ಪ್ರತಿ ವರ್ಷ ಅದೇ ಚಿಕನ್ ಗ್ರೇವಿನಾ? ಟ್ರೈ ಮಾಡಿ ಐದು ಬಗೆಯ ರುಚಿಕರ ಡ್ರೈ ಚಿಕನ್ ರೆಸಿಪಿ

Published : Feb 25, 2026, 02:15 PM IST

ಈ ಹೋಳಿ ಹಬ್ಬಕ್ಕೆ, ಪೂರಿ ಜೊತೆ ಸವಿಯಲು ಸದಾ ಮಾಡುವ ಚಿಕನ್ ಗ್ರೇವಿಗೆ ಗುಡ್‌ಬೈ ಹೇಳಿ. ಬದಲಿಗೆ, ಈ 5 ರುಚಿಕರವಾದ ಡ್ರೈ ಚಿಕನ್ ರೆಸಿಪಿಗಳನ್ನು ಟ್ರೈ ಮಾಡಿ. ಕಾಳುಮೆಣಸು, ಬೆಳ್ಳುಳ್ಳಿ, ದೇಸಿ ಮಸಾಲಾ, ನಿಂಬೆ-ಕೊತ್ತಂಬರಿ ಮತ್ತು ಸ್ಪೈಸಿ ಸ್ಟೈಲ್ - ಈ ಎಲ್ಲಾ ರೆಸಿಪಿಗಳು ಮಾಡಲು ತುಂಬಾ ಸುಲಭ.

PREV
16
ಹೋಳಿ ಪಾರ್ಟಿಗೆ ಬೆಸ್ಟ್ ನಾನ್‌ವೆಜ್ ಆಯ್ಕೆ
ಹೋಳಿ ಬರೀ ಬಣ್ಣಗಳ ಹಬ್ಬವಲ್ಲ, ರುಚಿಗಳ ಹಬ್ಬವೂ ಹೌದು. ಪ್ರತಿ ಮನೆಯಲ್ಲೂ ಪೂರಿ ಮಾಡುತ್ತಾರೆ. ಆದರೆ, ಇದರ ಜೊತೆ ಸಾಮಾನ್ಯ ಗ್ರೇವಿ ಚಿಕನ್‌ ಬದಲು, ಸ್ವಲ್ಪ ಮಸಾಲೆಯುಕ್ತ ಡ್ರೈ ಚಿಕನ್ ಇದ್ದರೆ ಮಜಾನೇ ಬೇರೆ. ಈ ಹೋಳಿಗೆ ನಿಮ್ಮ ಮೆನುವನ್ನು ವಿಶೇಷವಾಗಿಸಲು, ಮಾಡಲು ಸುಲಭ ಹಾಗೂ ತಿನ್ನಲು ರುಚಿಕರವಾದ ಈ 5 ಬಗೆಯ ಡ್ರೈ ಚಿಕನ್ ಟ್ರೈ ಮಾಡಿ.
26
ಸ್ಪೈಸಿ ಬ್ಲ್ಯಾಕ್ ಪೆಪ್ಪರ್ ಡ್ರೈ ಚಿಕನ್

ನಿಮಗೆ ಸ್ವಲ್ಪ ಖಾರ, ಆದರೆ ರುಚಿಕರವಾದ ಚಿಕನ್ ಇಷ್ಟವಾದರೆ, ಬ್ಲ್ಯಾಕ್ ಪೆಪ್ಪರ್ ಡ್ರೈ ಚಿಕನ್ ಸರಿಯಾದ ಆಯ್ಕೆ. ಇದು ಪೂರಿ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.

ಮಾಡುವುದು ಹೇಗೆ? 

ಚಿಕನ್‌ಗೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕುಟ್ಟಿದ ಕಾಳುಮೆಣಸು, ಉಪ್ಪು ಮತ್ತು ಸ್ವಲ್ಪ ನಿಂಬೆರಸ ಸೇರಿಸಿ ಮ್ಯಾರಿನೇಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈರುಳ್ಳಿ ಹುರಿದು, ನಂತರ ಚಿಕನ್ ಸೇರಿಸಿ. ನೀರು ಆರೋವರೆಗೂ ದೊಡ್ಡ ಉರಿಯಲ್ಲಿ ಬೇಯಿಸಿ. ಕೊನೆಗೆ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.

