ಟೊಮೆಟೊ ಪ್ಯೂರಿ
ದಪ್ಪಮಾತ್ರವಲ್ಲದೆ ರುಚಿಕರ ಆಗಿರುವ ರೆಸ್ಟೋರೆಂಟ್ ನಂತಹ ಗ್ರೇವಿ ಭಕ್ಷ್ಯವನ್ನು ರುಚಿ ಹೆಚ್ಚಿಸಲು, ಹೆಚ್ಚಿನ ಬಾಣಸಿಗರು ಬಳಸುವುದು ಟೊಮೆಟೊ ಪ್ಯೂರಿ ಬೇಸ್. ಬೇಸ್ ಅನ್ನು ತಯಾರಿಸಲು, ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಅವುಗಳನ್ನು ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ, ಜೊತೆಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಚ್ಚಳದಿಂದ ಮುಚ್ಚಿ ಮತ್ತು 10 ನಿಮಿಷಗಳ ಕಾಲ ಬೇಯಿಸಿ.