ಫ್ರಿಜ್‌ ಒಳಗಾ? ಹೊರಗಾ?: ಹಾಳಾಗದಂತೆ ಬ್ರೆಡ್ ಇಡುವುದು ಹೇಗೆ‌?

First Published | Oct 2, 2020, 5:32 PM IST

ಬ್ರೆಡ್ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಬೆಳಗ್ಗೆ ಉಪಾಹಾರದಿಂದ ಸಂಜೆ ಸ್ನ್ಯಾಕ್ಸ್‌ವರೆಗೆ ಯಾವ ಟೈಮ್‌ನಲ್ಲಿ ಬೇಕಾದರೂ ತಿನ್ನಬಹುದಾದ ಆಹಾರ.  ಮಕ್ಕಳ ಟಿಫಿನ್‌ಗಳು ಅಥವಾ ಲಂಚ್‌ಗೂ ಸರಿ ಹೊಂದುತ್ತದೆ. ಇತ್ತೀಚಿನ ದಿನಗಳಲ್ಲಿ, ಮೈದಾ ಹೊರತಾಗಿ ಸಂಪೂರ್ಣ ಗೋಧಿ ಬ್ರೆಡ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಬ್ರೆಡ್ ಲೈಫ್ ಚಿಕ್ಕದು. ಹಾಳಾಗಾದ ಹಾಗೆ ಇದನ್ನು ಸ್ಟೋರ್‌ ಮಾಡುವುದು ಹೇಗೆ? ನೋಡೋಣ.

ಬೆಳಗ್ಗೆ ಉಪಾಹಾರದಿಂದ ಸಂಜೆ ಸ್ನಾಕ್ಸ್‌ ವರೆಗೆ ಯಾವ ಟೈಮನಲ್ಲಿ ಬೇಕಾದರೂ ತಿನ್ನಬಹುದಾದ ಆಹಾರ ಈ ಬ್ರೆಡ್. ದಕ್ಷಿಣ ಭಾರತೀಯರು ಇದರಿಂದ ತುಸು ದೂರವಾದರೂ, ಉತ್ತರ ಭಾರತದಲ್ಲಿ ಬಹಳವಾಗಿಯೇ ಬಳಸುತ್ತಾರೆ.
ಮೈದಾಹೊರತಾಗಿ, ಗೋಧಿ, ರಾಗಿ ಹಾಗೂ ಮಲ್ಟಿ ಗ್ರೈನ್‌ ಬ್ರೆಡ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಬೇಗ ಹಾಳುತ್ತದೆ.
Tap to resize

