ಆಂಧ್ರದ ಖಾರ, ಉತ್ತರ ಕರ್ನಾಟಕದ ಪುಂಡಿ ಪಲ್ಯ ಸೇರಿಸಿ ಮಾಡಿ ಹುಳಿಯಾದ ಚಿಕನ್ ಸುಕ್ಕಾ

Published : Nov 05, 2026, 09:00 AM IST

Kannada Recipe ಆಂಧ್ರ ಸ್ಟೈಲ್‌ನ ಖಾರ ಮತ್ತು ಪುಂಡಿ ಪಲ್ಯದ ಹುಳಿ ರುಚಿಯ ಗೋಂಗುರ ಚಿಕನ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮಸಾಲೆಗಳ ಘಮದೊಂದಿಗೆ ತಯಾರಾಗುವ ಈ ಗ್ರೇವಿ ಅನ್ನ, ರೊಟ್ಟಿ ಮತ್ತು ದೋಸೆಗೆ ಅತ್ಯುತ್ತಮ ಕಾಂಬಿನೇಷನ್ ಆಗಿದೆ.

PREV
18
ಉತ್ತರ ಕರ್ನಾಟಕದ ಪುಂಡಿ ಪಲ್ಯ ಸೊಪ್ಪಿನ ಹುಳಿ

ಚಿಕನ್ ಅಂದ್ರೆ ಯಾವಾಗಲೂ ಒಂದೇ ತರಹದ ಗ್ರೇವಿನಾ? ಸ್ವಲ್ಪ ಆಂಧ್ರ ಸ್ಟೈಲ್‌ನಲ್ಲಿ ಖಾರಖಾರವಾಗಿ, ಬಾಯಲ್ಲಿ ನೀರೂರಿಸುವ ಹುಳಿ ರುಚಿಯ ಚಿಕನ್ ಟ್ರೈ ಮಾಡಿ. ಆಂಧ್ರದ ಫೇಮಸ್ ಗೋಂಗುರ ಅಥವಾ ಉತ್ತರ ಕರ್ನಾಟಕದ ಪುಂಡಿ ಪಲ್ಯ ಸೊಪ್ಪಿನ ಹುಳಿ, ಮೆಣಸಿನಕಾಯಿ ಖಾರ ಮತ್ತು ಮಸಾಲೆಗಳ ಘಮ ಸೇರಿ ತಯಾರಾಗುವ ಈ ಗೋಂಗುರ ಚಿಕನ್ ಅನ್ನ, ಜೋಳದ ರೊಟ್ಟಿ, ಚಪಾತಿ, ದೋಸೆಗೆ ಸೂಪರ್ ಕಾಂಬಿನೇಷನ್.

28
ಚಿಕನ್ ಮ್ಯಾರಿನೇಟ್ ಮಾಡಲು

ಚಿಕನ್ - 500 ಗ್ರಾಂ, ಅರಿಶಿನ ಪುಡಿ - ¼ ಟೀಸ್ಪೂನ್, ಖಾರದ ಪುಡಿ - 1 ಟೀಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್, ಉಪ್ಪು - ರುಚಿಗೆ ತಕ್ಕಷ್ಟು, ಮೊಸರು - 2 ಟೀಸ್ಪೂನ್,ನಿಂಬೆ ರಸ - 1 ಟೀಸ್ಪೂನ್, ಗೋಂಗುರ ಸೊಪ್ಪು

ಚಿಕನ್ ಗ್ರೇವಿ ಮಾಡಲು

ದೊಡ್ಡ ಈರುಳ್ಳಿ - 2 (ಸಣ್ಣಗೆ ಹೆಚ್ಚಿದ್ದು), ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಟೊಮೆಟೊ - 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್, ಖಾರದ ಪುಡಿ - 1 ಟೀಸ್ಪೂನ್, ಕೊತ್ತಂಬರಿ ಪುಡಿ - 1 1\2 ಟೀಸ್ಪೂನ್, ಜೀರಿಗೆ ಪುಡಿ - 1\2 ಟೀಸ್ಪೂನ್,ಗರಂ ಮಸಾಲ - 1\2 ಟೀಸ್ಪೂನ್, ಕಾಳುಮೆಣಸಿನ ಪುಡಿ - 1\2 ಟೀಸ್ಪೂನ್,ಜೀರಿಗೆ - 1\2 ಟೀಸ್ಪೂನ್,ಕರಿಬೇವಿನ ಸೊಪ್ಪು - 1 ಕಟ್ಟು, ಎಣ್ಣೆ - 3 ರಿಂದ 4 ಟೀಸ್ಪೂನ್, ಉಪ್ಪು - ರುಚಿಗೆ ತಕ್ಕಷ್ಟು, ನೀರು - ಅಗತ್ಯವಿರುವಷ್ಟು, ಕೊತ್ತಂಬರಿ ಸೊಪ್ಪು - ಸ್ವಲ್ಪ

38
ಆಂಧ್ರ ಸ್ಪೆಷಲ್ ಗೋಂಗುರ ಚಿಕನ್ ಮಾಡೋ ವಿಧಾನ - ಹಂತ 1

ಚಿಕನ್ ಮ್ಯಾರಿನೇಟ್ ಮಾಡಿ

ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಸರು, ನಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕನಿಷ್ಠ 30 ನಿಮಿಷ ನೆನೆಯಲು ಬಿಡಿ. ಇದರಿಂದ ಚಿಕನ್ ಒಳಗೆ ಮಸಾಲೆ ಚೆನ್ನಾಗಿ ಇಳಿದು, ಬೇಯಿಸಿದಾಗ ಸಾಫ್ಟ್ ಆಗಿ, ಟೇಸ್ಟಿಯಾಗಿರುತ್ತದೆ.

