ಸೇವಿಸುವ ಆಹಾರಕ್ಕೂ ಮನಸಿಗೂ ಸಂಬಂಧವಿದೆ: ಒತ್ತಡ ನಿವಾರಿಸೋ ಆಹಾರಗಳಿವು

First Published Aug 17, 2020, 11:01 AM IST

ಯೋಗ, ಧ್ಯಾನ, ವ್ಯಾಯಾಮ ಮಾಡುವಂತೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೂ ಮುಖ್ಯ. ಕೆಲವು ಆಯ್ದ ಆಹಾರ ವಸ್ತು ನಿಮ್ಮ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡ ನಿವಾರಿಸಲು ನೀವು ಸೇವಿಸಬಹುದಾದ ಆಹಾರಗಳಿವು.

ಲಾಕ್‌ಡೌನ್ ನಂತರ ಪ್ರದೇಶಗಳಂತೆ ಜನರ ಮನಸೂ ಲಾಕ್‌ ಆದಂತಾಗಿದೆ. ಹೊರಗಿನ ಮನೋರಂಜನೆಯಿಂದ ಸಂಪೂರ್ಣ ವಿಮುಕ್ತರಾದ ಬಹಳಷ್ಟು ಜನ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಆಹಾರ ವಿಧಾನದ ಮೂಲಕ ನಿಮ್ಮ ಮನಸಿನ ಒತ್ತಡ ಕಡಿಮೆ ಮಾಡಬಹುದು.
undefined
ನೀವು ಸೇವಿಸುವ ಆಹಾರ ನಿಮ್ಮ ಭಾವನೆಗಳ ಮೇಲೆಯೂ ಪ್ರಭಾವ ಬೀರುತ್ತದೆ. ಆಹಾರ ಕ್ರಮ ಸರಿಯಾಗಿದ್ದರೆ, ಕೊಲೆಸ್ಟ್ರಾಲ್ ಕಡಿಮೆಯಾಗಿ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.
undefined
ಯೋಗ, ಧ್ಯಾನ, ವ್ಯಾಯಾಮ ಮಾಡುವಂತೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆಹಾರವೂ ಮುಖ್ಯ. ಕೆಲವು ಆಯ್ದ ಆಹಾರ ವಸ್ತು ನಿಮ್ಮ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಒತ್ತಡ ನಿವಾರಿಸಲು ನೀವು ಸೇವಿಸಬಹುದಾದ ಆಹಾರಗಳಿವು.
undefined
ಮೀನು: ಫಾಟಿ ಫಿಶ್‌ಗಳಲ್ಲಿ ಒಮೆಗಾ-3, ಫಾಟ್ಟಿ ಆಸಿಡ್‌ಗಳಿರುತ್ತದೆ.ಇದರಲ್ಲಿರುವ ಅಲ್ಫಾ ಲಿನೋಲೆನಿಕ್ ಆಸಿಡ್ ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿ ಸಹಕಾರಿ. ಸಾಲ್ಮನ್ ಮೀನು, ಮೇಕರೆಲ್‌ನಂತ ಮೀನಿನ ಖಾದ್ಯ ಆಹಾರದ ಮೆನುವಿನಲ್ಲಿರಲಿ.
undefined
ಮೊಟ್ಟೆ:ಬೇಯಿಸಿದ ಮೊಟ್ಟೆ ಪವರ್ ಹೌಸ್‌ನಂತೆ. ದೇಹಕ್ಕೆ ಬೇಕಾದ ಸಾಕಷ್ಟು ವಿಟಮಿನ್‌ಯುಕ್ತ ಅಂಶಗಳಲ್ಲಿರುತ್ತವೆ. ಮೊಟ್ಟೆಯಲ್ಲಿ ಮಿನರಲ್ಸ್, ಅಮಿನೋ ಆಸಿಡ್, ಆಂಟಿ ಆಕ್ಸಿಡೆಂಟ್ ಹಾಗೂ ಪ್ರೋಟೀನ್ ಇರುತ್ತದೆ. ಮೊಟ್ಟೆಯಲ್ಲಿ ಅಡಕವಾಗಿರುವ ಕೊಲೈನ್ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಒತ್ತಡಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
undefined
ಬೆಳ್ಳುಳ್ಳಿ:ಮಾನಸಿಕ ಒತ್ತಡ ನಿಮಗೆ ಅತೀವ ಸುಸ್ತು ಅನುಭವಕ್ಕೆ ತರುವುದಲ್ಲದೆ, ನಿಮ್ಮ ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಕಮಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್‌ ಹೆಚ್ಚಿರುತ್ತದೆ, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸಿ ಒತ್ತಡ ನಿವಾರಿಸುತ್ತದೆ.
