ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಅತ್ಯಂತ ಸುಂದರ ನಗರ. ಇಲ್ಲಿನ ವಾತಾವರಣ, ಐಟಿ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ, ಪ್ರವಾಸಿ ತಾಣ, ಕೋಟೆ, ದೇವಸ್ಥಾನ ಸೇರಿದಂತೆ ಹಲವು ಆಕರ್ಷಣೀಯ ಕೇಂದ್ರಗಳಿವೆ.
29
ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಐಟಿಬಿಟಿ ನಗರ ಸೇರಿದಂತೆ ಕೆಲ ಹೆಸರುಗಳು ಬೆಂಗಳೂರಿಗಿದೆ. ಇದೀಗ ಬೆಂಗಳೂರಿಗೆ ಕೇಕ್ ರಾಜಧಾನಿ ಅನ್ನೋ ಹೊಸ ಹೆಸರನ್ನು ನೀಡಲಾಗಿದೆ.
39
2023ರ ಸಾಲಿನಲ್ಲಿ ದೇಶದಲ್ಲಿ ಅತೀ ಹೆಚ್ಚು ಕೇಕ್ ಖರೀದಿಸಿದ ದಾಖಲೆ ಬೆಂಗಳೂರಿಗೆ ಸಂದಿದೆ. 2023ರಲ್ಲಿ ಬೆಂಗಳೂರಿಗರು ಬರೋಬ್ಬರಿ 8.5 ಮಿಲಿಯನ್ ಕೇಕ್ ಆರ್ಡರ್ ಮಾಡಿದ್ದಾರೆ.
49
2023ರ ಪೆಭ್ರವರಿ ತಿಂಗಳ ಮತ್ತಷ್ಟು ವಿಶೇಷ. ಪ್ರೇಮಿಗಳ ದಿನ ಬೆಂಗಳೂರಿಗರು ಪ್ರತಿ ನಿಮಿಷಕ್ಕೆ 271 ಕೇಕ್ ಆರ್ಡರ್ ಮಾಡಿದ್ದಾರೆ. ಪ್ರೇಮಿಗಳ ದಿನ ಬೆಂಗಳೂರಿಗರು ಹೆಚ್ಚು ರೆಡ್ ವೆಲ್ವೇಟ್ ಕೇಕ್ ಆರ್ಡರ್ ಮಾಡಿದ್ದಾರೆ.
59
2023ರಲ್ಲಿ ಬೆಂಗಳೂರಿಗರು ಆರ್ಡರ್ ಮಾಡಿದ ಕೇಕ್ ಪೈಕಿ ಚಾಕೋಲೇಟ್ ಫ್ಲೇವರ್ ಕೇಕ್ ಗರಿಷ್ಠವಾಗಿದೆ. ಇದರ ಜೊತೆಗೆ ರೆಡ್ ವೆಲ್ವೇಟ್, ಬ್ಲಾಕ್ ಕರೆಂಟ್ ಸೇರಿದಂತೆ ಇತರ ಕೇಕ್‌ಗಳು ಸೇರಿದೆ.
69
ಆನ್‌ಲೈನ್ ಫುಡ್ ಸ್ವಿಗ್ಗಿ ಮೂಲಕ ಬೆಂಗಳೂರಿನಲ್ಲಿ ಗರಿಷ್ಠ ಕೇಕ್ ಆರ್ಡರ್ ಮಾಡಲಾಗಿದೆ. ಇತರ ನಗರಗಳಿಗೆ ಹೋಲಿಸಿದರೆ 2023ರಲ್ಲಿ ಬೆಂಗಳೂರು ದಾಖಲೆ ಅಂದರೆ 8.5 ಮಿಲಿಯನ್ ಕೇಕ್ ಆರ್ಡರ್ ಮಾಡಿದ್ದಾರೆ.
79
ಈ ದಾಖಲೆ ಪ್ರಮಾಣದ ಕೇಕ್ ಆರ್ಡರ್ ಮಾಡಿ ಹೊಸ ಇತಿಹಾಸ ರಚಿಸಿರುವ ಬೆಂಗಳೂರಿಗೆ ಇದೀಗ ಕೇಕ್ ರಾಜಧಾನಿ ಅನ್ನೋ ಪಟ್ಟ ಲಭಿಸಿದೆ. ಹಲವು ಹೆಸರುಗಳ ಜೊತೆಗೆ ಇದೀಗ ಕೇಕ್ ಕ್ಯಾಪಿಟಲ್ ಹೆಸರೂ ಸೇರಿಕೊಂಡಿದೆ.
89
ಒಂದೇ ದಿನದಲ್ಲಿ ಗರಿಷ್ಠ ಕೇಕ್ ಆರ್ಡರ್ ಮಾಡಿದ ಹೆಗ್ಗಳಿಕೆಗೆ ನಾಗ್ಪುರದ ವ್ಯಕ್ತಿ ಪಾತ್ರರಾಗಿದ್ದಾರೆ. ಈತ ಒಂದೇ ದಿನ 92 ಕೇಕ್ ಆರ್ಡರ್ ಮಾಡಿದ್ದಾನೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ಲಘು ಉಪಹಾರ, ರಾತ್ರಿ ಭೋಜನ ಎಲ್ಲವೂ ಕೇಕ್ ಮಾಡಿರುವ ಸಾಧ್ಯತೆ ಇದೆ.
99
కావలసిన పదార్థాలు: మూడు కప్పులు క్యారెట్ తురుము (Carrot grater), నాలుగు గుడ్లు (Eggs), ఒకటిన్నర కప్పు మైదా (Maida), రెండు కప్పులు చక్కెర పొడి (Sugar powder), అర కప్పు చాక్లెట్ పొడి (Chocolate powder), ఒకటిన్నర చెంచా బేకింగ్ పౌడర్ (Baking powder), ఒకటిన్నర చెంచా వంట సోడా (cooking sode).
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.