ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನ (cold and cough) ಸಮಸ್ಯೆ ತುಂಬಾ ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಕೆಲವೊಂದು ಆಹಾರಗಳ ಸೇವನೆಯಿಂದಾಗಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ, ಕೆಮ್ಮು ಅಥವಾ ಶೀತ ಇದ್ದಾಗ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಖ್ಯಾತ ಪೌಷ್ಟಿಕತಜ್ಞರು ಚಳಿಗಾಲದಲ್ಲಿ ಶೀತ ಕೆಮ್ಮು ಇದ್ದಾಗ ಯಾವೆಲ್ಲಾ ಆಹಾರ ಸೇವಿಸಬಾರದು ಎಂದಿದ್ದಾರೆ ನೋಡೋಣ.
ಸಿಹಿ ತಿನಿಸುಗಳು (sweets)
ನಿಮಗೆ ಕೆಮ್ಮು ಅಥವಾ ಶೀತ ಇದ್ದಾಗ ಸಿಹಿ ತಿಂಡಿಗಳನ್ನು ಸೇವಿಸುವುದನ್ನು ತಪ್ಪಿಸಿ. ನೀವು ಆಹಾರದೊಂದಿಗೆ ಕಡಿಮೆ ಸಿಹಿಯನ್ನು ಸೇವಿಸಿದರೆ ಅದು ಹೆಚ್ಚು ತೊಂದರೆಯಾಗುವುದಿಲ್ಲ. ಆದರೆ ಸಿಹಿ ಹೆಚ್ಚಾದರೆ ಸಮಸ್ಯೆಗಳೂ ಸಹ ಹೆಚ್ಚುತ್ತವೆ.
ಬಾಳೆಹಣ್ಣು (Banana)
ನಿಮಗೆ ಕೆಮ್ಮು ಮತ್ತು ಶೀತವಿದ್ದರೆ, ನೀವು ಸಿಟ್ರಿಕ್ ಆಹಾರಗಳಿಂದ ದೂರವಿರಬೇಕು. ಈ ಸಮಯದಲ್ಲಿ ಬಾಳೆಹಣ್ಣುಗಳನ್ನು ಸೇವಿಸಬಾರದು. ಏಕೆಂದರೆ ಅದರಲ್ಲಿರುವ ಲೋಳೆಯು ಶೀತವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮಸಾಲೆಯುಕ್ತ ಆಹಾರ (spicy food)
ಮಸಾಲೆಯುಕ್ತ ಆಹಾರವು ಶೀತ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಹೊಟ್ಟೆಯ ಕಿರಿಕಿರಿ ಅಥವಾ ಮೂಗಿನಲ್ಲಿ ನೀರು ಸುರಿಯಲು ಕಾರಣವಾಗಬಹುದು. ಹಾಗಾಗಿ ಇದನ್ನು ಅವಾಯ್ಡ್ ಮಾಡಿ.
ಅನ್ನ (rice)
ಶೀತ ಇದ್ದಾಗ ಅನ್ನ ತಿನ್ನುವುದು ಹಾನಿಕಾರಕ. ಏಕೆಂದರೆ ಅನ್ನದ ಗುಣ ತಂಪಾಗಿರುತ್ತದೆ. ಈ ಕಾರಣದಿಂದಾಗಿ ಅದನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಬಾರದು. ಅಲ್ಲದೇ ತಂಗಳ ಅನ್ನವನ್ನಂತೂ ಮುಟ್ಟಲೂ ಬಾರದು.
ಪಪ್ಪಾಯಿ (Papaya)
ಪಪ್ಪಾಯಿ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಅತ್ಯುತ್ತಮವಾದ ಆಹಾರ. ಆದರೆ ಚಳಿಗಾಲದಲ್ಲಿ ಪಪ್ಪಾಯಿ ತಿನ್ನುವುದು ಶೀತದಲ್ಲಿ ಹಾನಿಕಾರಕ. ಇದು ಸೈನಸ್ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಅದನ್ನು ತಿನ್ನುವುದನ್ನು ತಪ್ಪಿಸಿ.
ವಾಲ್ನಟ್ (Walnut)
ವಾಲ್ನಟ್ ಆರೋಗ್ಯ ಉತ್ತಮವಾದ ಒಂದು ಡ್ರೈ ಫ್ರುಟ್ ಅನ್ನೋದು ನಿಜ. ಆದರೆ ಕೆಮ್ಮು ಮತ್ತು ಶೀತದಲ್ಲಿ ವಾಲ್ನಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಗಂಟಲು ನೋವಿಗೆ ಕಾರಣವಾಗಬಹುದು.
ಹಾಲು (Milk)
ಹಾಲು ಅಥವಾ ಅದರಿಂದ ತಯಾರಿಸಿದ ವಸ್ತುಗಳು ಹೆಚ್ಚಿನ ಪ್ರಮಾಣದ ಲೋಳೆಯನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ಅವು ಶ್ವಾಸಕೋಶದಲ್ಲಿ ಅಂಟಿಕೊಳ್ಳುತ್ತವೆ. ಆದ್ದರಿಂದ, ಕೆಮ್ಮು ಮತ್ತು ಶೀತವನ್ನು ತಪ್ಪಿಸಲು ಚಳಿಗಾಲದಲ್ಲಿ ಇದನ್ನು ಸೇವಿಸುವುದನ್ನು ಅವಾಯ್ಡ್ ಮಾಡಿ.