ಹೀಗೆ ಮಾಡಿ,ಬೇಸಿಗೆಯಲ್ಲೂ ಎರಡು ದಿನವಾದರೂ ಹಾಲು ಒಡೆಯೋಲ್ಲ!

Suvarna News   | Asianet News
Published : Apr 29, 2021, 04:54 PM IST

ಪ್ರತಿಯೊಂದು ಮನೆಯಲ್ಲೂ ಹಾಲು ಅತಿ ಅವಶ್ಯಕ. ಬೆಳಗ್ಗಿನ ಕಾಫಿ/ಚಹಾದಿಂದ ಹಿಡಿದು ಊಟದ ರಾತ್ರಿ ಮಲುಗುವ ಮುನ್ನ ಕುಡಿಯುವ ವರೆಗೆ ಹಾಲು ಬಳಕೆಯಾಗತ್ತದೆ.  ಬೇಸಿಗೆಯಲ್ಲಿ ಕೋಲ್ಡ್ ಕಾಫಿಯಿಂದ ಕೋಲ್ಡ್ ಮಿಲ್ಕ್‌ಶೇಕ್‌ಗಳಿಗೆ ಸಹ ಬೇಕೆ ಬೇಕು. ಆದರೆ ಬೇಸಿಗೆಯ ದಿನಗಳಲ್ಲಿ ಹಾಲು ಒಡೆದು ಹೋಗುವ ಸಮಸ್ಯೆ ಹೆಚ್ಚು. ಫ್ರಿಜ್‌ನಲ್ಲಿ ಇಟ್ಟ ನಂತರವೂ ಹಾಲು ಒಡೆಯುತ್ತದೆ. ಈ ಟ್ರಿಕ್‌ನಿಂದ ಹಾಲನ್ನು 2 ದಿನಗಳವರೆಗೆ ಪ್ರೆಶ್‌ ಆಗಿ ಇರಿಸಿಕೊಳ್ಳಬಹುದು.

PREV
19
ಹೀಗೆ ಮಾಡಿ,ಬೇಸಿಗೆಯಲ್ಲೂ ಎರಡು ದಿನವಾದರೂ ಹಾಲು ಒಡೆಯೋಲ್ಲ!

ಮೊದಲನೆಯದಾಗಿ, ಹಾಲನ್ನು ತಂದ ಕೂಡಲೇ ಹಾಲು ಬಿಸಿಮಾಡಲು ಇರಿಸಿ. ಬೇಸಿಗೆಯಲ್ಲಿ ಹಸಿ ಹಾಲು ಬೇಗನೆ ಒಡೆಯುತ್ತದೆ.

29

ಹಾಲನ್ನು ಕಾಯಿಸುವ ಪಾತ್ರೆ ಸ್ವಚ್ಛವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಸ್ವಲ್ಪ ಸೋಪಿನ ಅಂಶ ಉಳಿದರೂ ಕೂಡ ತಕ್ಷಣ ಹಾಲು ಒಡೆಯಬಹುದು.

39

ಪಾತ್ರೆಗೆ ಹಾಲು ಹಾಕುವ ಮೊದಲು, ಪಾತ್ರೆಗೆ ಸ್ವಲ್ಪ ನೀರು ಹಾಕಿ. ಈ ಕಾರಣದಿಂದಾಗಿ, ಹಾಲು ಕೆಳಗೆ ಅಂಟಿಕೊಳ್ಳುವುದಿಲ್ಲ ಮತ್ತು ಕೆನೆ ಕೂಡ ಮೇಲೆ ಸಂಗ್ರಹವಾಗುತ್ತದೆ. 

49

ಯಾವಾಗಲೂ ಮಧ್ಯಮ ಉರಿಯಲ್ಲಿಹಾಲನ್ನು ಕಾಯಿಸಿ. ಹಾಲು ಕುದಿಯಲು ಪ್ರಾರಂಭಿಸಿದ ನಂತರ, ಶಾಖವನ್ನು ಕಡಿಮೆ ಮಾಡಿ ಮತ್ತು 2-3 ನಿಮಿಷ ಕಾಯಿಸಿ.

59

ಬಿಸಿ ಹಾಲನ್ನು ಫ್ರಿಜ್‌ನಲ್ಲಿ ಇಡಬೇಡಿ. ನಾಲ್ಕೈದು ಗಂಟೆಗಳ ನಂತರ, ಹಾಲು ಕೋಣೆಯ ಉಷ್ಣಾಂಶಕ್ಕೆ ಬಂದಾಗ, ಅದನ್ನು ಮತ್ತೊಮ್ಮೆ ಚೆನ್ನಾಗಿ ಕುದಿಸಿ ಮತ್ತು ಸಂಪೂರ್ಣವಾಗಿ ತಣ್ಣಗಾದ ನಂತರವೇ ಫ್ರಿಜ್‌ನಲ್ಲಿಡಿ.

69

ಹಾಲನ್ನು ಬೇಗ ತಣ್ಣಗಾಗಿಸಲು, ದೊಡ್ಡ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರ ಒಳಗೆ  ಹಾಲಿನ ಪಾತ್ರೆಯನ್ನು ಇಡಿ.

79

ಹಾಲು ಬೇಗನೆ ಒಡೆಯಬಾರದು ಮತ್ತು ಕನಿಷ್ಠ 2 ದಿನಗಳವರೆಗೆ ಫ್ರೆಶ್‌ ಆಗಿರಬೇಕೆಂದು ಬಯಸಿದರೆ, 3 ರಿಂದ 4 ಬಾರಿ ಚೆನ್ನಾಗಿ ಕಾಯಿಸಬೇಕು.

89

 ತುಂಬಾ ಬಿಸಿಯಾದ ಅಥವಾ ತಣ್ಣನೆಯ ಹಾಲು ಒಡೆಯುವುದ್ದಿಲ್ಲ.  

99

ಹಾಲು ರೂಮ್‌ ಟೆಂಪರೇಚರ್‌ನಲ್ಲಿ ಒಡೆಯುವ ಚಾನ್ಸ್‌ ಹೆಚ್ಚು. ಆದ್ದರಿಂದ  ಹಾಲು ಸಾಮಾನ್ಯ ತಾಪಮಾನಕ್ಕೆ ಬಂದ ತಕ್ಷಣ ಫ್ರಿಜ್‌ನಲ್ಲಿಡಿ. 

click me!

Recommended Stories