ಸಾಲ್ಮನ್ ಮೀನಿನಲ್ಲಿ ಇರುವ ಒಮೇಗಾ 3 ಫ್ಯಾಟಿ ಆ್ಯಸಿಡ್, ಇಪಿಎ ಮತ್ತು ಡಿ ಏಚ್ ಎ ಇದು ದೇಹಕ್ಕೆ ಅತ್ಯಂತ ಅವಶ್ಯ. ಹಾಗಾಗಿ ಆಹಾರದಲ್ಲಿ ಇದರ ಬಳಕೆ ಒಳ್ಳೆಯದು. ಇದರಿಂದ ದೇಹದಲ್ಲಾಗುವ ಊತಗಳು ಕಡಿಮೆಯಾಗುತ್ತದೆ. ರಕ್ತದ ಒತ್ತಡವನ್ನು ತಡೆಯುತ್ತವೆ. ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಆರೋಗ್ಯಕರ ವಯಸ್ಕರಲ್ಲಿ 200 ರಿಂದ 250ಎಂಜಿಯಷ್ಟು ಒಮೇಗಾ 3 ಫ್ಯಾಟಿ ಆ್ಯಸಿಡ್ ಕಡಿಮೆಯಾದರೂ ಬೇಕು. ಇದು ಸಾಲ್ಮನ್‌ನಿಂದ ಹೆಚ್ಚು ದೊರೆಯುತ್ತದೆ. ಪೂರಕ ಆಹಾರ ದೇಹಕ್ಕೆ ಅವಶ್ಯಕ. ಆದರೆ ಯಾವಾಗಲೂ ತೆಗೆದುಕೊಳ್ಳಲೇಬೇಕು ಎಂಬುದಿಲ್ಲ. ವಾರದಲ್ಲಿ 2 ಬಾರಿ ತೆಗೆದುಕೊಂಡರೆ ಸಾಕು.
ಸಾಲ್ಮನ್‌ನಲ್ಲಿ ಒಮೇಗಾ 3 ಅಲ್ಲದೆ ಪ್ರೊಟೀನ್ ಅನ್ನು ಒಳಗೊಂಡಿದೆ. 20ರಿಂದ 3೦ ಜಿಎಂ ಒಳ್ಳೆಯ ಪ್ರೊಟೀನ್ ಅನ್ನು ಒಳಗೊಂಡಿದೆ. ಇದು ದೇಹಕ್ಕೆ ಬೇಕಾಗಿದ್ದು, ಆರೋಗ್ಯಕ್ಕೆ ಅಲ್ಲದೆ ಸ್ನಾಯು ಸೆಳೆತವನ್ನು ತಪ್ಪಿಸುತ್ತದೆ.
ಸಾಲ್ಮನ್‌ನಲ್ಲಿ ವಿಟಮಿನ್ ಬಿ ಹೆಚ್ಚಿದ್ದು, ಇದು ಮೆದುಳು ಮತ್ತು ನರಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಬಿ ಕೊರತೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನರಲ್ಲಿ ಕಾಡುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಹಾಗಾಗಿ ಸಾಲ್ಮನ್ ಸೇವನೆ ಒಳ್ಳೆಯದು.
ಸಾಲ್ಮನ್ ಮೀನಿನಲ್ಲಿ ಹೆಚ್ಚು ಪೊಟ್ಯಾಷಿಯಂ ಇದ್ದು. ಇದು ಹೆಚ್ಚು ಸಮುದ್ರಗಳಲ್ಲಿ ದೊರೆಯುವ ಸಾಲ್ಮನ್ನಲ್ಲಿ ಹೆಚ್ಚಾಗಿ 18% ಇರುತ್ತದೆ. ಅದೇ ರೀತಿ ಮೀನು ಸಾಕುವವರಲ್ಲಿವ ಸಾಲ್ಮನ್ ಮೀನಿನಲ್ಲಿ 11% ಇರುತ್ತದೆ. ಈ ಪೊಟ್ಯಾಷಿಯಂ ಬಾಳೆಹಣ್ಣಿನಲ್ಲಿ ಇರುವಷ್ಟು ಸರಿಸಮವಾಗಿದೆ. ಹಾಗಾಗಿ ಸೇವಿಸಬಹುದು.
ಒಮೆಗಾ 3ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತವೆ,ಸಲ್ಮಾನ್ ಬಳಕೆಯಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಬಾರದಂತೆ ತಡೆಯುತ್ತದೆ. ಇದು ಹೃದಯ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.
ಸಲ್ಮಾನ್ ಮೀನು ಅದರ ಒಮೇಗಾ 3 ಕ್ಯಾಪ್ಸುಲ್ ತೆಗೆದು ಕೊಳ್ಳೋದರಿಂದ ತೂಕ ಕಡಿಮೆಯಾಗುತ್ತವೆ. ಅಲ್ಲದೆ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
ಮೀನಿನ ಕೊಬ್ಬು ಆರೋಗ್ಯಕರ ಚರ್ಮವನ್ನು ಕಾಪಾಡುತ್ತದೆ. ಅದರಲ್ಲೂ ಸಾಲ್ಮನ್ ಮತ್ತು ಇತರೆ ಮೀನಿನ ಎಣ್ಣೆಯಲ್ಲಿ ಸಿಗುವ ಒಮೆಗಾ 3 ಕೊಬ್ಬಿನಾಂಶದಿಂದ ಚರ್ಮ ಮೃದುವಾಗಿಮತ್ತು ಎಸ್ಜಿಮಾದಂತಹ ಪರಿಸ್ಥಿತಿಗಳನ್ನು ಸುಲಭಗೊಳಿಸುತ್ತದೆ.
ಸಾಲ್ಮನ್ ಆಹಾರದಲ್ಲಿ ಸೇವಿಸುವುದರಿಂದ ಊತಬರದಂತೆ ತಡೆಯುತ್ತದೆ. ಅಲ್ಲದೇ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಇದರ ಸೇವನೆಯಿಂದ 65 ವರ್ಷ ಮೇಲ್ಪಟ್ಟವರಲ್ಲಿ ಬರುವ ಮರೆವಿನ ಖಾಯಿಲೆಯನ್ನು ತಡೆಯುತ್ತದೆ.
ಸಾಲ್ಮನ್ ಸೇವನೆಯಿಂದ ಅನೇಕ ಆರೋಗ್ಯಕರ ಉಪಯೋಗವಿದೆ. ಹಾಗಾಗಿ ಪೂರಕ ಆಹಾರದಲ್ಲಿ ಬಳಕೆ ಒಳ್ಳೆಯದು. ಸಾಧ್ಯವಾದಷ್ಟು ಈ ಮೀನನ್ನು ನಿಮ್ಮ ಆಹಾರದಲ್ಲಿ ಸೇವಿಸಿ.