ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಮ್‌ನಂತಹ ಅಗತ್ಯ ಖನಿಜಗಳು ಕಾಟೇಜ್ ಚೀಸ್‌ನಲ್ಲಿವೆ.
ಪನೀರ್‌ನಲ್ಲಿ (ಕಾಟೇಜ್ ಚೀಸ್)ಪ್ರೋಟೀನ್ ಸಮೃದ್ಧವಾಗಿದೆ. 100 ಗ್ರಾಂ ಕಾಟೇಜ್ ಚೀಸ್ ಸುಮಾರು 20 ಗ್ರಾಂಗಿಂತ ಹೆಚ್ಚು ಪ್ರೋಟಿನ್ ಹೊಂದಿದೆ.
ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಲ್ಲಿ ಒಂದು. ಪನೀರ್ ಸೇವನೆ ದಿನದ ಶೇ.8ಕ್ಯಾಲ್ಸಿಯಂ ಅನ್ನು ಪೂರೈಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕ್ಯಾಲ್ಸಿಯಂ ಮೂಳೆಗಳು, ಹಲ್ಲುಗಳು, ಹೃದಯ ಸ್ನಾಯುಗಳು ಮತ್ತು ನರಗಳ ಆರೋಗ್ಯಕ್ಕೆ ಸಹಾಯಕಾರಿ.
ಪನೀರ್ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಟೇಜ್ ಚೀಸ್ ಮೆಗ್ನೀಷಿಯಮ್‌ನಿಂದ ತುಂಬಿರುತ್ತದೆ. ಇದು ಹೃದಯದ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪನ್ನೀರ್‌ನಲ್ಲಿರುವಹೆಚ್ಚಿನ ಪ್ರೋಟೀನ್ ಅಂಶ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡಲು ಸಹಾಯ ಮಾಡಿ, ಬ್ಲಡ್ ಶುಗರ್ ಮಟ್ಟದಲ್ಲಿನ ಹಠಾತ್ ಹೆಚ್ಚಳ ಮತ್ತು ಕುಸಿತವನ್ನು ತಡೆಯುತ್ತದೆ.
ಪನೀರ್ ಪೊಟ್ಯಾಷಿಯಮ್ ಅನ್ನು ಹೊಂದಿದ್ದು, ಇದು ದೇಹದ ನೀರಿನ ಅಂಶವನ್ನು ಬ್ಯಾಲೆನ್ಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂಲಕರಕ್ತದೊತ್ತಡವನ್ನು ನಿರ್ವಹಿಸಿ, ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡುವಲ್ಲಿ ಪಾತ್ರ ವಹಿಸುತ್ತವೆ.
ಕಾಟೇಜ್ ಚೀಸ್ ಜೀರ್ಣಕ್ರಿಯೆಗೆ ಸಹ ಸಹಾಯ ಮಾಡುತ್ತದೆ. ಕಾಟೇಜ್ ಚೀಸ್‌ನಲ್ಲಿರುವ ಮೆಗ್ನೀಷಿಯಮ್ಮಲಬದ್ಧತೆಯನ್ನು ತಡೆಯುತ್ತದೆ.
ಪನೀರ್‌ನಲ್ಲಿ ಫೋಲೇಟ್ ಅಂಶ ಅಧಿಕವಾಗಿದೆ. ಫೋಲೇಟ್ ಬಿ-ಕಾಂಪ್ಲೆಕ್ಸ್ ವಿಟಮಿನ್ ಆಗಿದ್ದು ಇದು ಗರ್ಭಿಣಿಯರಿಗೆ ಬಹಳ ಅವಶ್ಯಕ. ಭ್ರೂಣದ ಬೆಳವಣಿಗೆಗೆ ಫೋಲೇಟ್ ಸಹಾಯ ಮಾಡುತ್ತದೆ. ಇದಲ್ಲದೆ, ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಫೋಲೇಟ್ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರೋಟೀನ್ ಹೆಚ್ಚಿರುವ ಕಾಟೇಜ್ ಚೀಸ್ ತೂಕ ಇಳಿಸುತ್ತದೆ.ಪ್ರೋಟಿನ್ ಜೊತೆಗೆ ಫ್ಯಾಟಿ ಆ್ಯಸಿಡ್ಕೂಡ ಸಮೃದ್ಧವಾಗಿದೆ. ಇದು ದೇಹದಲ್ಲಿ ಫ್ಯಾಟ್ ಬರ್ನಿಂಗ್ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.
ಆದರೆ,ಪನೀರ್‌ನಲ್ಲಿ ತುಂಬಾ ಉಪ್ಪಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾಟೇಜ್ ಚೀಸ್‌ನಲ್ಲಿರುವ ಹೆಚ್ಚುವರಿ ಸೋಡಿಯಂ ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ.