ಗುಲಾಬ್ ಜಾಮೂನು ಸಾಫ್ಟ್ ಆಗಲು ಈ ಟ್ರಿಕ್ಸ್ ಬಳಸಿ; ಹಿಟ್ಟು ಕಲಿಸಿಕೊಳ್ಳುವಾಗ ಸೇರಿಸಿಕೊಳ್ಳಿ

Published : Jun 08, 2026, 11:40 AM IST

ಮನೆಯಲ್ಲಿ ರೆಡಿಮೇಡ್ ಪೌಡರ್ ಬಳಸಿ ಮಾಡುವ ಗುಲಾಬ್ ಜಾಮೂನು ಮೃದುವಾಗಿರುವುದಿಲ್ಲ ಎಂಬ ಚಿಂತೆಯೇ? ಹಿಟ್ಟನ್ನು ನೀರಿನ ಬದಲು, ಹಾಲು ಮತ್ತು ತುಪ್ಪದ ವಿಶೇಷ ಮಿಶ್ರಣದಿಂದ ಕಲಸುವ ರಹಸ್ಯ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ವಿಧಾನದಿಂದ ಹೋಟೆಲ್‌ನಂತಹ ಸಾಫ್ಟ್ ಜಾಮೂನು ತಯಾರಿಸಬಹುದು.

PREV
15
ಸಾಫ್ಟ್ ಗುಲಾಬ್ ಜಾಮೂನು

ನೀವು ಸಿಹಿ ಪ್ರಿಯರಾಗಿದ್ರೆ, ಗುಲಾಬ್ ಜಾಮೂನು ನಿಮಗೆ ಖಂಡಿತ ಇಷ್ಟವಾಗುತ್ತದೆ. ಮನೆಯಲ್ಲಿ ಮಾಡುವ ಗುಲಾಬ್ ಜಾಮೂನು ಸಾಫ್ಟ್ ಅಗಲ್ಲ ಎಂದು ಹಲವರು ಹೇಳುತ್ತಾರೆ. ಆದ್ರೆ ಒಂದು ವಿಧಾನದಿಂದ ಗುಲಾಬ್ ಜಾಮೂನು ಸಾಫ್ಟ್ ಆಗಿ ಮಾಡಬಹುದು.

25
ರೆಡಿಮೇಡ್ ಗುಲಾಬ್ ಜಾಮೂನು ಪೌಡರ್ ಪ್ಯಾಕೇಟ್

ಇಂದು ಮಾರುಕಟ್ಟೆಯಲ್ಲಿ ರೆಡಿಮೇಡ್ ಗುಲಾಬ್ ಜಾಮೂನು ಪೌಡರ್ ಪ್ಯಾಕೇಟ್ ಸಿಗುತ್ತದೆ. ಈ ಪೌಡರ್ ಬಳಸಿ ಜಾಮೂನು ಮಾಡಿದ್ರೂ ಹೋಟೆಲ್‌ನಂತೆ ಆಗಲ್ಲ ಎಂಬುವುದು ಹಲವರ ಬೇಸರವಾಗಿದೆ. ಈ ಲೇಖನದಲ್ಲಿ ಗುಲಾಬ್ ಜಾಮೂನು ತಯಾರಿಸುವ ಹಿಟ್ಟನ್ನು ಹೇಗೆ ಹದವಾಗಿ ಕಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

35
ನೀರಿನ ಬದಲಾಗಿ ಹಾಲು ಬಳಸಿ

ಅಂಗಡಿಯಿಂದ ತೆಗೆದುಕೊಂಡು ಬಂದ ಇನ್‌ಸ್ಟಂಟ್ ಗುಲಾಬ್ ಜಾಮೂನು ಪೌಡರ್‌ನ್ನು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ಈ ಹಿಟ್ಟನ್ನು ತುಂಬಾ ಜನರು ನೀರಿನಿಂದ ಕಲಿಸಿಕೊಳ್ಳುತ್ತಾರೆ. ಇದರಿಂದ ಜಾಮೂನು ಸಾಫ್ಟ್ ಆಗಲ್ಲ. ನೀರಿನ ಬದಲಾಗಿ ಹಿಟ್ಟು ಕಲಿಸಿಕೊಳ್ಳಲು ಹಾಲು ಬಳಸಬೇಕು.

45
ಹಿಟ್ಟು ಸಿದ್ಧ ಮಾಡಿಕೊಳ್ಳೋದು ಹೇಗೆ?

ಮೊದಲಿಗೆ ಒಂದು ಬೌಲ್‌ನಲ್ಲಿ ಹಾಲಿಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಹಾಲು ಬಿಸಿಯಾದ ನಂತರ ಚಿಟಿಕೆಯಷ್ಟು ಬೇಕಿಂಗ್ ಸೋಡಾ ಸೇರಿಸಿಕೊಳ್ಳಿ. ಈಗ ಈ ಹಾಲು ಬಳಸಿಕೊಂಡು ಗುಲಾಬ್ ಜಾಮೂನು ಹಿಟ್ಟನ್ನು ಕಲಿಸಿಕೊಂಡು ಕಾಟನ್ ಬಟ್ಟೆ ಮುಚ್ಚಿ 30 ನಿಮಿಷ ಎತ್ತಿಟ್ಟುಕೊಳ್ಳಿ. 30 ನಿಮಿಷದ ನಂತರ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಡೀಪ್ ಫ್ರೈ ಮಾಡಿಕೊಳ್ಳಿ.

55
ಸಕ್ಕರೆ, ಏಲಕ್ಕಿ ಮಿಶ್ರಿತ ಪಾಕ

ಈಗ ಸಕ್ಕರೆ, ಏಲಕ್ಕಿ ಮಿಶ್ರಿತ ಪಾಕದಲ್ಲಿ ಡೀಪ್ ಫ್ರೈ ಮಾಡಿಕೊಂಡಿರುವ ಗುಲಾಬ್ ಜಾಮೂನು ಉಂಡೆಗಳನ್ನು ಹಾಕಿಕೊಳ್ಳಬೇಕು. ಗುಲಾಬ್ ಜಾಮೂನ್‌ಗಳನ್ನು ಸುಮಾರು 2 ಗಂಟೆಗಳ ಕಾಲ ಸಿರಪ್‌ನಲ್ಲಿ ನೆನೆಯಲು ಬಿಡಬೇಕು. ಆಗ ನಿಮಗೆ ಅಂತಿಮವಾಗಿ ಸಾಫ್ಟ್ ಜಾಮೂನು ಸಿಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories