ಹೀಗಿಟ್ಟರೆ ಹಸಿ ಬಟಾಣಿ ಹೆಚ್ಚು ಕಾಲ ಫ್ರೆಶ್ ಆಗಿರುತ್ತೆ!

First Published | Dec 1, 2020, 5:00 PM IST

ಚಳಿಗಾಲದ ಸೀಸನ್‌ ಬಂದ ಕೂಡಲೆ ಮಾರುಕಟ್ಟೆಯಲ್ಲಿ ಫ್ರೆಶ್‌ ಹಸಿ ಬಟಾಣಿಗಳು ಸಿಗುತ್ತವೆ. ಹಸಿರು ಬಟಾಣಿ ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಆದರೆ ಇದನ್ನು ಹೆಚ್ಚು ಕಾಲ ತಾಜಾವಾಗಿ ಇಡುವುದೇ  ಒಂದು ಸಮಸ್ಯೆ. ಬಟಾಣಿಗಳನ್ನು ಸ್ಟೋರ್‌ ಮಾಡುವ ವಿಧಾನ ಇಲ್ಲಿದೆ. 

ಒಣಗಿದ ಬಟಾಣಿಗಳು ಯಾವಾಗಲೂ ದೊರೆತರೂ ಫ್ರೆಶ್‌ ಹಸಿರು ಬಟಾಣಿಗಳ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ತಾಜಾ ಬಟಾಣಿ ನವೆಂಬರ್ ಆರಂಭದಿಂದ ಮಾರ್ಚ್ವರೆಗೆ ಎಲ್ಲರ ಅಡುಗೆಮನೆಯಲ್ಲಿ ಧಾರಾಳವಾಗಿ ಕಂಡುಬರುತ್ತದೆ.
ಬಟಾಣಿ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯದ ದೃಷ್ಟಿಯಲ್ಲೂ ಸೂಪರ್ ಫುಡ್. ಅದರಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ. ಅಲ್ಲದೆ, ಹಸಿರು ಬಟಾಣಿಗಳಲ್ಲಿ ಜೀವಸತ್ವಗಳು ಸಮೃದ್ಧವಾಗಿವೆ
Tap to resize

ಮಾರುಕಟ್ಟೆಯಿಂದ ಹೆಚ್ಚಿನ ಬಟಾಣಿಗಳನ್ನು ತಂದಾಗ ಅವುಗಳನ್ನುಸರಿಯಾಗಿ ಸ್ಟೋರ್‌ ಮಾಡಲು ಸಾಧ್ಯವಾಗದ ಕಾರಣ ಬೇಗನೆ ಹಾಳಾಗುತ್ತದೆ.
ಬಟಾಣಿಗಳನ್ನು ಸಂರಕ್ಷಿಸಲು ಯಾವಾಗಲೂ ಹಸಿರು ತಾಜಾ ಬಟಾಣಿ ಆರಸಿಕೊಳ್ಳಿ. ಅದನ್ನು ಸಿಪ್ಪೆಗಳೊಂದಿಗೆ ಸ್ಟೋರ್‌ ಮಾಡಲು ಬಯಸಿದರೆ, ಅದನ್ನು ಫೇಪರ್‌ ಬ್ಯಾಗ್‌ ಅಲ್ಲಿ ಇರಿಸಿ.
ಸಿಪ್ಪೆ ಸುಲಿದ ಬಟಾಣಿಗಳನ್ನು ಸಹ ಮೊಳಕೆಯೊಡೆಯದೆ ಹಲವು ದಿನಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು.
ದೊಡ್ಡ ಬಟಾಣಿಗಳನ್ನು ಬೇರೆ ಮಾಡಿ. ಸಣ್ಣ ಬಟಾಣಿಗಳು ತುಂಬಾ ಬೇಗ ಹಾಳಾಗುತ್ತವೆ.
ಸಂಗ್ರಹಿಸಲು ದೊಡ್ಡದಾದ ಬಟಾಣಿಗಳನ್ನು ಮಾತ್ರ ಆರಿಸಿಕೊಳ್ಳಿ. ಸಣ್ಣ ಬಟಾಣಿಗಳನ್ನು ಹಾಗೆಯೇ ಹಸಿಯಾಗಿ ತಿನ್ನಬಹುದು. ಇಲ್ಲವಾದರೆ ಸಣ್ಣ ಸೈಜಿನ ಕಾಳುಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸಿ ಖಾಲಿ ಮಾಡಿ.
ನೀವು ಬಟಾಣಿ ಹಸಿಯಾಗಿಯೇ ಸ್ಟೋರ್‌ ಮಾಡಲು ಬಯಸಿದರೆ, ಸಿಪ್ಪೆ ಸುಲಿದ ಕಾಳು ಮೇಲೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಾಕಿ ಎರಡೂ ಕೈಗಳಿಂದ ಮಿಕ್ಸ್‌ ಮಾಡಿ, ಹೀಗೆ ಮಾಡುವುದರಿಂದ ಫ್ರೀಜರ್ ಐಸ್ ಬಟಾಣಿಗಳಿಗೆ ಅಂಟಿಕೊಳ್ಳುವುದಿಲ್ಲ. ಈ ಬಟಾಣಿಗಳನ್ನು ಯಾವುದೇ ಪಾಲಿಥೀನ್‌ ಬ್ಯಾಗ್‌ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ.
ಬಟಾಣಿಗಳನ್ನು ಲಘುವಾಗಿ ಕುದಿಸುವ ಮೂಲಕ ಸಹ ಫ್ರೆಶ್‌ ಆಗಿ ಇಡಬಹುದು. ಇದಕ್ಕಾಗಿ, ಗ್ಯಾಸ್‌ ಮೇಲೆ ಒಂದು ದೊಡ್ಡ ಪಾತ್ರೆಗೆ ನೀರನ್ನು ಹಾಕಿ ಮತ್ತು ಅದು ಕುದಿಯಲು ಶುರುವಾದಾಗ, ಅದರಲ್ಲಿ ಸ್ವಲ್ಪ ಸಕ್ಕರೆ ಸೇರಿಸಿ. ಇದರ ನಂತರ, ಬಟಾಣಿ ಕುದಿಯುವ ನೀರಿನಲ್ಲಿ ಹಾಕಿ 2 ನಿಮಿಷಗಳ ಕಾಲ ನೀರಿನಲ್ಲಿ ಬಿಡಿ.
ಬಟಾಣಿ ತಣ್ಣಗಾದ ನಂತರ ನೀರು ಸೋಸಿ, ಬಟಾಣಿ ತೆಗೆಯಿರಿ.
ನಂತರ ಬಟಾಣಿಗಳನ್ನು ಸಣ್ಣ ಜಿಪ್ ಲಾಕ್ ಬ್ಯಾಗ್‌ಗಳಲ್ಲಿ ತುಂಬಿ ಅವುಗಳನ್ನು ಫ್ರೀಜರ್‌ನಲ್ಲಿ ಇರಿಸಿ. ಈ ರೀತಿಯಾಗಿ, ಹಸಿ ಬಟಾಣಿಗಳನ್ನು ದೀರ್ಘಕಾಲ ಫ್ರೆಶ್‌ ಆಗಿ ಇಡಬಹುದು.
ಬಟಾಣಿ ಸೇವನೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಚಳಿ ದಿನಗಳಲ್ಲಿ ಪ್ರತಿದಿನ ತಾಜಾ ಬಟಾಣಿ ಸೇವಿಸಬೇಕು.

Latest Videos

click me!