How to make chapati soft for long time: ಚಪಾತಿಯನ್ನು ದಿನಗಟ್ಟಲೆ ಮೃದುವಾಗಿ ಮತ್ತು ತಾಜಾವಾಗಿಡಲು ಗ್ರಾಮೀಣ ಭಾಗದ ಅಜ್ಜಿಯರ ಸಲಹೆಗಳು. ಹಿಟ್ಟು ಕಲಿಸುವುದರಿಂದ ಹಿಡಿದು ಬೇಯಿಸುವವರೆಗಿನ ಸರಳ ಹಂತಗಳನ್ನು ತಿಳಿಯಿರಿ.
ಬೆಳಗ್ಗೆ ಮಾಡಿದ ಚಪಾತಿ ಮಧ್ಯಾಹ್ನ ಆಗುವಷ್ಟರಲ್ಲಿ ಗಟ್ಟಿಯಾಗುತ್ತದೆ. ಕೆಲವರು ಚಪಾತಿ ಸಾಫ್ಟ್ ಆಗಬೇಕೆಂದು ಬಟ್ಟಲುಗಟ್ಟಲೇ ಎಣ್ಣೆ ಸುರಿದು ಅದನ್ನು ಪುರಿ ಮಾಡಿ ಬಿಡುತ್ತಾರೆ. ಇಂದು ನಾವು ನಿಮಗೆ ಎರಡೂ ದಿನವಾದ್ರೂ ಹತ್ತಿಯಂತೆ ಚಪಾತಿ ಸಾಫ್ಟ್ ಆಗಿರುವಂತೆ ಹೇಗೆ ಮಾಡಬೇಕು ಎಂಬ ಸೂಪರ್ ಟಿಪ್ಸ್ ತಂದಿದ್ದೇವೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಈ ರೀತಿಯಲ್ಲಿ ಚಪಾತಿ ಮಾಡುತ್ತಾರೆ. ಗ್ರಾಮೀಣ ಭಾಗದ ಅಜ್ಜಿಯಂದಿರು ಹೇಳಿದ ಸೂಪರ್ ಟಿಪ್ಸ್ ಇಲ್ಲಿವೆ.
27
ಚಪಾತಿಗೆ ಹಿಟ್ಟು ಕಲಿಸುವ ಕೆಲಸದಿಂದ ಅದು ತಟ್ಟೆಗೆ ಬೀಳುವರೆಗೂ ಕೆಲವೊಂದು ಸಿಂಪಲ್ ಟಿಪ್ಸ್ ಅನುಸರಿಸಬೇಕು. ಇದರಿಂದ ಚಪಾತಿ ಎರಡರಿಂದ ಮೂರು ದಿನಗಳವರೆಗೆ ಗಟ್ಟಿಯೂ ಆಗಲ್ಲ ಮತ್ತು ವಾಸನೆಯೂ ಬರಲ್ಲ.
37
ಸಲಹೆ 1:
ಗೋಧಿಯನ್ನು ಹಿಟ್ಟು ಮಾಡಿಸಿಕೊಂಡು ಬರುವಾಗ ಅದಕ್ಕೆ ಸಬ್ಬಕ್ಕಿಯನ್ನು ಸೇರಿಸುತ್ತಾರೆ. 1 ಕೆಜಿ ಗೋಧಿಗೆ 50 ಗ್ರಾಂನಷ್ಟು ಸಬ್ಬಕ್ಕಿ ಸೇರಿಸಬಹುದು. ಸಬ್ಬಕ್ಕಿ ಜೊತೆಯಲ್ಲಿ ಒಂದು ಟೀ ಸ್ಪೂನ್‌ನಷ್ಟು ಕಲ್ಲುಪ್ಪು ಸೇರಿಸಿ ಹಿಟ್ಟು ಮಾಡಿಸಿದ್ರೆ ಚಪಾತಿ ಸಾಫ್ಟ್ ಆಗುತ್ತವೆ. 1 ಕೆಜಿ ಗೋಧಿಗೆ 100 ಗ್ರಾಂನಷ್ಟು ದಪ್ಪರವೆ (ಬನ್ಸಿ ರವೆ) ಸೇರಿಸಿ ಹಿಟ್ಟು ಮಾಡಿಸೋದರಿಂದ ಚಪಾತಿ ತುಂಬಾನೇ ಸಾಫ್ಟ್ ಆಗುತ್ತದೆ.
47
ಸಲಹೆ 2:
ಚಪಾತಿಗೆ ಹಿಟ್ಟು ಕಲಿಸುವಾಗ ಒಂದು ಟೀ ಸ್ಪೂನ್ ಎಣ್ಣೆ ಮತ್ತು ಕಡಲೆಹಿಟ್ಟು ಸೇರಿಸಿಕೊಂಡ್ರೆ ಚಪಾತಿ ಮೃದುವಾಗಿ ಬರುತ್ತದೆ. ಹಿಟ್ಟು ಮಾಡಿಸುವಾಗ ಉಪ್ಪು ಸೇರಿಸದಿದ್ದರೆ ಕಲಿಸುವಾಗ ಒಂದೆರಡು ಕಾಳು ಕಲ್ಲುಪ್ಪು ಸೇರಿಸಿಕೊಂಡು ಹಿಟ್ಟು ಕಲಿಸಿಕೊಳ್ಳಬೇಕು.
57
ಸಲಹೆ 3:
ನೀವು ಮೊದಲ ಬಾರಿ ಚಪಾತಿ ಮಾಡುತ್ತಿದ್ದರೆ ಹಿಟ್ಟು ಕಲಿಸಿಕೊಳ್ಳಲು ಬಿಸಿನೀರು ಬಳಸಿಕೊಳ್ಳಿ. ಹಿಟ್ಟು ಕಲಿಸಿದ ನಂತರ ಅದನ್ನು ಕಾಟನ್ ಬಟ್ಟೆ ಅಥವಾ ಪಾತ್ರೆಯಿಂದ 20 ರಿಂದ 30 ನಿಮಿಷಗಳ ಕಾಲ ಮುಚ್ಚಿಡಬೇಕು. ಹೀಗೆ ಮಾಡೋದರಿಂದಲೂ ಚಪಾತಿ ಸಾಫ್ಟ್ ದೀರ್ಘ ಸಮಯದವರೆಗೆ ಸಾಫ್ಟ್ ಆಗಿರುತ್ತದೆ.
67
ಸಲಹೆ 4:
ಚಪಾತಿಗೆ ಹಿಟ್ಟು ಕಲಿಸುವಾಗ ಹಾಲು/ಮಜ್ಜಿಗೆ ಅಥವಾ ಮೊಸರು ಬಳಸಬಹುದು. ನಿಯಮಿತ ಪ್ರಮಾಣದಲ್ಲಿ ಈ ಮೂರರಲ್ಲಿ ಯಾವುದಾದ್ರೂ ಒಂದು ಪದಾರ್ಥವನ್ನು ಸೇರಿಸಿಕೊಳ್ಳಬೇಕು. ಈ ವಸ್ತುಗಳಿಂದ ಚಪಾತಿ ಮೃದುವಾಗುತ್ತದೆ. ತುಪ್ಪ ಸೇರಿಸೋದರಿಂದ ಚಪಾತಿ ರುಚಿ ಹೆಚ್ಚಾಗುತ್ತದೆ.
77
ಸಲಹೆ 5:
ಮಾಡಿರುವ ಚಪಾತಿಯನ್ನು ಹೈಫ್ಲೇಮ್‌ನಲ್ಲಿ ಎರಡೂ ಬದಿ ಹೊಂಬಣ್ಣ ಬರೋವರೆಗೂ ಬೇಯಿಸಿಕೊಳ್ಳಬೇಕು. ಮಾಡಿರುವ ಚಪಾತಿಯನ್ನು ಬಿದಿರಿನ ಪುಟ್ಟಿ ಅಥವಾ ಕಾಟನ್ ಬಟ್ಟೆಯಲ್ಲಿ ಸುತ್ತಿಡೋದರಿಂದ ಮೃದುತನ ಹಾಳಾಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಚಪಾತಿ/ರೊಟ್ಟಿ ಹಾಕಲು ಬಿದಿರನ ಪುಟ್ಟಿಗಳನ್ನು ಬಳಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.