ಶಿವನನ್ನು ಮೆಚ್ಚಿಸಲು ನಾಗರಪಂಚಮಿಯಂದು ಈ ಕೆಲಸ ಮಾಡಿ

First Published Aug 3, 2023, 4:55 PM IST

ಹಿಂದೂ ಧರ್ಮದಲ್ಲಿ ನಾಗರ ಪಂಚಮಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನಾಗರ ಪಂಚಮಿಯ ದಿನದಂದು, ಸರ್ಪಗಳನ್ನು ಪೂಜಿಸಲಾಗುತ್ತೆ. ಈ ದಿನ ಸರ್ಪಗಳನ್ನು ಪೂಜಿಸುವ ಮೂಲಕ ಅವುಗಳನ್ನು ಸಹ ದೇವರ ಮಾನ್ಯತೆ ನೀಡಲಾಗುತ್ತೆ. 
 

ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ, ಸರ್ಪಗಳನ್ನು ಪೂಜಿಸುವುದು ಮತ್ತು ಉಪವಾಸವನ್ನು (fasting) ಆಚರಿಸುವುದು ಬಹಳ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕರಾವಳಿ ಕಡೆಗಳಲ್ಲಿ ನಾಗರಪಂಚಮಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತೆ. ಸರ್ಪಗಳ ಪೂಜೆಯಿಂದ ಶಿವನು ಸಂತೋಷಪಡುತ್ತಾನೆ ಎಂದು ನಂಬಲಾಗಿದೆ.
 

ನಾಗರ ಪಂಚಮಿಯ (Nag Panchami) ದಿನದಂದು ಕೆಲವು ಕ್ರಮಗಳನ್ನು ತೆಗೆದುಕೊಂಡರೆ ಶಿವ ಕೂಡ ಸಂತೋಷಪಡುತ್ತಾನೆ ಎಂದು ಹೇಳಲಾಗುತ್ತೆ. ಹಾಗಿದ್ರೆ ಶಿವನನ್ನು ಮೆಚ್ಚಿಸಲು ನಾಗರಪಂಚಮಿ ದಿನ ಏನು ಮಾಡಬೇಕು? ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳೋಣ.
 

Latest Videos


ನಾಗ ದೇವತೆಗೆ ಹಾಲು ಅರ್ಪಿಸಿ  
ನಾಗರ ಪಂಚಮಿಯ ದಿನದಂದು, ನಾಗ ದೇವತೆಗೆ ಹಾಲು ನೀಡಬೇಕು. 
ಇದು ನಾಗ ದೇವತೆಯೊಂದಿಗೆ ಶಿವನನ್ನು ಸಂತೋಷಪಡಿಸುತ್ತದೆ. 
ನಿಜ ನಾಗನಿಗೆ ಅಲ್ಲದಿದ್ದರೂ ನಾಗನ ಮೂರ್ತಿಗೆ ಹಾಲನ್ನು (milk to snake) ಅರ್ಪಿಸಬಹುದು.

ನಾಗರ ಪಂಚಮಿ ದಿನ ಈ ಮಂತ್ರವನ್ನು ಪಠಿಸಿ  
ನಾಗರ ಪಂಚಮಿಯ ದಿನದಂದು ನಾಗ ಗಾಯತ್ರಿ ಮಂತ್ರವನ್ನು ಪಠಿಸುವುದು ಶುಭ. 
ನಾಗ ಗಾಯತ್ರಿ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಕಾಲ ಸರ್ಪ ದೋಷವೂ ನಿವಾರಣೆಯಾಗುತ್ತದೆ.

ನಾಗರ ಪಂಚಮಿಯ ದಿನದಂದು, ಮನೆಯ ಮುಖ್ಯ ದ್ವಾರದಲ್ಲಿ ನಾಗ ದೇವತೆಯ ಚಿತ್ರವನ್ನು ರಂಗೋಲಿಯಿಂದ ಬಿಡಿಸಬೇಕು. ಇದನ್ನು ಮಾಡುವುದರಿಂದ, ಮನೆಯ ವಾಸ್ತು ದೋಷ ನಿವಾರಣೆಯಾಗುತ್ತೆ ಮತ್ತು ನಕಾರಾತ್ಮಕತೆ ನಾಶವಾಗುತ್ತದೆ. ಮನೆಯಲ್ಲಿ ಪಾಸಿಟಿವಿಟಿ ಹೆಚ್ಚುತ್ತೆ.
 

ನಾಗರ ಪಂಚಮಿ ಕಥೆ ಓದಿ 
ನಾಗರ ಪಂಚಮಿಯ ಕಥೆಯನ್ನು ಓದದೆ, ಅದರ ಪೂಜೆ ಮತ್ತು ಉಪವಾಸದ ಫಲಗಳನ್ನು ಸಂಪೂರ್ಣವಾಗಿ ಪಡೆಯಲಾಗುವುದಿಲ್ಲ. ಆದ್ದರಿಂದ, ನಾಗರ ಪಂಚಮಿಯ ದಿನದಂದು, ಈ ಹಬ್ಬಕ್ಕೆ ಸಂಬಂಧಿಸಿದ ಕಥೆಯನ್ನು ಓದಬೇಕು.

click me!