48
ಹಂತ 2: ಗೋಂಗುರ ಸೊಪ್ಪನ್ನು ಹುರಿಯಿರಿ

ಗೋಂಗುರ ಸೊಪ್ಪನ್ನು ಬಿಡಿಸಿ, ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಗೋಂಗುರ ಸೊಪ್ಪು ಸೇರಿಸಿ ಮೀಡಿಯಂ ಉರಿಯಲ್ಲಿ ಹುರಿಯಿರಿ. ಸೊಪ್ಪು ಚೆನ್ನಾಗಿ ಬಾಡಿ ಸಾಫ್ಟ್ ಆಗುವವರೆಗೆ ಬೇಯಿಸಿ. ಸೊಪ್ಪಿನಲ್ಲಿರುವ ಹುಳಿ ಅಂಶ ಬಿಟ್ಟುಕೊಂಡು, ಸೊಪ್ಪು ಚೆನ್ನಾಗಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ

58
ಹಂತ 3: ಈರುಳ್ಳಿ, ಟೊಮೆಟೊ ಫ್ರೈ ಮಾಡಿ
  • ಒಂದು ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಮತ್ತು ಸೋಂಪು ಹಾಕಿ ಒಗ್ಗರಣೆ ಕೊಡಿ.
  • ಇದರ ಜೊತೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಸೀಳಿದ ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಸೇರಿಸಿ ಈರುಳ್ಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ.
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
  • ಹೆಚ್ಚಿದ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ.
68
ಹಂತ 4: ಮಸಾಲೆ ಸೇರಿಸಿ ಚಿಕನ್ ಫ್ರೈ ಮಾಡಿ

ಆಮೇಲೆ ಕೊತ್ತಂಬರಿ ಪುಡಿ, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಸೇರಿಸಿ ಎಣ್ಣೆ ಬಿಟ್ಟುಕೊಳ್ಳುವವರೆಗೆ ತಿರುಗಿಸಿ.

ನೆನೆಸಿಟ್ಟ ಚಿಕನ್ ಸೇರಿಸಿ 5 ರಿಂದ 7 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಚಿಕನ್‌ನಿಂದ ನೀರು ಬಿಟ್ಟುಕೊಂಡು ಮಸಾಲೆಯೊಂದಿಗೆ ಬೆರೆಯುತ್ತದೆ.

ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ ಮೀಡಿಯಂ ಉರಿಯಲ್ಲಿ 10 ರಿಂದ 15 ನಿಮಿಷ ಬೇಯಿಸಿ.

78
ಹಂತ 5: ಗೋಂಗುರ ಸೊಪ್ಪು ಸೇರಿಸ
  • ಚಿಕನ್ ಚೆನ್ನಾಗಿ ಬೆಂದ ಮೇಲೆ, ನಾವು ಹುರಿದಿಟ್ಟುಕೊಂಡಿರುವ ಗೋಂಗುರ ಸೊಪ್ಪನ್ನು ಚಿಕನ್ ಜೊತೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
  • ಹುಳಿ ರುಚಿ ಚಿಕನ್ ಜೊತೆ ಚೆನ್ನಾಗಿ ಬೆರೆತು ಎಣ್ಣೆ ಮೇಲೆ ತೇಲುವವರೆಗೆ 2 ರಿಂದ 4 ನಿಮಿಷ ಮೀಡಿಯಂ ಉರಿಯಲ್ಲಿ ಬೇಯಿಸಿ.
  • ಮಧ್ಯಮಧ್ಯ ತಿರುಗಿಸುತ್ತಿರಿ. ಚಿಕನ್ ಚೆನ್ನಾಗಿ ಬೆಂದು, ಸೊಪ್ಪಿನ ಮಸಾಲೆ ಚಿಕನ್‌ನಲ್ಲಿ ಸೇರಿ, ಗ್ರೇವಿ ಗಟ್ಟಿಯಾಗುವವರೆಗೆ ಬೇಯಿಸಬೇಕು.
88
ಆಂಧ್ರ ಸ್ಪೆಷಲ್ ಗೋಂಗುರ ಚಿಕನ್

ಗೋಂಗುರ ಸೊಪ್ಪಿನ ಹುಳಿ ಮತ್ತು ಚಿಕನ್ ರುಚಿ ಒಟ್ಟಿಗೆ ಸೇರುವ ಈ ಆಂಧ್ರ ಸ್ಪೆಷಲ್ ಗೋಂಗುರ ಚಿಕನ್, ರೆಗ್ಯುಲರ್ ಚಿಕನ್ ಸಾಂಬಾರ್‌ಗಿಂತ ಸಂಪೂರ್ಣ ಡಿಫರೆಂಟ್ ಟೇಸ್ಟ್ ಕೊಡುತ್ತದೆ. ವೀಕೆಂಡ್ ಮಧ್ಯಾಹ್ನದ ಊಟಕ್ಕೆ ಮಾಡಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories