ಗರಿಗರಿ ಚಿಪ್ಸ್, ಶರಬತ್, ಮಾವಿನ ಸಿಪ್ಪೆಯಿಂದ ಮಾಡ್ಬಹುದು ವೆರೈಟಿ ರೆಸಿಪಿ

Published : Apr 16, 2026, 04:26 PM IST

Mango peel : ಮಾರ್ಕೆಟ್ ಗೆ ಮಾವಿನ ಕಾಯಿ ಜೊತೆ ಹಣ್ಣು ಲಗ್ಗೆಯಿಟ್ಟಿದೆ. ಮಾವಿನ ಕಾಯಿ ಉಪ್ಪಿನಕಾಯಿ, ಚಟ್ನಿ ಅಂತ ಜನರು ರುಚಿಯಾದ ಮಾವಿನ ಆಹಾರ ಸೇವನೆ ಮಾಡ್ತಿದ್ದಾರೆ. ಮಾವಿನ ಕಾಯಿ ಬಳಸುವಾಗ ಅದ್ರ ಸಿಪ್ಪೆ ಕಸ ಸೇರುತ್ತೆ. ಆದ್ರೆ ಮಾವಿನಷ್ಟೇ ಸಿಪ್ಪೆಯೂ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಾ? 

PREV
17
ಮಾವಿನಕಾಯಿ ಸಿಪ್ಪೆ

ಮಾವಿನ ಕಾಯಿಯಂತೆ ಅದ್ರ ಸಿಪ್ಪೆಯಲ್ಲೂ ಪೋಷಕಾಂಶವಿದೆ. ಅದು ಸುವಾಸನೆಯಿಂದ ಕೂಡಿರುತ್ತದೆ. ನೀವು ಮಾವಿನ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಅದ್ರಿಂದ ಅಡುಗೆ ಮಾಡ್ಬಹುದು. ವೆರೈಟಿ ಆಹಾರ ತಯಾರಿಸಬಹುದು.

27
ಮಸಾಲೆ ಚಿಪ್ಸ್

ಮಾವಿನ ಸಿಪ್ಪೆಯಲ್ಲಿ ಸಿಂಪಲ್ ಆಗಿ ಚಿಪ್ಸ್ ಮಾಡ್ಬಹುದು. ಮಾಡೋದು ಸುಲಭ. ರುಚಿ ಕೂಡ. ಮಾವಿನ ಸಿಪ್ಪೆ ತೆಗೆದು, ಅದಕ್ಕೆ ಉಪ್ಪು ಮತ್ತು ಚಾಟ್ ಮಸಾಲೆ ಹಾಕಿ ಅದನ್ನು ಓವನ್ ನಲ್ಲಿ ಬೇಯಿಸಿ ಇಲ್ಲವೇ ಏರ್ ಪ್ರೈಯ್ ಮಾಡಿ. ಟೀ ಜೊತೆ ತಿನ್ನಲು ಗರಿಯಾದ ಸ್ನ್ಯಾಕ್ಸ್ ಸಿದ್ಧವಾಗುತ್ತದೆ.

37
ಮಾವಿನ ಸಿಪ್ಪೆ ವಿನೆಗರ್

ಮಾವಿನ ಸಿಪ್ಪೆಗಳನ್ನು ಬಳಸಿ ಮನೆಯಲ್ಲಿಯೇ ಪರಿಮಳಯುಕ್ತ ಮತ್ತು ನೈಸರ್ಗಿಕ ವಿನೆಗರ್ ತಯಾರಿಸಬಹುದು. ಮಾವಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಅದನ್ನು ಒಂದು ಗ್ಲಾಸ್ ಜಾರಿನಲ್ಲಿ ಹಾಕಿ. ಅಗತ್ಯವಿರುವಂತೆ ಸ್ವಲ್ಪ ಬೆಲ್ಲ ಮತ್ತು ನೀರನ್ನು ಸೇರಿಸಿ. ಜಾರ್ ಅನ್ನು ಹತ್ತಿ ಬಟ್ಟೆಯಿಂದ ಮುಚ್ಚಿ 10-15 ದಿನಗಳವರೆಗೆ ಬೆಚ್ಚಗಿನ ಸ್ಥಳದಲ್ಲಿ ಇರಿಸಿ. ಪ್ರತಿ ದಿನ ಜಾರ್ ಅನ್ನು ನಿಧಾನವಾಗಿ ಅಲ್ಲಾಡಿಸಿ. ಚೆನ್ನಾಗಿ ಬೆರೆತ ನಂತ್ರ ಅದನ್ನು ಫ್ರಿಜ್ ನಲ್ಲಿ ಇಟ್ಟುಕೊಳ್ಳಬಹುದು. ಇದನ್ನು ನೀವು ಸಲಾಡ್ ಮತ್ತು ಡ್ರೆಸ್ಸಿಂಗ್ಗಳಿಗೆ ಬಳಸಬಹುದು.

