ಹೊಟ್ಟೆ ಬೊಜ್ಜು ಕಡಿಮೆಯಾಗ್ಬೇಕು ಅಂದ್ರೆ ರಾತ್ರಿ ಅನ್ನದ ಬದಲು ಇವುಗಳನ್ನು ತಿನ್ನಿ

First Published Jan 31, 2024, 4:45 PM IST

ಹೊಟ್ಟೆಯ ಬೊಜ್ಜು ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡ್ತಿರೋ ಸಮಸ್ಯೆ. ಇದನ್ನು ಕರಗಿಸೋಕೆ ಯಾವ್ದೆಲ್ಲಾ ರೀತಿಯಲ್ಲಿ ಟ್ರೈ ಮಾಡಿದ್ರೂ ಯೂಸ್ ಆಗಲ್ಲ. ನೀವು ಕೂಡಾ ಬೆಲ್ಲಿ ಫ್ಯಾಟ್‌ ಕರಗಿಸೋ ಪ್ರಯತ್ನದಲ್ಲಿದ್ರೆ ಸಿಂಪಲ್ ಟಿಪ್ಸ್ ಇಲ್ಲಿದೆ.

ತೂಕ ಹೆಚ್ಚಳ, ಬೊಜ್ಜು ಇವತ್ತಿನಲ್ಲಿ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದಾಗ ಅದು ತುಂಬಾ ಕಷ್ಟ ಎಂದು ಸ್ಪಷ್ಟವಾಗುತ್ತದೆ. ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಹಲವರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ. 

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು. ಶಿಸ್ತುಬದ್ಧ ಜೀವನಶೈಲಿಯನ್ನು ಬೆಳೆಸುವುದು.

Latest Videos


ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಬಯಸುವವರು ರಾತ್ರಿ ಅನ್ನವನ್ನು ತಿನ್ನಬಾರದು. ಬದಲಿಗೆ ಈ ಕೆಲವು ಆಹಾರಗಳನ್ನು ಸೇವಿಸಿದರೆ ಸುಲಭವಾಗಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತೆ.

ಆಪಲ್
ದಿನಕ್ಕೊಂದು ಸೇಬು ತಿಂದರೆ ಆಸ್ಪತ್ರೆಗೆ ಹೋಗಬೇಕಿಲ್ಲ ಅಂತಾರೆ. ಸೇಬು ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತದೆ. ಹಾಗೆಯೇ ಸೇಬು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಹಣ್ಣಾಗಿರುವುದರಿಂದ ಇದನ್ನು ತಿಂದರೆ ಹಸಿವು ಬಹಳ ಬೇಗ ಕಡಿಮೆಯಾಗುತ್ತದೆ. ಇದರಿಂದ ತೂಕ ಕಡಿಮೆ ಮಾಡಿಕೊಳ್ಳೋದು ಸುಲಭವ. ಪೆಕ್ಟಿನ್ ಅಧಿಕವಾಗಿರುವ ಸೇಬುಗಳು ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಾಗಾಗಿ ರಾತ್ರಿ ಅನ್ನ ತಿನ್ನುವ ಬದಲು ಒಂದು ಅಥವಾ ಎರಡು ಸೇಬು ತಿಂದು ಮಲಗಿ. 

ಸೀಬೆಹಣ್ಣು
ಪೇರಳೆ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಇದು ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಪೇರಳೆಯಲ್ಲಿ ಫೈಬರ್ ಅಂಶವೂ ಸಮೃದ್ಧವಾಗಿದೆ. ಇವುಗಳಲ್ಲಿ ಪೆಕ್ಟಿನ್ ಕೂಡ ಇರುತ್ತದೆ. ಪೆಕ್ಟಿನ್ ಜೀವಕೋಶಗಳು ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ರಾತ್ರಿಯ ಆಹಾರದಲ್ಲಿ ಪೇರಳೆಯನ್ನು ಸೇರಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

ಓಟ್ಸ್
ಓಟ್ಸ್, ರಾತ್ರಿ ಅನ್ನದ ಬದಲು ತಿನ್ನುವುದು ಉತ್ತಮ. ಇದು ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ. ಒಂದು ಕಪ್ ಓಟ್ ಮೀಲ್ ನಲ್ಲಿ 7.5 ಗ್ರಾಂ ಫೈಬರ್ ಅಂಶವಿದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ರಾತ್ರಿ ಅನ್ನದ ಬದಲು ಓಟ್ಸ್ ತಿನ್ನಿ ತೂಕ ಇಳಿಸಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಿ. 

ಚಪಾತಿ
ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿದೆ. ಹೀಗಾಗಿ ಇದು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ಅನ್ನದ ಬದಲು ಚಪಾತಿ, ವೆಜಿಟೇಬಲ್ ಕರಿ ತಿನ್ನುವುದನ್ನು ರೂಢಿಸಿಕೊಳ್ಳಿ. ಇದು ತೂಕವನ್ನು ನಿಯಂತ್ರಿಸುತ್ತದೆ. 

ಬೆರ್ರಿ ಹಣ್ಣುಗಳು
ಬೆರ್ರಿಗಳು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಈ ಹಣ್ಣುಗಳು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಹೀಗಾಗಿ ಬೆರ್ರಿ ಹಣ್ಣುಗಳನ್ನು ತಿನ್ನುವುದರಿಂದ ಹಸಿವು ಬಹಳಷ್ಟು ಕಡಿಮೆಯಾಗುತ್ತದೆ. ಇದು ಹೊಟ್ಟೆಯ ಕೊಬ್ಬಿನೊಂದಿಗೆ ತೂಕವನ್ನು ಕಡಿಮೆ ಮಾಡುತ್ತದೆ.

click me!