undefined
ಡಾರ್ಕ್ ಚಾಕಲೇಟ್:ಚಾಕಲೇಟ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದ ವಿಚಾರ. ಹಾಗಾಗಿಯೇ ಬಹಳಷ್ಟು ಜನ ತಮ್ಮ ಬ್ಯಾಗ್‌ಗಳಲ್ಲಿ, ಚಾಕಲೇಟ್ ಇಟ್ಟುಕೊಂಡಿರುತ್ತಾರೆ.ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಚಾಕಲೇಟ್ ಆತಂಕವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಾಕಲೇಟ್ ತಿನ್ನುವುದರಿಂದ ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್‌ಗಳು ಕಡಿಮೆಯಾಗುತ್ತದೆ
undefined
ಅರಶಿನ:ಬಣ್ಣದ ಗುಣವಿರುವ ಕುರ್ಕುಮಿನ್ ಅರಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಕವಾಗಿರುತ್ತದೆ. ಇದು ಆತಂಕ ಮತ್ತ ಒತ್ತಡ ನಿವಾರಕ. ಇದು ದೇಹದಲ್ಲಿ ಸೆರೋಟಿನಿನ್ ಪ್ರಮಾಣ ಹೆಚ್ಚಿಸಿ ಆತಂಕ ದೂರ ಮಾಡುತ್ತದೆ. ಅರಶಿನದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ.
undefined
ಧಾನ್ಯಗಳು:ನಿಮ್ಮ ಮೂಡ್ ಹಾಗೂ ಒತ್ತಡವನ್ನು ನಿರ್ಧರಿಸುವ ಸೆರೋಟಿನ್ಅಂಶವನ್ನು ಹೆಚ್ಚಿಸಲು ಕಾರ್ಬೋ ಹೈಡ್ರೇಟ್‌ಗಳು ಬೇಕು. ಧಾನ್ಯಗಳನ್ನು ನಮ್ಮ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿ ಸೆರೋಟಿನ್ ಅಂಶ ಹೆಚ್ಚಾಗುತ್ತದೆ. ಸಿಹಿ ಗೆಣಸು, ಧಾನ್ಯಗಳಲ್ಲಿ ಈ ಅಂಶ ಹೆಚ್ಚಾಗಿರುತ್ತದೆ. ನೀವು ಸೇವಿಸುವ ಧಾನ್ಯ ಆರೋಗ್ಯಕರ ಮತ್ತು ರಿಫೈನ್ಡ್ ಆಗಿರಬಾರದು.
undefined
ನಟ್ಸ್:ಬಾದಾಮಿ, ಪಿಸ್ತಾ, ವಾಲ್‌ನಟ್‌ಗಳಲ್ಲಿ ಹೆಚ್ಚಿನ ಅಗತ್ಯ ನ್ಯೂಟ್ರಿಯೆಂಟ್ಸ್ ಅಡಕವಾಗಿರುತ್ತದೆ. ವಿಟಮಿನ್ ಬಿ, ಮಾಗ್ನೀಶಿಯಂ, ವಿಟಮಿನ್ ಇ ಇವೆಲ್ಲವೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗೂ ಒತ್ತಡವನ್ನು ಸಂಭಾಳಿಸಲು ದೇಹಕ್ಕೆ ನೆರವಾಗುತ್ತದೆ.
undefined
ಪಾರ್ಸ್‌ಲೇ:ಈ ನ್ಯೂಟ್ರಿಷಿಯಸ್ ಸೊಪ್ಪು ಅನಾರೋಗ್ಯ, ಒತ್ತಡವನ್ನು ನಿವಾರಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು, ಅತಿಯಾದ ಚಿಂತೆ, ಒತ್ತಡವನ್ನು ತೊಡೆದು ಹಾಕುತ್ತದೆ
undefined
ಮಾನಸಿಕ ಒತ್ತಡ ನಿವಾರಿಸಲು ಉಪಯುಕ್ತ ಸಲಹೆಗಳು:ಈ ಮೇಲಿನ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಕ್ರಮೇಣ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ನಿರಾಶೆ ಅಥವಾ ಕೋಪ ಕಡಿಮೆ ಮಾಡಲು ನಿಮ್ಮ ನಿಲುವು, ನಿರ್ಧಾಗಳ ಮೇಲೆ ನಂಬಿಕೆ ಇಡಿ. ಮದ್ಯ ಹಾಗೂ ಧೂಪಾನ ಬೇಡ, ಜೀವನದಲ್ಲಿ ಎಲ್ಲದಕ್ಕೂ ಓಕೆ ಹೇಳಿ ಒತ್ತಡ ಹೆಚ್ಚಿಸಿಕೊಳ್ಳುವ ಬದಲು ಕೆಲವೊಂದು ಕಡೆ ನೋ ಹೇಳುವುದನ್ನು ಅಭ್ಯಾಸ ಮಾಡಿ.
undefined
click me!