47
ಮಾವಿನ ಸಿಪ್ಪೆ ಶರಬತ್

ಮಾವಿನ ಸಿಪ್ಪೆಯಿಂದ ನೀವು ಶರಬತ್ ತಯಾರಿಸಬಹುದು. ಮಾವಿನ ಸಿಪ್ಪೆಯನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನೀರು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಬೇಕು. ಮಿಶ್ರಣ ಸರಿಯಾಗಿ ಕುದ್ದ ಮೇಲೆ ಅದನ್ನು ಸೋಸಿ. ಈ ಮಿಶ್ರಣವನ್ನು ನೀವು ಫ್ರಿಜ್ ನಲ್ಲಿ ಇಡಬಹುದು. ಬೇಸಿಗೆಯಲ್ಲಿ ಶರಬತ್ ಆಗಿ ಇದನ್ನು ಬಳಸಬಹುದು.

57
ಮಾವಿನ ಸಿಪ್ಪೆ ಫೇಸ್ ಪ್ಯಾಕ್

ಮಾವಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಮಾವಿನ ಸಿಪ್ಪೆಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು. ಇದಕ್ಕಾಗಿ, ಸಿಪ್ಪೆಗಳನ್ನು ಒಣಗಿಸಿ ಪುಡಿಮಾಡಿ. ಪುಡಿಯನ್ನು ಯಾವುದೇ ಮಾಸ್ಕ್, ಕಡಲೆ ಹಿಟ್ಟು ಅಥವಾ ಮೊಸರಿನೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ನೈಸರ್ಗಿಕ ಹೊಳಪು ಸಿಗುತ್ತದೆ.

67
ಮಸಾಲಾ ಪುಡಿ

ಮಾವಿನ ಸಿಪ್ಪೆಯಿಂದ ರುಚಿಯಾದ ಮಸಾಲೆ ತಯಾರಿಸಬಹುದು. ಮೊದಲು ಮಾವಿನ ಸಿಪ್ಪೆಗಳನ್ನು ತೊಳೆದು ಒಣಗಿಸಬೇಕು. ಈ ಸಿಪ್ಪೆಗಳನ್ನು ಕಡಿಮೆ ಉರಿಯಲ್ಲಿ ಲಘುವಾಗಿ ಹುರಿಯಬೇಕು. ನಂತ್ರ ಮಾವಿನ ಸಿಪ್ಪೆಗಳನ್ನು ಜೀರಿಗೆ, ಕೊತ್ತಂಬರಿ, ಒಣಗಿದ ಶುಂಠಿ, ಕಪ್ಪು ಉಪ್ಪು, ಕರಿಮೆಣಸು ಮತ್ತು ಒಣ ಮೆಣಸಿನಕಾಯಿಗಳೊಂದಿಗೆ ಪುಡಿಮಾಡಿ ಮಸಾಲಾ ತಯಾರಿಸಿ. ಚಾಟ್, ಮೊಸರು, ನಿಂಬೆ ಪಾನಕ ಮತ್ತು ನಿಮ್ಮ ನೆಚ್ಚಿನ ಆಹಾರಕ್ಕೆ ಇದನ್ನು ಹಾಕಿ ಸೇವಿಸಬಹುದು.

77
ಮಾವಿನ ಸಿಪ್ಪೆ ಟೀ

ಮಾವಿನ ಸಿಪ್ಪೆಯಿಂದ ಟೀ ತಯಾರಿಸ್ಬಹುದು. ಮಾವಿನ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ. ಅದಕ್ಕೆ ಟೀ ಪುಡಿ ಹಾಕಿ ಸ್ವಲ್ಪ ಸಮಯ ಕುದಿಸಿ ಮುಚ್ಚಿಡಿ. ನಂತ್ರ ಸೋಸಿ ಕುಡಿಯಿರಿ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories