೆಲಸ ಎಂದು ಜನರಿಗೆ ಅನಿಸುತ್ತದೆ. ಏಕೆಂದರೆ ಚಪಾತಿ ಮಾಡಲು ಮೊದಲು ಹಿಟ್ಟನ್ನು ಹದವಾಗಿ ಕಲಸಬೇಕು. ನಂತರ ಲಟ್ಟಿಸಿ ಬೇಯಿಸಬೇಕು. ಆದರೆ ಹಲವು ಬಾರಿ ಚಪಾತಿ ಮಾಡಿದ ನಂತರ ಅದು ಗಟ್ಟಿಯಾಗುತ್ತದೆ ಎಂಬ ದೂರೂ ಇದೆ.

26
ಹಿಟ್ಟು ಕಲಸುವ ಟ್ರಿಕ್

ಚಪಾತಿಯನ್ನು ಮೃದುವಾಗಿಸಲು ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಇದಕ್ಕಾಗಿ ಚಪಾತಿ ತಯಾರಿಕೆಯ ಮೊದಲ ಹಂತವಾದ ಹಿಟ್ಟನ್ನು ಸರಿಯಾಗಿ ಕಲಸುವುದನ್ನು ನೀವು ಕಲಿಯಬೇಕು. ಆಗ ಮಾತ್ರ ನಿಮ್ಮ ಚಪಾತಿ ಪರ್ಫೆಕ್ಟ್ ಆಗಿ ಬರುತ್ತದೆ. ಹಾಗಾದರೆ ಬನ್ನಿ, ಚಪಾತಿ ತಯಾರಿಕೆಯಲ್ಲಿ ಎಕ್ಸ್‌ಪರ್ಟ್ಸ್ ಹೇಗೆ ಹಿಟ್ಟು ಕಲಸುತ್ತಾರೆ ಎಂಬ ಟ್ರಿಕ್ ತಿಳಿಯೋಣ.

36
ಹಿಟ್ಟು ಕಲಸುವ ಹೊಸ ವಿಧಾನ

ಹಿಟ್ಟು ಕಲಸಲು ಸಾಮಾನ್ಯವಾಗಿ ಜನರು ಪಾತ್ರೆಯಲ್ಲಿ ಹಿಟ್ಟು ತೆಗೆದುಕೊಂಡು ನಂತರ ಅದಕ್ಕೆ ನಿಧಾನವಾಗಿ ನೀರು ಹಾಕುತ್ತಾ ಕಲಸುತ್ತಾರೆ. ಆದರೆ ನಿಮ್ಮ ಹಿಟ್ಟನ್ನು ಸರಿಯಾದ ರೀತಿಯಲ್ಲಿ ಕಲಸಲು ಸಹಾಯ ಮಾಡುವ ಒಂದು ತಂತ್ರವನ್ನು ನಾವು ನಿಮಗೆ ಹೇಳುತ್ತೇವೆ. ನೀವು ಲೋಟ ಅಥವಾ ಬಟ್ಟಲಿನಿಂದ ನೀರು ಹಾಕಿದಾಗ, ನೀರು ಒಂದೇ ಕಡೆ ಹೆಚ್ಚು ಬಿದ್ದು ಹಿಟ್ಟು ಅತಿಯಾಗಿ ಮೆತ್ತಗಾಗುವ ಸಾಧ್ಯತೆ ಇರುತ್ತದೆ.

46
ಸಮಾನವಾಗಿ ನೀರು ಬೀಳುತ್ತೆ

ಈ ಹೊಸ ಟ್ರಿಕ್‌ನಲ್ಲಿ, ಟ್ಯಾಪ್‌ (Tap) ನೀರಿನಡಿ ಹಿಡಿದಾಗ ಇಡೀ ಹಿಟ್ಟಿನ ಮೇಲೆ ಸಮಾನವಾಗಿ ನೀರು ಬೀಳುತ್ತದೆ. ಇದರಿಂದ ಹಿಟ್ಟಿನ ಪ್ರತಿಯೊಂದು ಕಣಕ್ಕೂ ಸಮನಾದ ತೇವಾಂಶ ಸಿಗುತ್ತದೆ.

56
ಈಗ ಕಲಸುವುದು ಹೇಗೆ?

ಹಿಟ್ಟು ಕಲಸಲು ಮೊದಲು ಒಂದು ಪಾತ್ರೆಯಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಇಡೀ ಹಿಟ್ಟಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಆ ಪಾತ್ರೆಯನ್ನು ಟ್ಯಾಪ್‌ ಕೆಳಗೆ ಇರಿಸಿ ಮತ್ತು ಚಿಕ್ಕದಾಗಿ ನೀರು ಬಿಟ್ಟುಕೊಳ್ಳಿ. ನೀರು ಹಿಟ್ಟಿನ ಮೇಲೆ ಬೀಳುವಂತೆ ಮಾಡಿ, ಪಾತ್ರೆಯನ್ನು ಗೋಲಾಕಾರದಲ್ಲಿ (Round) ಸುತ್ತಿಸುತ್ತಿರಿ. ಹೀಗೆ ಮಾಡುವುದರಿಂದ ನೀರು ಒಂದೇ ಕಡೆ ಜಮೆಯಾಗುವುದಿಲ್ಲ ಮತ್ತು ಇಡೀ ಹಿಟ್ಟು ನಿಧಾನವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದೇ ಚಲನೆಯು ಹಿಟ್ಟನ್ನು ಸಮಾನವಾಗಿ ನೆನೆಯುವಂತೆ ಮಾಡುವ ಅಸಲಿ ರಹಸ್ಯ.

66
ಪರ್ಫೆಕ್ಟ್ ಹಿಟ್ಟು ಸಿದ್ಧ

ಹಿಟ್ಟು ಪೂರ್ತಿಯಾಗಿ ನೆನೆದಿದೆ ಎಂದು ನಿಮಗೆ ಅನಿಸಿದಾಗ ಟ್ಯಾಪ್ ಬಂದ್ ಮಾಡಿ. ಈಗ ಹಿಟ್ಟನ್ನು 4-5 ನಿಮಿಷಗಳ ಕಾಲ ಕೈಯಿಂದ ಚೆನ್ನಾಗಿ ನಾದಿ. ಈಗ ನಿಮ್ಮ ಪರ್ಫೆಕ್ಟ್ ಹಿಟ್ಟು ಸಿದ್ಧವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories