ರಾಜ್ಯದಲ್ಲಿ ಹಸಿ ಬಟಾಣಿ ಋತುಮಾನ ಆರಂಭವಾಗಿದೆ. ಹೇರಳವಾಗು ಹಸಿ ಬಟಾಣಿ ಮಾರುಕಟ್ಟೆಗೆ ಆಗಮಿಸಿದ್ದು, ಇದರಲ್ಲಿ ಎ, ಬಿ, ಸಿ, ಇ, ಕೆ ಸೇರಿದಂತೆ ಹಲವು ವಿಟಮಿನ್ ಅಂಶಗಳಿಗೆ. ಪ್ರತಿದಿನ ಹಸಿ ಬಟಾಣಿ ತಿಂದರೆ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನ ಆಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಪ್ರೋಟೀನ್ ಭರಿತ ಹಸಿ ಬಟಾಣಿಗಳು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಫೈಟೋನ್ಯೂಟ್ರಿಯೆಂಟ್‌ಗಳು ಕಣ್ಣುಗಳನ್ನು ಆರೋಗ್ಯವಾಗಿಡುವುದರಿಂದ ಹಿಡಿದು ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುವವರೆಗೆ ಸಹಾಯ ಮಾಡುತ್ತವೆ.
ದೇಹಕ್ಕೆ ಅಗತ್ಯವಿರುವ ಕ್ಯಾರೊಟಿನಾಯ್ಡ್‌ಗಳಾದ ಲ್ಯೂಟಿನ್, ಜಿಯಾಕ್ಸಾಂಥಿನ್‌ಗಳು ಹಸಿ ಬಟಾಣಿಗಳಲ್ಲಿ ಕಂಡುಬರುತ್ತವೆ. ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್, ಕಣ್ಣಿನ ಪೊರೆ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ಕಣ್ಣುಗಳನ್ನು ರಕ್ಷಿಸಲು ಈ ಪೋಷಕಾಂಶಗಳು ಸಹಾಯ ಮಾಡುತ್ತವೆ. ಹಾನಿಕಾರಕ ನೀಲಿ ಬೆಳಕಿನಿಂದ ಫಿಲ್ಟರ್‌ಗಳಾಗಿ ಲ್ಯೂಟಿನ್, ಜಿಯಾಕ್ಸಾಂಥಿನ್‌ಗಳು ಕಾರ್ಯನಿರ್ವಹಿಸುತ್ತವೆ.
25
ಹಸಿ ಬಟಾಣಿಗಳಲ್ಲಿ ವಿಟಮಿನ್:
ಹಸಿ ಬಟಾಣಿಗಳಲ್ಲಿ ಎ, ಬಿ, ಸಿ, ಇ, ಕೆ ಮುಂತಾದ ಹಲವು ವಿಧದ ವಿಟಮಿನ್‌ಗಳಿವೆ. ಇದರೊಂದಿಗೆ ಜಿಂಕ್, ಪೊಟ್ಯಾಸಿಯಮ್, ಫೈಬರ್‌ಗಳಿಂದಲೂ ಇದು ಸಮೃದ್ಧವಾಗಿದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಫೈಬರ್ ಯುಕ್ತ ಆಹಾರ ಕೂಡ ಹಸಿ ಬಟಾಣಿ. ಅದಕ್ಕಾಗಿಯೇ ಹಸಿ ಬಟಾಣಿಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ತಜ್ಞ ವೈದ್ಯರು ಹೇಳುತ್ತಾರೆ.
35
ಕ್ಯಾನ್ಸರ್‌ನಿಂದ ರಕ್ಷಣೆ:
ಕೌಮೆಸ್ಟ್ರೋಲ್ ಎಂಬ ಪೋಷಕಾಂಶ ಹಸಿ ಬಟಾಣಿಗಳಲ್ಲಿದೆ. ಇದು ಹೊಟ್ಟೆಯ ಕ್ಯಾನ್ಸರ್‌ನಿಂದ ರಕ್ಷಣೆ ನೀಡಲು ಸಹಾಯ ಮಾಡುತ್ತದೆ. 2009 ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಅಧ್ಯಯನದ ಪ್ರಕಾರ, ಪ್ರತಿದಿನ ಹಸಿ ಬಟಾಣಿ ಮತ್ತು ಇತರ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಅಪಾಯ 50% ರಷ್ಟು ಕಡಿಮೆಯಾಗುತ್ತದೆ. ಇದರೊಂದಿಗೆ ಪ್ರತಿದಿನ ಹಸಿ ಬಟಾಣಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
45
ಮಧುಮೇಹ ಇರುವವರು ತಿನ್ನಬಹುದು
ಮಧುಮೇಹ ಇರುವವರು ಕೂಡ ಹಸಿ ಬಟಾಣಿ ತಿನ್ನಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಹಸಿ ಬಟಾಣಿ ಸಹಾಯ ಮಾಡುತ್ತದೆ. ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ, ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಪರಿಣಾಮಕಾರಿ. ಮರೆಗುಳಿತನ ಸಮಸ್ಯೆ ಎದುರಿಸುತ್ತಿರುವವರಲ್ಲಿ ಹಸಿ ಬಟಾಣಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಎಂಬುದು ಸ್ಪಷ್ಟವಾಗಿಲ್ಲ.
55
ಉರಿಯೂತ ನಿವಾರಕ ಗುಣ:
ಹಸಿ ಬಟಾಣಿಗಳಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇದರಿಂದ ಮಧುಮೇಹ, ಹೃದ್ರೋಗ, ಸಂಧಿವಾತ ಮುಂತಾದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಫೈಬರ್ ಕೂಡ ಇದರಲ್ಲಿ ಹೇರಳವಾಗಿದೆ. ಇದು ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.
ಹಸಿ ಬಟಾಣಿ ಋತುಮಾನ ಆರಂಭ: ಇದೀಗ ಮಾರುಕಟ್ಟೆಯಲ್ಲಿ ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಹಸಿ ಬಟಾಣಿ ಸೀಸನ್ ಆರಂಭವಾಗುತ್ತದೆ. ಈ ಅವಧಿಯಲ್ಲಿ ಹಸಿ ಬಟಾಣಿ ಪ್ರತಿ ಕೆ.ಜಿಗೆ 60 ರೂ.ನಿಂದ 120 ರೂ.ವರೆಗೆ ಮಾರಾಟ ಆಗುತ್ತದೆ.