Healthy Ganji Recipe: ಮಕ್ಕಳಿಗೆ ಸಂಜೆ ತಿಂಡಿಗೆ ಆರೋಗ್ಯಕರ ಮತ್ತು ರುಚಿಕರವಾದ ಅಕ್ಕಿ ಗಂಜಿ ತಯಾರಿಸುವ ವಿಧಾನ. ಬೇಸಿಗೆಯಲ್ಲಿ ಮಕ್ಕಳಿಗೆ ತಂಪು ಪಾನೀಯವಾಗಿ ಈ ಗಂಜಿ ನೀಡಬಹುದು. ಇದು ಮೂಳೆ ಮತ್ತು ಕೀಲುಗಳ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
ಮಕ್ಕಳು ಸಂಜೆಯಾಗುತ್ತಲೇ ಅಥವಾ ಶಾಲೆಯಿಂದ ಬರುತ್ತಲೇ ತಿನ್ನಲು ಏನಾದ್ರು ಕೇಳುತ್ತಾರೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಮಕ್ಕಳಿಗೆ ನೀರಿನಂಶವಿರೋ ಆಹಾರವನ್ನು ನೀಡಬೇಕು.
27
ಇಂದು ಟಿವಿ ಆನ್ ಮಾಡಿದ್ರೆ ಸೂಪ್ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳು ಈ ಜಾಹೀರಾತು ನೋಡಿ ಸೂಪ್ ಕೇಳಿದ್ರೆ, ಔಷಧೀಯ ಗುಣವುಳ್ಳ ಆರೋಗ್ಯಕರ ಟೇಸ್ಟಿ ಅಕ್ಕಿ ಗಂಜಿ ಮಾಡಿಕೊಡಿ. ಇದನ್ನು ಮಕ್ಕಳು ಮಾತ್ರವಲ್ಲಾ ಎಲ್ಲಾ ವರ್ಗದವರು ಕುಡಿಯಬಹುದು.
37
ಈ ರೀತಿ ವಿಶೇಷವಾಗಿ ತಯಾರಿಸುವ ಗಂಜಿ ಸೇವನೆಯಿಂದ ಮೂಳೆ ಮತ್ತು ಕೀಲುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ದೂರವಾಗುತ್ತವೆ. ಕಡಿಮೆ ಪದಾರ್ಥಗಳಿಂದ ಈ ವಿಶೇಷವಾದ ಗಂಜಿಯನ್ನು ತಯಾರಿಸಬಹುದು.
47
rice water
ಗಂಜಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ: 100 ಗ್ರಾಂ (ಬೇಕಿದ್ರೆ ಕೆಂಪು ಅಕ್ಕಿಯನ್ನು ಬಳಸಬಹುದು)
ಒಣಶುಂಠಿ, ಧನಿಯಾ, ಓಂಕಾಳು ಮತ್ತು ಜೀರಿಗೆ ಎಲ್ಲಾ ಸೇರಿ 20 ಗ್ರಾಂ
ತೆಂಗಿನ ಹಾಲು: 1 ಲೀಟರ್
ದಶಪುಷ್ಪ ಚೂರ್ಣ: 10 ಗ್ರಾಂ (ಇದು ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ)
ಕಲ್ಲುಪ್ಪು: ಚಿಟಿಕೆ
ತುಪ್ಪ: 1/2 ಟೀ ಸ್ಪೂನ್
57
ಗಂಜಿ ತಯಾರಿಸುವ ವಿಧಾನ
ಮೊದಲಿಗೆ ಅಕ್ಕಿಯನ್ನು ಎರಡರಿಂದ ಮೂರು ಬಾರಿ ತೊಳೆದುಕೊಳ್ಳಬೇಕು. ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಲಿ. ಇದಕ್ಕೆ ಎರಡರಿಂದ ಮೂರು ಲೋಟದಷ್ಟು ನೀರು ಸೇರಿಸಬೇಕು. ನೀರು ಕುದಿಯಲು ಆರಂಭಿಸಿದಾಗ ತೊಳೆದಿರುವ ಅಕ್ಕಿಯನ್ನು ಸೇರಿಸಿಕೊಳ್ಳಬೇಕು.
67
ಮತ್ತೊಂದು ಕಡೆ ಒಲೆ ಮೇಲೆ ಚಿಕ್ಕ ಬಾಣಲೆ ಇರಿಸಿಕೊಂಡು ತಪ್ಪದಲ್ಲಿ ಜೀರಿಗೆ ಫ್ರೈ ಮಾಡಿಕೊಳ್ಳಬೇಕು. ಅಕ್ಕಿ ಸಂಪೂರ್ಣವಾಗಿ ಬೆಂದ ನಂತರ ತೆಂಗಿನ ಹಾಲು ಸೇರಿಸಬೇಕು. ಆ ಬಳಿ ಹುರಿದುಕೊಂಡಿರುವ ಜೀರಿಗೆ ಹಾಕಿ. ಆನಂತರ ಜಜ್ಜಿಕೊಂಡಿರುವ ಒಣಶುಂಠಿ, ಧನಿಯಾ ಮತ್ತು ಓಂಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
77
ಬಿಸಿಯಾಗಿದ್ದಾಗಲೇ ಮಕ್ಕಳಿಗೆ ಕುಡಿಯಲು ಕೊಡಿ. ಈ ಸಮಯದಲ್ಲಿ ಮಕ್ಕಳು ಸಿಹಿ ಇಷ್ಟಪಡುತ್ತಿದ್ದರೆ ಬೆಲ್ಲ ಸೇರಿಸಿ ಕೊಡಬಹುದು. ಸಿಹಿ ಬೇಡ ಅಂತಾದ್ರೆ ಸ್ವಲ್ಪ ಉಪ್ಪು, ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಸೇರಿಸಿಯೂ ಕೊಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.