ಹೊರಗಿಟ್ಟರೆ ಬೇಗ ಹಾಳಾಗುತ್ತದೆ. ಫ್ರಿಡ್ಜಲ್ಲಿ ಇಟ್ಟರೆ ರುಚಿಗೆಡುತ್ತದೆ. ಏನು ಮಾಡಬೇಕು?
ನಾವು ಬ್ರೆಡ್ ಫ್ರಿಜ್‌ನಲ್ಲಿ ಇಡುತ್ತೇವೆ ಹಾಗೂ ಫ್ರಿಜ್‌ನಲ್ಲಿ ಇಡುವುದರಿಂದ ಬ್ರೆಡ್ ಮುಂದೆ ಫ್ರೆಶ್‌ ಆಗಿರುತ್ತದೆ ಮತ್ತು ಹಾಳಾಗುವುದಿಲ್ಲ ಎಂದು ಭಾವಿಸುತ್ತೇವೆ.ಬ್ರೆಡ್‌ ಸ್ಟೋರ್‌ ಮಾಡಲು ಫ್ರಿಜ್ ಸೂಕ್ತ ಸ್ಥಳವಲ್ಲ ಎಂದು ನಿಮಗೆ ಗೊತ್ತಾ? ಹಾಗಾದರೆ ಬ್ರೆಡ್ ಹೇಗೆ ಸಂಗ್ರಹಿಸುವುದು?
ಬ್ರೆಡ್ ವಿಶ್ವಾದ್ಯಂತ ಅತ್ಯಂತ ಫೇಮಸ್‌ ಫುಡ್‌. ಇದನ್ನು ಸಾಮಾನ್ಯವಾಗಿ ನೀರು, ಹಿಟ್ಟು ಮತ್ತು ಯೀಸ್ಟ್‌ನಿಂದ ತಯಾರಿಸಲಾಗುತ್ತದೆ. ಅದನ್ನು ಸರಿಯಾಗಿ ಸ್ಟೋರ್‌ ಮಾಡದಿದ್ದರೆ ಫಂಗಸ್‌ ಬರುತ್ತದೆ.
ಬ್ರೆಡ್‌ ಹಾಳಾಗುವುದನ್ನು ತಡೆಯಲು ಫ್ರಿಜ್‌ನಲ್ಲಿ ಇಡುತ್ತೇವೆ. ಆದರೆ ಅದು ಡ್ರೈ ಆಗುತ್ತದೆ ಮತ್ತು ರುಚಿ ಕೂಡ ಹದಗೆಡುತ್ತದೆ. ರೆಫ್ರಿಜರೇಟರ್‌ನಲ್ಲಿ ಸ್ಟೋರ್‌ ಮಾಡುವ ಬ್ರೆಡ್ ಆರೋಗ್ಯಕ್ಕೂ ಒಳ್ಳೆಯದಲ್ಲ.
ಹೆಚ್ಚು ಕಾಲ ತಾಜಾವಾಗಿಡಲು, ಅದನ್ನು ಕೋಣೆಯ ಉಷ್ಣಾಂಶದಲ್ಲಿ ತೇವಾಂಶದಿಂದ ದೂರವಿಡಬೇಕು. ಹೀಗೆ ನಾವು ಬ್ರೆಡ್ ಅನ್ನು ಎರಡು ದಿನಗಳವರೆಗೆ ಹಾಳಾಗದಂತೆ ಬಳಸಬಹುದು.
ಎರಡು ದಿನಗಳಿಗಿಂತ ಹೆಚ್ಚು ಕಾಲ ಕೊಠಡಿಯೂ ಉಷ್ಮಾಂಶದಲ್ಲಿ ಇಡಬಹುದು.
ಪ್ಯಾಕೆಟ್ ಅನ್ನು ಸೂರ್ಯನ ನೇರ ಬೆಳಕಿನಿಂದ ದೂರವಿರುವ ಅಡುಗೆ ಮನೆ ಅಥವಾ ಡೈನಿಂಗ್‌ ಟೇಬಲ್‌ನಂತಹ ತಂಪಾದ ಮತ್ತು ಒಣ ಸ್ಥಳದಲ್ಲಿ ಪ್ರತ್ಯೇಕವಾಗಿ ಇಟ್ಟರೊಳಿತು.
ಬ್ರೆಡ್ ಪ್ಯಾಕೆಟ್ ತೆರೆದ ನಂತರ ಅದನ್ನು ಕೋಣೆಯ ಉಷ್ಣಾಂಶದಲ್ಲಿ ಚೆನ್ನಾಗಿ ಮುಚ್ಚಿಡಿ. ಬ್ರೆಡ್ ಚೂರುಗಳನ್ನು ಸಂಗ್ರಹಿಸಲು ಬ್ರೆಡ್ ಬಾಕ್ಸ್ ಅಥವಾ ಯಾವುದೇ ಪ್ಲಾಸ್ಟಿಕ್ ಚೀಲವನ್ನು ಬಳಸಬಹುದು.
ಪ್ಲಾಸ್ಟಿಕ್ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಬಹುದು .ಇದರಿಂದ ಬ್ರೆಡ್‌ನ ತೇವಾಂಶ ಉಳಿಯುತ್ತದೆ ಮತ್ತು ಅದು ಡ್ರೈ ಆಗುವುದಿಲ್ಲ.
ಎರಡು ದಿನಗಳಿಗಿಂತ ಹೆಚ್ಚು ಬ್ರೆಡ್‌ ಸ್ಟೋರ್‌ ಮಾಡುವಾಗ, ಪಾಲಿಥೀನ್ ಕವರ್‌ಅಥವಾ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಹಾಕಿ, ಫ್ರೀಜರ್‌ನಲ್ಲಿ ಇಡಿ. ಫ್ರೀಜರ್‌ನಲ್ಲಿ ಇಡುವುದರಿಂದ ಉಷ್ಣತೆಯು ಕಡಿಮೆಯಾಗುತ್ತದೆ ಮತ್ತು ಫಂಗಸ್‌ ಬರುವುದಿಲ್ಲ.
ಉಳಿದ ಬ್ರೆಡ್‌ನಿಂದಬ್ರೆಡ್ ಕ್ರಂಬ್ಸ್ ಕೂಡ ಮಾಡಬಹುದು. ಟೋಸ್ಟ್ ಮಾಡಿದ ಬ್ರೆಡ್‌ ಅನ್ನು ಮಿಕ್ಸರ್‌ನಲ್ಲಿ ಪುಡಿಮಾಡಿ. ನಂತರ ಏರ್‌ ಟೈಟ್‌ ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟರೆ ಪಕೋಡಾ, ಕಟ್ಲೆಟ್, ಕೋಫ್ತಾ ಅಥವಾ ಉಪ್ಮಾ ತಯಾರಿಸಲು ಬಳಸಬಹುದು

Latest Videos

click me!