ತೂಕ ಇಳಿಸಲು ಸಹಾಯಕವಾದ ಪ್ರೋಟೀನ್ ಯುಕ್ತ ಏಳು ಆಹಾರಗಳು
ತೂಕ ಇಳಿಸಲು ಸೋಯಾ ಒಳ್ಳೆಯ ಆಹಾರ. ಇದರಲ್ಲಿ ದೇಹಕ್ಕೆ ಬೇಕಾದ ಪ್ರೋಟೀನ್ ಅಂಶಗಳು ಹೇರಳವಾಗಿವೆ.
ಬೇಳೆಕಾಳುಗಳಲ್ಲಿ ಪ್ರೋಟೀನ್ ಹೇರಳವಾಗಿದೆ. ಒಂದು ಕಪ್ ಬೇಯಿಸಿದ ಬೇಳೆಯಲ್ಲಿ ಸುಮಾರು 17-18 ಗ್ರಾಂ ಪ್ರೋಟೀನ್ ಇರುತ್ತದೆ. ಬೇಳೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ತೂಕ ಇಳಿಸಲು ಕಡಲೆ ಒಳ್ಳೆಯದು. 100 ಗ್ರಾಂ ಕಡಲೆಯಲ್ಲಿ ಸುಮಾರು 19 ಗ್ರಾಂ ಪ್ರೋಟೀನ್ ಇದೆ.
ಓಟ್ಸ್ ನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಆರೋಗ್ಯಕರ. ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಸ್ಮೂಥಿ, ಇಡ್ಲಿ, ದೋಸೆಗಳಲ್ಲಿ ಬಳಸಬಹುದು.
ದಿನಾ ಒಂದು ಹಿಡಿ ನೆನೆಸಿದ ಬೀಜಗಳನ್ನು ತಿನ್ನುವುದು ತೂಕ ಇಳಿಸಲು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ತೂಕ ಇಳಿಸಲು ಚಿಕನ್ ಬ್ರೆಸ್ಟ್ ಒಳ್ಳೆಯ ಆಯ್ಕೆ. ಇದರಲ್ಲಿ ಪ್ರೋಟೀನ್ ಹೆಚ್ಚು ಮತ್ತು ಕೊಬ್ಬು ಕಡಿಮೆ. 100 ಗ್ರಾಂನಲ್ಲಿ ಸುಮಾರು 31 ಗ್ರಾಂ ಪ್ರೋಟೀನ್ ಇದೆ.
Ravi Janekal