ಇನ್ನು ಮುಂದೆ ಈರುಳ್ಳಿ ಹೆಚ್ಚುವುದು ಸೂಪರ್ ಈಸಿ, ಹೇಗದು?

Suvarna News   | Asianet News
Published : Jan 28, 2021, 04:03 PM IST

ಸಲಾಡ್‌ಗಳಿಂದ ಹಿಡಿದು, ಅಡುಗೆಯವರೆಗೆ ಎಲ್ಲದಕ್ಕೂ ಈರುಳ್ಳಿ ಬೇಕಾಗಿದೆ. ಪ್ರತಿ ಊಟದಲ್ಲೂ ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಅದನ್ನು ಕತ್ತರಿಸುವುದು ಬಹಳ ಕಷ್ಟದ ಕೆಲಸವೆಂದು ತೋರುತ್ತದೆ. ಈರುಳ್ಳಿ ಕತ್ತರಿಸುವಾಗ ನಗುವ ಮುಖದಲ್ಲಿ ಕಣ್ಣೀರು ತುಂಬಿರುತ್ತದೆ. ಆದರೆ ಅದನ್ನು ಬಿಟ್ಟು ಅಡುಗೆ ಮಾಡುವುದು ಕಷ್ಟ. ಇಂದು ಈರುಳ್ಳಿಯನ್ನು ಹೆಚ್ಚುವ ಪರಿಪೂರ್ಣ ವಿಧಾನವನ್ನು ತಿಳಿಸಲಿದ್ದೇವೆ. ಈರುಳ್ಳಿ ಸಿಪ್ಪೆಯನ್ನು ಸಿಪ್ಪೆ ಸುಲಿದು ಕತ್ತರಿಸಿ, (ಕಣ್ಣೀರು ಇಲ್ಲದೆ) ದರೂ ಕಣ್ಣೀರು ಬಾರದೇ ಇರೋತರ ಇರೋದು ಹೇಗೆ ನೋಡೋಣ... 

PREV
19
ಇನ್ನು ಮುಂದೆ ಈರುಳ್ಳಿ ಹೆಚ್ಚುವುದು ಸೂಪರ್ ಈಸಿ, ಹೇಗದು?

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರವುದು ಸಹಜ. ಏಕೆಂದರೆ ಕತ್ತರಿಸುವಾಗ ಅದರಿಂದ ಕಿಣ್ವಗಳು ಹೊರಬರುತ್ತವೆ. ಈ ದ್ರವ ಕಣ್ಣುಗಳಲ್ಲಿ ನೀರು ತರಿಸುತ್ತದೆ. ಆದರೆ ಅದನ್ನು ತಪ್ಪಿಸಲು ಒಂದು ಉತ್ತಮ ವಿಧಾನವಿದೆ.

29

ಈರುಳ್ಳಿ ಕತ್ತರಿಸುವ ಮೊದಲು ಸಿಪ್ಪೆ ಸುಲಿದು 10 ರಿಂದ 15 ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಇಡಿ. ಇದು ಈರುಳ್ಳಿಯ ಕಿಣ್ವದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಇದನ್ನು ಕತ್ತರಿಸುವಾಗ ಕಣ್ಣುಗಳಿಗೆ ಹೆಚ್ಚು ಕಿರಿಕಿರಿಯುಂಟು ಮಾಡುವುದಿಲ್ಲ.

39

ಹರಿತವಾದ ಅಂಚಿನ ಚಾಕುವಿನಿಂದ ಈರುಳ್ಳಿಯನ್ನು ಯಾವಾಗಲೂ ಕತ್ತರಿಸಲು ಪ್ರಯತ್ನಿಸಿ. ಈರುಳ್ಳಿ ತಲೆಯಿಂದ ಎಂದೂ ಕತ್ತರಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಈರುಳ್ಳಿಯ ಬೇರಿನ ಭಾಗವನ್ನು ಮೊದಲು ಕತ್ತರಿಸಿ. 

49

ಈರುಳ್ಳಿ ಕತ್ತರಿಸುವಾಗ ಕಣ್ಣುಗಳಲ್ಲಿ ನೀರು ಬಾರದೇ ಇರಲು ಚಾಕುವಿನ ಮೇಲೆ ಸ್ವಲ್ಪ ನಿಂಬೆರಸವನ್ನು ಹಾಕಬಹುದು.

59

ಈರುಳ್ಳಿ ಕತ್ತರಿಸುವಾಗ ಸೀಟಿಯನ್ನು ಊದಿದರೂ ಕಣ್ಣುಗಳಿಗೆ ಕಿರಿಕಿರಿ ಇರುವುದಿಲ್ಲ. ವಾಸ್ತವವಾಗಿ, ಗಾಳಿಯು ಶಿಳ್ಳೆ ಹಾಕುವಾಗ ಬಾಯಿಯಿಂದ ಹೊರ ಸೂಸುತ್ತದೆ, ಇದರಿಂದ ಕಿಣ್ವಗಳು ಕಣ್ಣುಗಳಿಗೆ ತಲುಪುವುದಿಲ್ಲ ಮತ್ತು ಕಣ್ಣುಗಳಿಂದ ನೀರು ಬರುವುದಿಲ್ಲ.

69

ಈರುಳ್ಳಿಯನ್ನು ಕತ್ತರಿಸುವ ಜಾಗದಲ್ಲಿ ಮೇಣದ ಬತ್ತಿ ಅಥವಾ ದೀಪಗಳನ್ನು ಉರಿಸಿ. ಹೀಗೆ ಮಾಡುವುದರಿಂದ ಈರುಳ್ಳಿಯಿಂದ ಹೊರಬರುವ ಅನಿಲವು ಮೇಣದ ಬತ್ತಿ ಅಥವಾ ದೀಪದ ಕಡೆಗೆ ಚಲಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ತಲುಪುವುದಿಲ್ಲ.

79

ಈರುಳ್ಳಿಯನ್ನು ಕತ್ತರಿಸುವಾಗ ಬ್ರೆಡ್ ತುಂಡನ್ನು ಬಾಯಿಯಲ್ಲಿ ಇಡಿ. ಈರುಳ್ಳಿಯನ್ನು ಕತ್ತರಿಸುವಾಗ ಅದನ್ನು ಜಗಿಯುವುದರಿಂದ ಕಣ್ಣೀರು ಬರುವುದಿಲ್ಲ.

89

ಈರುಳ್ಳಿಯನ್ನು ಬಿಸಿಲಲ್ಲಿ ಅಥವಾ ಗಾಳಿಯಲ್ಲಿ ಕತ್ತರಿಸಿದರೂ ಕಣ್ಣಲ್ಲಿ ನೀರು ಬರೋಲ್ಲ.

99

ಇನ್ನು ಈರುಳ್ಳಿ ಯನ್ನು ಎರಡು ಭಾಗ ಮಾಡಿ ಅದನ್ನು ನೀರಿನಲ್ಲಿ ಹತ್ತು ನಿಮಿಷ ಇಟ್ಟು ಮತ್ತೆ ಕತ್ತರಿಸಿ, ಇದರಿಂದ ಕಣ್ಣಲ್ಲಿ ನೀರು ಬರುವುದಿಲ್ಲ. 

click me!

Recommended Stories