ನಾವು ಅನ್ನದಿಂದ ಹಿಡಿದು, ವಿವಿಧ ರೀತಿಯ ತಿಂಡಿ, ತರಕಾರಿ, ಹಣ್ಣು ಹಂಪಲುಗಳನ್ನು ಫ್ರಿಡ್ಜ್ನಲ್ಲಿ ಇಟ್ಟು ಸೇವಿಸುತ್ಟೇವೆ, ಆದರೆ ಎಂದಾದರೂ ಅಲೋಚನೆ ಮಾಡಿದ್ದೀರಾ? ಈ ಆಹಾರಗಳು ಎಷ್ಟು ದಿನದವರೆಗೆ ತಿನ್ನಲು ಯೋಗ್ಯವಾಗಿದೆ ಎಂದು. ಇಲ್ಲಿ ಯಾವ ಆಹಾರ ಎಷ್ಟು ಸಮಯದವರೆಗೆ ತಿನ್ನಲು ಯೋಗ್ಯವಾಗಿದೆ ಎನ್ನುವ ಮಾಹಿತಿ ಇದೆ ತಿಳಿಯಿರಿ.
ಈ ವಿಷಯಗಳನ್ನು ನೆನಪಿನಲ್ಲಿಡಿಫ್ರಿಜ್ ನಲ್ಲಿ ಇಟ್ಟ ಬೇಯಿಸಿದ ಅನ್ನವನ್ನು ಎರಡು ದಿನಗಳಲ್ಲಿ ಸೇವಿಸಿ. ಶೈತ್ಯೀಕರಿಸಿದ ಅನ್ನ ತಿನ್ನುವ ಮೊದಲು ಸ್ವಲ್ಪ ಸಮಯದವರೆಗೆ ಕೋಣೆಯ ತಾಪಮಾನದಲ್ಲಿ ಇರಿಸಿ, ನಂತರ ಅವುಗಳನ್ನು ಬಿಸಿ ಮಾಡಿ ನಂತರ ತಿನ್ನಿ.
ರೊಟ್ಟಿ, ಚಪಾತಿಯನ್ನು ತಯಾರು ಮಾಡಿದ 12 ರಿಂದ 14 ಗಂಟೆಗಳ ಒಳಗೆ ತಿನ್ನಬೇಕು. ಹಾಗೆ ಮಾಡಲು ವಿಫಲವಾದರೆ ಪೌಷ್ಠಿಕಾಂಶ ಮತ್ತು ಕಿಬ್ಬೊಟ್ಟೆ ನೋವಿಗೆ ಕಾರಣವಾಗಬಹುದು.
ಉಳಿದ ಧಾಲ್ 2 ದಿನಗಳಲ್ಲಿ ತಿನ್ನಿ ಇಲ್ಲದಿದ್ದರೆ ಕೋಲ್ಡ್ ಆಗಿರುವ ಧಾಲ್ ಹೊಟ್ಟೆಯಲ್ಲಿ ಅನಿಲವನ್ನು ಉಂಟು ಮಾಡಬಹುದು
ಕತ್ತರಿಸಿದ ಹಣ್ಣನ್ನು ರೆಫ್ರಿಜರೇಟರ್ನಲ್ಲಿ ಹೆಚ್ಚು ಹೊತ್ತು ಸಂಗ್ರಹಿಸಬೇಡಿ. ಅದನ್ನು ಇಡಬೇಕು ಎಂದಾದಲ್ಲಿ, ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ.
ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ನಲ್ಲಿ ಸಂಗ್ರಹಿಸಲಾಗುತ್ತದೆ ಅವುಗಳನ್ನು ಆರು ಗಂಟೆಗಳ ಒಳಗೆ ಬಳಸಬೇಕು.
ಕತ್ತರಿಸಿದ 4 ಗಂಟೆಯೊಳಗೆ ಸೇಬು ತಿನ್ನುವುದು ಉತ್ತಮ. ಸೇಬನ್ನು ಕತ್ತರಿಸಿದ ನಂತರ ಬಹಳ ಸಮಯದವರೆಗೆ ಇಟ್ಟುಕೊಂಡರೆ, ಅದು ಉತ್ಕರ್ಷಣವನ್ನು ಪ್ರಾರಂಭಿಸುತ್ತದೆ ಮತ್ತು ಅದರ ಮೇಲಿನ ಪದರವು ಕಪ್ಪು ಬಣ್ಣಕ್ಕೆ ಹೋಗುತ್ತದೆ.
ಇದಲ್ಲದೆ, ಚೆರ್ರಿಗಳು 7 ದಿನಗಳು, ಬ್ಲೂಬೆರಿಗಳು, ರಾಸ್ಬೆರಿಗಳು, ಸ್ಟ್ರಾಬೆರಿಗಳು ಮತ್ತು ಬ್ಲ್ಯಾಕ್ ಬೆರಿಗಳನ್ನು 3 ರಿಂದ 6 ವಾರಗಳವರೆಗೆ ಸಂಗ್ರಹಿಸಿ ಇಡಾಬಹುದು.
ಸಿಟ್ರಸ್ ಹಣ್ಣುಗಳು 1 ರಿಂದ 3 ವಾರಗಳವರೆಗೆ, ದ್ರಾಕ್ಷಿಗಳನ್ನು 7 ದಿನಗಳವರೆಗೆ, ಕಲ್ಲಂಗಡಿ ಇನ್ನೂ ಕತ್ತರಿಸದಿದ್ದರೆ ಎರಡು ವಾರಗಳವರೆಗೆ, ಕತ್ತರಿಸಿದ ನಂತರ 2 ರಿಂದ 4 ದಿನಗಳು, ಅನಾನಸ್ 5 ರಿಂದ 7 ದಿನಗಳವರೆಗೆ ಸಂಗ್ರಹಿಸಿಡಬಹುದು.
ಬೀನ್ಸ್ 3 ರಿಂದ 5 ದಿನಗಳು, ಜೋಳ 1 ರಿಂದ 2 ದಿನ, ಸೌತೆಕಾಯಿ 4 ರಿಂದ 6 ದಿನ, ಬದನೆಕಾಯಿ 4 ರಿಂದ 7 ದಿನ, ಅಣಬೆ ಹೆಚ್ಚು ಸಂಗ್ರಹಿಸಬಾರದು. ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಹಾನಿಕರವಾಗಬಹುದು.