36
ಗಾರ್ಲಿಕ್ ಡ್ರೈ ಚಿಕನ್

ಬೆಳ್ಳುಳ್ಳಿಯ ಸುವಾಸನೆ ಮತ್ತು ಭಾರತೀಯ ಮಸಾಲೆಗಳ ಸಂಯೋಜನೆ ಈ ಡ್ರೈ ಚಿಕನ್‌ ಅನ್ನು ಬಹಳ ವಿಶೇಷವಾಗಿಸುತ್ತದೆ. ಹೋಳಿ ಹಬ್ಬದಂದು ಅತಿಥಿಗಳಿಗೆ ಈ ರೆಸಿಪಿ ತುಂಬಾ ಇಷ್ಟವಾಗುತ್ತದೆ. 

ಮಾಡುವುದು ಹೇಗೆ?

ಚಿಕನ್‌ಗೆ ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಬೆರೆಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಹೆಚ್ಚಿದ ಬೆಳ್ಳುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಚಿಕನ್ ಸೇರಿಸಿ ದೊಡ್ಡ ಉರಿಯಲ್ಲಿ ಫ್ರೈ ಮಾಡಿ. ಸ್ವಲ್ಪ ಗರಂ ಮಸಾಲಾ ಮತ್ತು ನಿಂಬೆ ರಸ ಸೇರಿಸಿ. ಚಿಕನ್ ಸಂಪೂರ್ಣವಾಗಿ ಡ್ರೈ ಆದಾಗ, ಉರಿ ಆಫ್ ಮಾಡಿ.

46
ದೇಸಿ ಮಸಾಲಾ ಡ್ರೈ ಚಿಕನ್

ಸಾಂಪ್ರದಾಯಿಕ ಭಾರತೀಯ ರುಚಿಗಳನ್ನು ಇಷ್ಟಪಡುವವರಿಗಾಗಿ ಈ ರೆಸಿಪಿ ಹೇಳಿ ಮಾಡಿಸಿದ್ದು. ಇದು ಪೂರಿ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ.

 ಮಾಡುವುದು ಹೇಗೆ?

 ಚಿಕನ್‌ಗೆ ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಸಾಸಿವೆ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿ. ಬಾಣಲೆಯಲ್ಲಿ ಈರುಳ್ಳಿ ಹುರಿದು, ನಂತರ ಚಿಕನ್ ಸೇರಿಸಿ. ಮುಚ್ಚಳ ಮುಚ್ಚಿ ಬೇಯಿಸಿ, ನಂತರ ಮುಚ್ಚಳ ತೆಗೆದು ನೀರು ಆರೋವರೆಗೂ ಫ್ರೈ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.

56
ನಿಂಬೆ ಮತ್ತು ಪುದೀನಾ ಡ್ರೈ ಚಿಕನ್

ಹೋಳಿ ಹಬ್ಬಕ್ಕೆ ಏನಾದರೂ ಹಗುರವಾದ ಮತ್ತು ಫ್ರೆಶ್ ಆದ ಅಡುಗೆ ಟ್ರೈ ಮಾಡಬೇಕೆಂದರೆ, ಈ ಡ್ರೈ ಚಿಕನ್ ಸೂಕ್ತವಾಗಿದೆ. ಇದರ ಹುಳಿ ರುಚಿ ಪೂರಿ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. 

ಮಾಡುವುದು ಹೇಗೆ?

ಚಿಕನ್‌ಗೆ ಉಪ್ಪು, ಕಾಳುಮೆಣಸು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಚಿಕನ್ ಬೆಂದು ನೀರು ಆರಿದ ನಂತರ, ಉರಿ ಆಫ್ ಮಾಡಿ ನಿಂಬೆ ರಸ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಸರ್ವ್ ಮಾಡಿ.

66
ಹೋಳಿ ಸ್ಪೆಷಲ್ ಸ್ಪೈಸಿ ಡ್ರೈ ಚಿಕನ್

ಈ ರೆಸಿಪಿ ಖಾರ ತಿನ್ನುವವರಿಗಾಗಿಯೇ ಇದೆ. ಇದರ ಸ್ಪೈಸಿ ರುಚಿ, ಬಣ್ಣಗಳ ಹಬ್ಬವಾದ ಹೋಳಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. 

ಮಾಡುವುದು ಹೇಗೆ?

 ಚಿಕನ್‌ಗೆ ಮೊಸರು, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಸ್ವಲ್ಪ ವಿನೆಗರ್ ಸೇರಿಸಿ ಮ್ಯಾರಿನೇಟ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಈರುಳ್ಳಿ ಹುರಿದು, ಚಿಕನ್ ಸೇರಿಸಿ ದೊಡ್ಡ ಉರಿಯಲ್ಲಿ ಬೇಯಿಸಿ. ಚಿಕನ್ ಸಂಪೂರ್ಣವಾಗಿ ಡ್ರೈ ಆದಾಗ, ಮೇಲೆ ಚಾಟ್ ಮಸಾಲಾ ಉದುರಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories