Mango Pickle: ಮಾವಿನಕಾಯಿ ಉಪ್ಪಿನಕಾಯಿ ಹಾಕ್ತಾ ಇದ್ದೀರಾ? ಬೂಸ್ಟ್ ಬರದಂತೆ ಇರಲು ಹೀಗೆ ಮಾಡಿ

Published : May 06, 2026, 03:45 PM IST

Mango Pickle ಬೇಸಿಗೆ ಬಂತೆಂದರೆ ಸಾಕು, ಪ್ರತಿಯೊಬ್ಬರ ಮನೆಯಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಘಮಲು. ವರ್ಷವಿಡೀ ಇಟ್ಟುಕೊಂಡು ತಿನ್ನೋ ಈ ಉಪ್ಪಿನಕಾಯಿ ಕೆಲವೊಮ್ಮೆ ಬೇಗ ಬೂಸ್ಟ್ ಹಿಡಿದುಬಿಡುತ್ತೆ. ಈ ಸಮಸ್ಯೆ ಬರದಂತೆ ತಡೆಯಲು ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ.

PREV
15
ಸರಿಯಾದ ಡಬ್ಬಿ ಆಯ್ಕೆ ಮಾಡಿ
ಉಪ್ಪಿನಕಾಯಿ ಇಡಲು ಗಾಜಿನ ಬಾಟಲಿ ಅಥವಾ ಪಿಂಗಾಣಿ ಜಾಡಿಗಳೇ ಬೆಸ್ಟ್. ಪ್ಲಾಸ್ಟಿಕ್ ಡಬ್ಬಿ ಬಳಸಿದರೆ ವಾಸನೆ ಮತ್ತು ರುಚಿ ಬದಲಾಗಬಹುದು. ಬಳಸುವ ಮುನ್ನ ಡಬ್ಬಿಯನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ಸ್ವಲ್ಪ ತೇವಾಂಶ ಇದ್ದರೂ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ.
25
ಎಣ್ಣೆ ಪ್ರಮಾಣ ಸರಿಯಾಗಿರಲಿ
ಉಪ್ಪಿನಕಾಯಿಯನ್ನು ಕಾಪಾಡುವುದೇ ಎಣ್ಣೆ. ಉಪ್ಪಿನಕಾಯಿಯ ಮೇಲೆ ಎಣ್ಣೆ ಒಂದು ಪದರದಂತೆ ತೇಲುತ್ತಿರಬೇಕು. ಇದು ಗಾಳಿ ತಾಗದಂತೆ ತಡೆದು, ಫಂಗಸ್ ಬರದಂತೆ ನೋಡಿಕೊಳ್ಳುತ್ತದೆ. ಎಣ್ಣೆ ಕಡಿಮೆಯಾದರೆ ಉಪ್ಪಿನಕಾಯಿ ಬೇಗ ಒಣಗಿ, ರುಚಿ ಕೆಡುತ್ತದೆ.
35
ಉಪ್ಪಿನ ಪಾತ್ರವೂ ಮುಖ್ಯ
ಉಪ್ಪಿನಕಾಯಿ ಕೆಡದಂತೆ ನೋಡಿಕೊಳ್ಳುವಲ್ಲಿ ಉಪ್ಪಿನ ಪಾತ್ರ ದೊಡ್ಡದು. ಉಪ್ಪು ಸರಿಯಾಗಿಲ್ಲದಿದ್ದರೆ ಬ್ಯಾಕ್ಟೀರಿಯಾ ಬೆಳೆದು ಉಪ್ಪಿನಕಾಯಿ ಹಾಳಾಗುತ್ತದೆ. ಉಪ್ಪು ನೈಸರ್ಗಿಕ ಸಂರಕ್ಷಕವಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಒಮ್ಮೆ ಉಪ್ಪಿನ ಪ್ರಮಾಣ ಪರೀಕ್ಷಿಸಿ, ಬೇಕಿದ್ದರೆ ಸೇರಿಸುವುದು ಉತ್ತಮ.
45
ತೇವಾಂಶದಿಂದ ದೂರವಿಡಿ
ಉಪ್ಪಿನಕಾಯಿಯ ದೊಡ್ಡ ಶತ್ರು ಅಂದರೆ ತೇವಾಂಶ. ಒದ್ದೆ ಕೈ ಅಥವಾ ಒದ್ದೆ ಚಮಚದಿಂದ ಉಪ್ಪಿನಕಾಯಿ ತೆಗೆದರೆ ಬೇಗ ಬೂಸ್ಟ್ ಬರುತ್ತದೆ. ಯಾವಾಗಲೂ ಒಣ ಚಮಚವನ್ನೇ ಬಳಸಿ. ಹಾಗೆಯೇ, ಉಪ್ಪಿನಕಾಯಿ ತೆಗೆಯುವಾಗ ಜಾಡಿಯ ಮುಚ್ಚಳವನ್ನು ಹೆಚ್ಚು ಹೊತ್ತು ತೆರೆದಿಡಬೇಡಿ.
55
ಮಧ್ಯಮಧ್ಯ ಬಿಸಿಲಿಗೆ ಇಡಿ
ಮಳೆಗಾಲದಲ್ಲಿ ಆಗಾಗ ಉಪ್ಪಿನಕಾಯಿ ಜಾಡಿಯನ್ನು ಬಿಸಿಲಿನಲ್ಲಿ ಇಡುವುದು ಒಳ್ಳೆಯದು. ಆದರೆ ಮುಚ್ಚಳ ತೆಗೆದು ಇಡಬಾರದು. ಹೀಗೆ ಮಾಡುವುದರಿಂದ ಒಳಗಿನ ತೇವಾಂಶ ಕಡಿಮೆಯಾಗಿ ಉಪ್ಪಿನಕಾಯಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಜೊತೆಗೆ, ಮಧ್ಯಮಧ್ಯ ಉಪ್ಪಿನಕಾಯಿಯನ್ನು ಕಲಕಿ, ಎಣ್ಣೆ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories